Categories: ಮಂಗಳೂರು

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಸರೆ: 13 ಲಕ್ಷ ರೂ.ಗಳ ಸೊತ್ತು ವಶ

ಮಂಗಳೂರು: ಎಂಡಿಎಂಎ ಮಾದಕವಸ್ತು ಹೊಂದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಬೆಂಗಳೂರಿನಿಂದ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಅನ್ನು ಬೆಂಗಳೂರಿನಿಂದ ಖರೀದಿಸಿ ತಂದು ಮಂಗಳೂರು ನಗರದ ನೆಹರೂ ಮೈದಾನ ಪರಿಸರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ ನೇತೃತ್ವದ ಪೊಲೀಸರು ಮಂಗಳೂರು ನಗರದ ನೆಹರೂ ಮೈದಾನ ಪರಿಸರದಲ್ಲಿ ಫರಂಗಿಪೇಟೆ ಪುದು ಗ್ರಾಮದ ಅಮ್ಮೆಮಾರ್ ಮನೆ ಮಹಮ್ಮದ್ ಆಶ್ರಫ್ ಅಲಿಯಾಸ್‌ ಚೋಟಾ ಆಶ್ರಫ್(45), ಪೆರ್ಮನ್ನೂರು ಪಿಲಾರ್ ದಾರಂದಬಾಗಿಲು ಹೊಸಗದ್ದೆಯ ದಾವೂದ್ ಫರ್ವೆಝ್(36) ಅವರನ್ನು ಬಂಧಿಸಿದೆ.

ಆರೋಪಿಗಳಿಂದ 55.5 ಗ್ರಾಂ ತೂಕದ 2,77,500 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ಮೊಬೈಲ್ ಫೋನ್ ಗಳು-2, 3230 ರೂ., ಬೆಲೆನೊ ಕಾರು, ಡಿಜಿಟಲ್‌ ತೂಕ ಮಾಪನವನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ 13,06,230 ರೂ. ಎಂದು ಅಂದಾಜು ಮಾಡಲಾಗಿದೆ. ಆರೋಪಿಗಳ ಪೈಕಿ ಮೊಹಮ್ಮದ್ ಅಶ್ರಫ್ ಅಲಿಯಾಸ್‌ ಛೋಟಾ ಅಶ್ರಫ್ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ಗ್ರಾಮಾಂತರ ಠಾಣೆ ಹಾಗೂ ಬಂಟ್ವಾಳ ಠಾಣೆಯಲ್ಲಿ ಒಟ್ಟು 6 ಗಾಂಜಾ ಪ್ರಕರಣಗಳು ದಾಖಲಾಗಿದೆ.

ಇನ್ನೋರ್ವ ಆರೋಪಿ ದಾವೂದ್ ಪರ್ವೇಸ್ ವಿರುದ್ದ ಮಂಗಳೂರು ಉತ್ತರ, ಮಂಗಳೂರು ಗ್ರಾಮಾಂತರ, ಕಾರ್ಕಳ, ಉಡುಪಿ ಸೆನ್ ಪೊಲೀಸ್ ಠಾಣೆಗಳಲ್ಲಿ ಒಟ್ಟು 6 ಗಾಂಜಾ ಪ್ರಕರಣಗಳು ದಾಖಲಾಗಿದೆ.

Sneha Gowda

Recent Posts

ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕುಮಾರ್ ತ್ರಿಪಾಠಿ ಅಧಿಕಾರ ಸ್ವೀಕಾರ

ಅಡ್ಮಿರಲ್ ಆರ್. ಹರಿಕುಮಾರ್ ಸೇವೆಯಿಂದ ನಿವೃತ್ತರಾದ ಹಿನ್ನೆಲೆ ದಿನೇಶ್ ಕುಮಾರ್ ತ್ರಿಪಾಠಿ ಅವರು ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಇಂದು…

13 mins ago

ಟ್ರಕ್‌,ಬಸ್‌ ನಡುವೆ ಭೀಕರ ಅಪಘಾತ : 10 ಸಾವು, 30 ಮಂದಿಗೆ ಗಾಯ

ನಾಸಿಕ್‌ನ ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ನಡೆದಿದೆ. ಈ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದು, 30ಕ್ಕೂ…

44 mins ago

ಹೆಬ್ರಿ ಅಡಾಲ್ ಬೆಟ್ಟು ಪರಿಸರದ ಚರಂಡಿಯಲ್ಲಿ ಕೊಳಚೆ ನೀರು : ಗ್ರಾಮಸ್ಥರ ಆಕ್ರೋಶ

ಹೆಬ್ರಿ ಅಡಾಲ್ ಬೆಟ್ಟು ಶಿಶುಮಂದಿರದ ಸಮೀಪ ಇರುವ ಪರಿಸರದಲ್ಲಿ ಹಾದುಹೋದ ಚರಂಡಿಯಲ್ಲಿ ಕೊಳಚೆ ನೀರು ನಿಂತು ದುರ್ನಾಥ ಬೀರುತ್ತಿದ್ದು ಸಾಂಕ್ರಾಮಿಕ…

1 hour ago

ವಿಕಸಿತ ಭಾರತಕ್ಕಾಗಿ ಬಿಜೆಪಿ ಬೆಂಬಲಿಸಿ : ಶಿವರುದ್ರ ಬಾಗಲಕೋಟ ಮನವಿ

ವಿಶ್ವನಾಯಕ, ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿರುವ ವಿಕಸಿತ ಭಾರತ ನಿರ್ಮಾಣಕ್ಕಾಗಿ ಜಿಲ್ಲೆಯ ಮತದಾರರು ಈ ಸಲವೂ ಬಿಜೆಪಿಯ ಕೈ…

1 hour ago

ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾದ 15 ಆಟಗಾರರ ಬಲಿಷ್ಠ ತಂಡ ಪ್ರಕಟ

2024ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ರೋಹಿತ್ ಶರ್ಮಾ…

1 hour ago

ದೆಹಲಿ ‘ಕೈ’ ಅಧ್ಯಕ್ಷ ಸ್ಥಾನಕ್ಕೆ ದೇವೆಂದರ್ ಯಾದವ್ ನೇಮಕ

ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯ (ಡಿಪಿಸಿಸಿ) ಅಧ್ಯಕ್ಷರನ್ನಾಗಿ ದೇವೇಂದ್ರ ಯಾದವ್ ಅವರನ್ನು ನೇಮಕ ಮಾಡಿ ಹೈಕಮಾಂಡ್ ಇಂದು ಆದೇಶ ಹೊರಡಿಸಿದೆ.

1 hour ago