Categories: ಮಂಗಳೂರು

ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನಲ್ಲಿ ಬಿರುಸಿನ ಮತದಾನ

ಕಡಬ: ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನಲ್ಲಿ ಮುಂಜಾನೆಯಿಂದಲೇ ಬಿರುಸಿನ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.
ಅಲ್ಲಲ್ಲಿ ಮತಯಂತ್ರ ಕೆಟ್ಟು ಹೋಗಿ ಮತದಾನ ಸ್ವಲ್ಪ ಮಟ್ಟಿನ‌ ವಿಳಂಬವಾಗಿತ್ತು.

ಕೊಯಿಲ ಗ್ರಾಮದ ಸಬಳೂರು ಸರಕಾರಿ ಶಾಲೆಯಲ್ಲಿನ ಮತಕೇಂದ್ರದಲ್ಲಿ ಮತಯಂತ್ರ ಕೈಕೊಟ್ಟು ಸುಮಾರು ಅರ್ಧ ಗಂಟೆ ಹೊತ್ತು ಮತದಾರರು ಹಾಗೂ ಮತಗಟ್ಟೆಯ ಅಧಿಕಾರಿಗಳು ಚಡಪಡಿಸುವಂತಾಗಿತ್ತು. ಮತದಾನ ಮಾಡಲು ಬಂದವರ ಸರತಿ ಸಾಲು ಹನುಮಂತನ ಬಾಲದಂತೆ ಉದ್ದವಾಗುತ್ತಾ ಹೊಯಿತು. ಮತಯಂತ್ರ ದುರಸ್ತಿಯಾದ ಬಳಿಕ ಮತದಾನ ಸಲೀಸಾಗಿ ನಡೆಯಿತು, ಇದೇ ಪರಿಸ್ಥಿತಿ ತಾಲೂಕಿನ ಬಲ್ಯ ಗ್ರಾಮದ ಬಲ್ಯ ಮತಗಟ್ಟೆ ಸಂಖ್ಯೆ 50 ರಲ್ಲಿ ಕೂಡಾ ಸಂಭವಿಸಿ ಸ್ವಲ್ಪ ಹೊತ್ತು ಮತದಾನ ಸ್ಥಗಿತಗೊಂಡಿತ್ತು. ರಾಮಕುಂಜ ಗ್ರಾಮದ ರಾಮಕುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಕಡಬ ಸರಕಾರಿ ಪ್ರೌಢ ಶಾಲೆ ಹಾಗು ಇನ್ನಿತರ ಕೆಲವು ಬೂತ್ ಗಳಲ್ಲಿ ಮತಯಂತ್ರ ಕೆಟ್ಟು ಮತದಾನಕ್ಕೆ ಸಂಚಿಕಾರ ಉಂಟಾಗಿತ್ತು.

ಒಬ್ಬರ ಮತವನ್ನು ಇನ್ನೊಬ್ಬರಿಂದ ಚಲಾವಣೆ,ಗೊಂದಲ: ಕಡಬ ತಾಲೂಕಿನ‌ 102 ನೆಕ್ಕಿಲಾಡಿ ಗ್ರಾಮದ ಕರ್ಮಾಯಿ ಶಾಲಾ 101 ನೇ ಮತಗಟ್ಟೆಯಲ್ಲಿ ಸಾದಿಕ್ ಎಂಬವರು ಸಾದಿಕ್ ಕೆ ಎಂಬವರ ಮತವನ್ನು ಚಲಾಯಿಸಿದ್ದರು. ಇಬ್ಬರ ತಂದೆಯ ಹೆಸರು ಅಬೂಬ್ ಕರ್ ಆಗಿರುವುದರಿಂದ ಅಧಿಕಾರಿಗಳು ಗಲಬಿಲಿಗೊಂಡರು. ಮತಗಟ್ಟೆಯ ಅಧಿಕಾರಿಗಳ ಎಡವಟ್ಟಿನಿಂದ ಈ ಪ್ರಮಾದ ನಡೆದಿದ್ದು. ಸಾಧಿಕ್ ಕೆ ಎಂಬವರಿಗೆ ಮತದಾನದ ಅವಕಾಶ ಇಲ್ಲದಂತಾಯಿತು. ಈ ಸಂದರ್ಭದಲ್ಲಿ ಮಾತಿನ ಚಕಮುಖಿ ವಾಗ್ಯುದ್ದ ನಡೆಯಿತು. ಎಷ್ಟೇ ಚರ್ಚೆ ನಡೆದರು ಸಾದಿಕ್ ಕೆ ಅವರಿಗೆ ಮತದಾನ ಮಾಡಲು ನಿರಾಕರಿಸಲಾಯಿತು. ಇದರಿಂದಾಗ ಗೊಂದಲ‌ಸೃಷ್ಟಡಿಯಾಯಿತು.

ಆಶಾ ತಿಮ್ಮಪ್ಪ ಮತದಾನ: ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ತಿ ಆಶಾ ತಿಮ್ಮಪ್ಪ ಗೌಡ ಅವರು ಕುಂತೂರಿನ ಮತಗಟ್ಟೆಯಲ್ಲಿ ಮತಚಲಾಯಿದರು. ವಿಶೇಷವೆಂದರೆ ಇದೇ ಮತಗಟ್ಟೆಯಲ್ಲಿ ಆಶಾ ತಿಮ್ಮಪ್ಪ ಕಳೆದ ಕೆಲವು ವರ್ಷಗಳಿಂದ ಪ್ರಥಮ ಮತವನ್ನು‌ ತಾನೆ ಹಾಕುತ್ತಾ ಬಂದಿದ್ದಾರೆ. ಈ ಪರಂಪರೆ ಇವತ್ತೂ ಕೂಡ ಮುಂದುವರಿಯಿತು.

ಕೃಷ್ಣಪ್ಪ ರಾಮಕುಂಜದಲ್ಲಿ ಮತದಾನ: ಸುಳ್ಯ ವಿಧಾನಸನಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಜಿ ರಾಮಕುಂಜದ ಸರಕಾರಿ ಶಾಲಾ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಇದಕ್ಕೂ ಮುನ್ನ ಅವರ ಶ್ರೀ ರಾಮಕುಂಜೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕಮಲಕ್ಕನ‌ ಮತ ಕಮಲಕ್ಕೆ: ಸವಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 70 ರಲ್ಲಿ ಪ್ರಥಮ ಮತದಾನ ಮಾಡಿದ ಕಮಲ ಎಂಬ ಮಹಿಳೆ ಕಮಲ ಚಿಹ್ನೆಗೆ ಮತದಾನ‌ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

Ashika S

Recent Posts

ಆಮ್ ಆದ್ಮಿ ಪಕ್ಷಕ್ಕೆ 7 ಕೋಟಿ ರೂ ವಿದೇಶಿ ಫಂಡಿಂಗ್: ತನಿಖೆ ಕೋರಿ ಗೃಹ ಸಚಿವಾಲಯಕ್ಕೆ ಇಡಿ ಪತ್ರ

ಆಮ್ ಆದ್ಮಿ ಪಕ್ಷಕ್ಕೆ  ವಿದೇಶಿ ಮೂಲಗಳಿಂದ 7 ಕೋಟಿ ರೂ.ಗೂ ಹೆಚ್ಚು ದೇಣಿಗೆ ಸಿಕ್ಕಿರುವ ಬಗ್ಗೆ ಎಫ್‌ಸಿಆರ್‌ಎ ತನಿಖೆಯನ್ನು ಕೋರಿ…

59 mins ago

ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಸಾವು

ಕೆರೆಯ ಬಳಿ ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ-ವಿಭಾಗ…

1 hour ago

ಕಾಂಗ್ರೆಸ್ ಸರ್ಕಾರದ ಒಂದು ವರ್ಷ, ಕೊಲೆಗಡುಕರಿಗೆ ಹರ್ಷ: ಲೇವಡಿ ಮಾಡಿದ ಆರ್.‌ ಅಶೋಕ್‌

ಒಂದು ವರ್ಷ ಅಧಿಕಾರ ಪೂರೈಸುವ ಹೊತ್ತಿಗೆ ನೂರೊಂದು ಸಮಸ್ಯೆಗಳನ್ನು ತಂದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ರಾಜ್ಯ ಸರ್ಕಾರದ…

2 hours ago

ಚಿಕ್ಕಮಗಳೂರು: ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್ ವಿತರಣೆ

ಆಕಸ್ಮಿಕವಾಗಿ ಸಂಭವಿಸುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊ ಳ್ಳುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು…

2 hours ago

ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ನಿಲ್ಲಿಸಿ ಪರಿಹಾರ ನೀಡಿ: ರಮೇಶ ಹೂಗಾರ ಮನವಿ

ರಾಜ್ಯದಲ್ಲಿ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರಕಾರ ಅಲ್ಪ ಮಟ್ಟಿಗೆ ಪರಿಹಾರ ನೀಡಿ ನಿಟ್ಟುಸಿರು ಬಿಡುವಂತೆ ಮಾಡಿದೆ.ಆದರೆ ಅಫಜಲಪುರ…

2 hours ago

ಅಂಜಲಿ ಕೊಲೆ ಪ್ರಕರಣ ಸಿಐಡಿಗೆ, ನೇಹಾ ಕೇಸ್​ ಸಿಬಿಐಗೆ ಕೊಡಲ್ಲ: ಗೃಹ ಸಚಿವ

ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ…

2 hours ago