News Karnataka Kannada
Friday, April 12 2024
Cricket
ಮಂಗಳೂರು

ದ.ಕನ್ನಡದಲ್ಲಿ ಈ ಬಾರಿ 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದೆ ಗೆಲ್ಲುತ್ತೇವೆ: ಸತೀಶ್‌ ಕುಂಪಲ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಭಾರಿ ದೊಡ್ಡ ಪ್ರಮಾಣದಲ್ಲಿ ಮುನ್ನಡೆ ಒದಗಿಸಿಕೊಡುವ ಭರವಸೆಯನ್ನು ಪುತ್ತೂರು ಕ್ಷೇತ್ರದ ಎಲ್ಲಾ ಕಾರ್ಯಕರ್ತರು ನೀಡಿದ್ದಾರೆ. ಈ ಕಾರಣದಿಂದ ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದೆ ಗೆಲ್ಲುತ್ತೇವೆ. ಮರಳಿ ಪ್ರಧಾನಿ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.
Photo Credit : News Kannada

ಪುತ್ತೂರು:  ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಭಾರಿ ದೊಡ್ಡ ಪ್ರಮಾಣದಲ್ಲಿ ಮುನ್ನಡೆ ಒದಗಿಸಿಕೊಡುವ ಭರವಸೆಯನ್ನು ಪುತ್ತೂರು ಕ್ಷೇತ್ರದ ಎಲ್ಲಾ ಕಾರ್ಯಕರ್ತರು ನೀಡಿದ್ದಾರೆ. ಈ ಕಾರಣದಿಂದ ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದೆ ಗೆಲ್ಲುತ್ತೇವೆ. ಮರಳಿ ಪ್ರಧಾನಿ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ಬಿಜೆಪಿ ಪುತ್ತೂರು ಮಂಡಲದ ವತಿಯಿಂದ ಸೋಮವಾರ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ನಡೆದ ಗ್ರಾಮ ಚಲೋ ಕಾರ್ಯಾಗಾರವನ್ನು ಅವರು ಉದ್ಘಾಟಿಸಿದರು.

ಲೋಕಸಭಾ ಚುನಾವಣೆಗೆ  ಸಂಬಂಧಿಸಿದಂತೆ   ಇನ್ನು ಮೂರು ನಾಲ್ಕು ದಿನಗಳಲ್ಲಿ ನಮ್ಮ ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಣೆ ಆಗಲಿದೆ. ನಮ್ಮ ಮನಸ್ಸು ಗಟ್ಟಿ ಇರಲಿ ಎಂದ ಜಿಲ್ಲಾಧ್ಯಕ್ಷರು ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕೆಂಬ ಹಿನ್ನೆಲೆಯಲ್ಲಿ ಸಾಕಷ್ಟು ಶ್ರಮಪಟ್ಟ ಬಳಿಕ ಅವರು ಪ್ರಧಾನಿಯಾಗಿ 10 ವರ್ಷ ಪೂರ್ಣಗೊಳಿಸಿದ್ದಾರೆ.  ಮತ್ತೆ 2024ನೇ ಸಾಲಿನಲ್ಲಿ ಅವರು ಪ್ರಧಾನ ಮಂತ್ರಿಯಾಗಬೇಕು. ಉತ್ಸಾಹದಿಂದ ಕೆಲಸ ಮಾಡುವ ಕುರಿತು ಪುತ್ತೂರಿನಿಂದ ತುಂಬಾ ಮಂದಿ ಫೋನ್ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯನ್ನು ಈ ಬಾರಿ ಅತ್ಯಂತ ಯಶಸ್ವಿಯಾಗಿ ದೊಡ್ಡ ಪ್ರಮಾಣದಲ್ಲಿ ಲೀಡ್ ಕೊಡುವಂತಹ ಕೆಲಸವನ್ನು ಪುತ್ತೂರಿನಲ್ಲಿ ಮಾಡುತ್ತೇವೆ ಎಂದು ಎಲ್ಲಾ ಕಾರ್ಯಕರ್ತರು ಹೇಳಿದ್ದಾರೆ ಎಂದರು.
ಗ್ರಾಮ ಚಲೋ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಬೇಕು. ಬೂತ್, ಮತದಾರರ ಪಟ್ಟಿ ಪರಿಶೀಲನೆ, ಗೋಡೆಬರಹ, ಶಕ್ತಿವಂದನ ಕಾರ್ಯಕ್ರಮಗಳು    ನಾಲ್ಕೈದು  ದಿನಗಳೊಳಗೆ ಮುಗಿಸಬೇಕು. ಇನ್ನು ಕೆಲವೇ ದಿನದಲ್ಲಿ ಚುನಾವಣೆ ಘೋಷಣೆಯಾಗುತ್ತದೆ. ಪುತ್ತೂರಿನಲ್ಲಿ ನಿಮ್ಮೊಳಗಿರುವ ಆತಂಕದ ವಾತಾವರಣ, ಗೊಂದಲ ಬಿಟ್ಟು ಚುನಾವಣೆಯ ಉತ್ಸಾಹ ಮೈಗೂಡಿಸಿಕೊಳ್ಳಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ರಾಷ್ಟ್ರೀಯ  ವಿಚಾರಧಾರೆ, ಮೋದಿಗಾಗಿ
ಈ ಚುನಾವಣೆ ಒಂದು ರಾಷ್ಟ್ರೀಯ ಚುನಾವಣೆ. ರಾಷ್ಟ್ರೀಯ ವಿಚಾರಧಾರೆ ಮತ್ತು ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿ ಮಾಡಬೇಕೆಂಬ ನಿಟ್ಟಿನಲ್ಲಿ ಈ ಚುನಾವಣೆ ನಡೆಯಲಿದೆ. ವಿಶ್ವಕ್ಕೆ ನಾಯಕತ್ವ ಕೊಟ್ಟ ನರೇಂದ್ರ ಮೋದಿಯವರು ರಾಷ್ಟ್ರೀಯ ವಿಚಾರಕ್ಕೆ ಒತ್ತು ಕೊಟ್ಟು ಕೆಲಸ ಮಾಡಿದ್ದಾರೆ. ಬಿಜೆಪಿಯು ಯಾವ ದಿಕ್ಕಿನಲ್ಲಿ ಹೋಗಬೇಕೋ ಆ ದಿಕ್ಕಿನಲ್ಲಿ ಸಾಗಿ ಕೆಲಸ ಕಾರ್ಯ ಮಾಡಿದ ಓರ್ವ ಸಮರ್ಥ ಪ್ರಧಾನಿ ನರೇಂದ್ರ ಮೋದಿ. ಮೋದಿಯವರ ಎಷ್ಟೋ ವರ್ಷಗಳ ರಾಮಮಂದಿರ ಕನಸು, ರಾಷ್ಟ್ರೀಯ ವಿಚಾರ ಮತ್ತು ಭಾವನಾತ್ಮಕ ವಿಚಾರದ ಕುರಿತು ಪಕ್ಷ ಏನು ಯೋಚನೆ ಮಾಡಿತೋ ಅದನ್ನು ಸಾರ್ಥಕ ಮಾಡಿದವರು. ಆ ಕಾರಣಕ್ಕಾಗಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂದು ಸತೀಶ್ ಕುಂಪಲ ಹೇಳಿದರು.

ಪುತ್ತೂರಿನಲ್ಲಿ ಅಧ್ಯಕ್ಷರ ಘೋಷಣೆ ಆಗಿಲ್ಲ, ಕ್ಷೇತ್ರಮಟ್ಟದ ತಂಡ ಘೋಷಣೆ ಆಗಿಲ್ಲ ಎಂದು ಕಾರ್ಯಕರ್ತರ  ಮನಸ್ಸಿನಲ್ಲಿ ಇರಬಹುದು. ಆದರೆ ರಾಜ್ಯದಲ್ಲಿ10 ಕಡೆ ಜಿಲ್ಲಾಧ್ಯಕ್ಷರನ್ನೇ ಘೋಷಣೆ ಮಾಡಿ ಆಗಿಲ್ಲ. ಈಗಿರುವ ತಂಡವೇ ಅಲ್ಲಿ ಕೆಲಸ ಮಾಡುತ್ತಿದೆ. ಪುತ್ತೂರಿನಲ್ಲೂ ಇದ್ದಂತಹ ತಂಡವೇ ಕೆಲಸ ಮಾಡಬೇಕೆಂದು ರಾಜ್ಯ ನಾಯಕರ ಅಪೇಕ್ಷೆಯಂತೆ ತಂಡವನ್ನು ಮುಂದುವರಿಸಿದ್ದಾರೆ ಹೊರತು ಬೇರೆ ಯಾವುದೇ ಕಾರಣಕ್ಕೂ ಹೊಸ ಸಮಿತಿ ಘೋಷಣೆ ಮಾಡದೆ ಇರುವುದಲ್ಲ. ಈ ಸಮಿತಿಯ ಅನುಭವದ ಆಧಾರದ ಮೇಲೆ ಮುಂದೆ ಚುನಾವಣೆಯ ಕೆಲಸ ಕಾರ್ಯ ನಡೆಯಲಿದೆ. ಪದಾಧಿಕಾರಿ ಇಲ್ಲದಿದ್ದರೂ ಬಿಜೆಪಿ ಕೆಲಸ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ನಾವು ಮಾಡುತ್ತೇವೆ ಎಂದು ಎಲ್ಲರು ಉತ್ಸಾಹದಿಂದ ಕೆಲಸ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು ಪುತ್ತೂರು ಉಸ್ತುವಾರಿಯಾಗಿರುವ ಪ್ರೇಮಾನಂದ್, ಜಿಲ್ಲೆಯ ಉಪಾಧ್ಯಕ್ಷರಾಗಿರು ಪುತ್ತೂರು ಮಂಡಲದ ಪ್ರಭಾರಿ ಸುನಿಲ್ ಆಳ್ವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರುವಾರು, ಇನ್ನೋರ್ವ ಪ್ರಧಾನ ಕಾರ್ಯದರ್ಶಿ ಕಿಶೋರ್ ಬೊಟ್ಯಾಡಿ, ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ವಿಕಾಸ್ ಪುತ್ತೂರು, ಜಿಲ್ಲಾ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾ ಕಾರ್ಯದರ್ಶಿ ಆರ್.ಸಿ ನಾರಾಯಣ, ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ, ಬಿಜೆಪಿ ಪುತ್ತೂರು ಚುನಾವಣಾ ಉಸ್ತುವಾರಿ ಸುಲೋಚನಾ ಭಟ್,ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ,ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರದ ಪ್ರಮುಖರು, ಬೂತ್ ಉಸ್ತುವಾರಿ ಅಧ್ಯಕ್ಷರುಗಳು ಸಭೆಯಲ್ಲಿ ಪಾಲ್ಗೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು