ಮಂಗಳೂರು

ಬಿಜೆಪಿಯ ಬಹುಮತದ ಸ್ಥಿರ ಸರಕಾರವೇ ರಚನೆಯಾಗಲಿದೆ: ಪ್ರತಾಪಸಿಂಹ ನಾಯಕ್‌

ಬೆಳ್ತಂಗಡಿ: ಇದುವರೆಗಿನ ಅಸ್ಥಿರ ಸರಕಾರಗಳಿಗೆ ಕಾಂಗ್ರೆಸ್‌ ಜೆಡಿಎಸ್‌ ಕಾರಣ. ಹೀಗಾಗಿ ಈ ಬಾರಿ ರಾಜ್ಯದ ಜನತೆಯ ಬಯಕೆಯಂತೆ ಬಿಜೆಪಿಯ ಬಹುಮತದ ಸ್ಥಿರ ಸರಕಾರವೇ ರಚನೆಯಾಗಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅವರು ಮೆ ೧ ರಂದು ಬೆಳ್ತಂಗಡಿಯ ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ಬಾರಿ ಪಕ್ಷವು ಮುಂದಿನ ೨೫ ವರ್ಷಗಳ ವಿಕಾಸದ ಗುರಿಯನ್ನು ಇಟ್ಟುಕೊಂಡಿದೆ. ಅಭಿವೃದ್ಧಿಯನ್ನು ಸವಾಲಾಗಿ ಸ್ವೀಕರಿಸಿದೆ. ಕಳೆದ ೨೦ ವರ್ಷಗಳಿಂದ ರಾಜ್ಯದಲ್ಲಿ ಬಹುಮತವಿಲ್ಲದ ಪಕ್ಷಗಳು ಅಧಿಕಾರಕ್ಕೇರಿ ಗೊಂದಲದ, ರಾಜಕೀಯದ ನಾಟಕವನ್ನು ಆಡಿದ್ದಾರೆ. ಅಸ್ಥಿರ ಸರಕಾರ ಬಂದರೆ ಅಭಿವೃದ್ಧಿಗೆ ತಡೆಯಾಗುತ್ತದೆ. ಬಹುಮತದ ವ್ಯತ್ಯಾಸದಿಂದ ಅಭಿವೃದ್ಧಿ ಗೊಂದಲವಾಗುತ್ತದೆ. ಇಂತಹ ವೈಪರಿತ್ಯಗಳಿಗೆ ಕಾಂಗ್ರೆಸ್‌ , ಜೆಡಿಎಸ್‌ ಪಕ್ಷಗಳೇ ಕಾರಣ. ಹೀಗಾಗಿ ಈ ಬಾರಿ ಅಂತಹ ಅಸ್ಥಿರತೆ ಕೊನೆಯಾಗಲಿದೆ. ಬೀದರ್‌ನಿಂದ ಮಡಿಕೆರಿಯ ತನಕ ಬಿಜೆಪಿಯ ಸಭೆಗಳಿಗೆ ಲಕ್ಷಾಂತರ ಜನರು ಸೇರುತ್ತಿದ್ದು ರಾಜ್ಯದಲ್ಲ ಬಿಜೆಪಿ ಪರ ವಾತಾವರಣ ಸೃಷ್ಟಿಯಾಗಿದೆ ಎಂದರು.

ಜನ ಸಾಮಾನ್ಯರ ಬದುಕಿನ ಏಳಿಗೆಯಾಗಬೇಕಾದರೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಸರಕಾರವಿರಬೇಕು. ಡಬಲ್‌ ಇಂಜಿನ್‌ ಸರಕಾರಗಳು ಜನರ ಆಶೋತ್ತರಗಳನ್ನು ಹೇಗೆ ಈಡೇರಿಸಿದ್ದಾವೆ ಎಂಬುದನ್ನು ಇತರೆ ರಾಜ್ಯಗಳನ್ನು ನೋಡಿ ತಿಳಿದುಕೊಳ್ಳಬಹುದು. ರಾಜ್ಯದಲ್ಲಿ ಪೂರ್ಣ ಬಹುಮತ ದೊರಕುವಲ್ಲಿ ಜನರ ಆಶೀರ್ವಾದ ಪಕ್ಷದ ಕಡೆಗೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೇಸ್‌ ಪಕ್ಷದ ಸುಳ್ಳು ಗ್ಯಾರಂಟಿಗಳನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ಹಣ ಕೊಟ್ಟು ಚುನವಾಣೆಗೆ ಸ್ಪರ್ಧಿಸಲು ಬಯಸಿದ ಅಭ್ಯರ್ಥಿಗಳಿಗೆ ಟಿಕೇಟ್‌ ನೀಡದೇ ಇರುವುದರಿಂದ ಅವರ ಗ್ಯಾರಂಟಿ ವಿಶ್ವಾಸಕ್ಕೆ ಅರ್ಹವಾಗಿಲ್ಲ ಎಂದು ಆ ಪಕ್ಷದ ಆಕಾಂಕ್ಷಿಗಳೇ ಹೇಳಿಕೊಂಡು ತಿರುಗಾಡುತ್ತಿರುವುದನ್ನು ಉಲ್ಲೇಖಿಸಿದ ನಾಯಕ್‌ ಅವರು ಅವರ ಪಕ್ಷದವರಿಗೆ ಅವರಿಗೆ ಗ್ಯಾರಂಟಿ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ರಾಜ್ಯದ ಜನತೆಗೇನು ನೀಡಬಲ್ಲರು. ಕಳೆದ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಇದೇ ರೀತಿ ಆಶ್ವಾಸನೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದ್ದರೂ ಯಾವುದೇ ಆಶ್ವಾಸನೆಗಳನ್ನು ಈಡೇರಿಸದೆ ವಂಚಿಸಿದ್ದಾರೆ. ಬದಲಾಗಿ ಡಿಸೆಲ್ ಬೆಲೆಯನ್ನು ಹೆಚ್ಚಿಸಿದ್ದಾರೆ. ಅಲ್ಲಿ ಹಿಂದಿನ ಬಿಜೆಪಿ ಸರಕಾರ ತಂದ ಜನಪರ ಯೋಜನೆಗಳನ್ನು ರದ್ದುಗೊಳಿಸಿದ್ದಾರೆ ಎಂದರು.

ಇವರು ಜಾತಿ ಜಾತಿ ಮಧ್ಯೆ ಒಡಕನ್ನು ತರುತ್ತಿದ್ದಾರಲ್ಲದೆ, ಹಾಕಿದ ಕುಂಕುಮವನ್ನು ಅಳಿಸುತ್ತಿದ್ದಾರೆ. ಕೇಸರಿ ಶಾಲನ್ನು ಬದಿಗೆ ಸರಿಸುತ್ತಿದ್ದಾರೆ. ಹಿಂದು ಎಂಬುದು ನಾಚಿಕೆಯ ಶಬ್ದ ಎಂದಿದ್ದಾರೆ. ಕಾಂಗ್ರೆಸ್‌ ನಾಯಕನೆಂದು ಹೇಳಿಕೊಳ್ಳುವ ಇವರು ಅಂಗಿಯ ಮೇಲೆ ಜನಿವಾರ ಹಾಕಿಕೊಂಡು ಈಗ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಹಿಂದುತ್ವದ ಪರ ಮೊದಲಿನಿಂದಲೂ ಇದೆ. ದೇವಸ್ಥಾನಗಳಿಗೆ, ದೈವಸ್ಥಾನಗಳಿಗೆ ಕೊಟ್ಟಷ್ಟು ಅನುದಾನ ಈ ಹಿಂದಿನ ಯಾವ ಸರಕಾರಗಳೂ ನೀಡಿಲ್ಲ. ಬೆಳ್ತಂಗಡಿಯ ದೇವಸ್ಥಾನಗಳಿಗೆ ಹಿಂದಿನ ಶಾಸಕ ವಸಂತ ಬಂಗೇರ ಅವರು ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ ಎಂಬ ಪಟ್ಟಿಯನ್ನು ನೀಡಲಿ. ಬೇರೆ ದೇವಸ್ಥಾನ ಬಿಡಿ, ತನ್ನದೇ ಊರಿನ ದೇವಸ್ಥಾನಕ್ಕೆ ಸರಕಾರದ ಮುಖ್ಯ ಸಚೇತಕರಾಗಿದ್ದುಕೊಂಡೂ ಒಂದು ರೂ. ವನ್ನು ಸರಕಾರದಿಂದ ತರಲು ಇವರಿಗೆ ಸಾಧ್ಯವಾಗಿಲ್ಲ. ಕಳೆದ ಐದು ವರ್ಷದಲ್ಲಿ ಶಾಸಕ ಹರೀಶ ಪೂಂಜ ಅವರು ದೇವಸ್ಥಾನ, ಮಸೀದಿ, ಚರ್ಚಗಳಿಗೆ ಸಾಕಷ್ಟು ಅನುದಾನಗಳನ್ನು ಒದಗಿಸಿದ್ದಾರೆ. ಬಿಜೆಪಿ ತುಷ್ಟೀಕರಣದ ನೀತಿಯನ್ನು ಒಪ್ಪುವುದಿಲ್ಲ. ಎಲ್ಲರನ್ನೂ ಭಾರತೀಯ ಹಿನ್ನಲೆಯಲ್ಲಿ ಸಂತಷ್ಟೀಕರಣ ಮಾಡಲು ಇಚ್ಛಿಸುತ್ತದೆ. ಬೆಳ್ತಂಗಡಿಯಲ್ಲಿ ಬೂತ್‌ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳು ನಡೆದ್ದಿದ್ದು ತಾಲೂಕಿನ ಕಟ್ಟಕಡೆಯ ವ್ಯಕ್ತಿಯ ತನಕ ನಾವು ತಲುಪಿದ್ದೇವೆ ಎಂದರು. ಈ ಬಾರಿ ಬಹುಮತದ ಸರಕಾರ ಎಂಬುದು ಜನರ ಘೋಷಣೆಯಾಗಿದೆ. ಇದುವರೆಗಿನ ಸರ್ವೇ ಪ್ರಕಾರ ರಾಜ್ಯದಲ್ಲಿ ೧೨೫ ರಿಂದ ೧೩೦ ಸ್ಥಾನಗಳನ್ನು ಪಕ್ಷ ಗಳಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಪಕ್ಷದ ಮಂಡಲಾಧ್ಯಕ್ಷ ಜಯಂತ ಕೋಟ್ಯಾನ್‌, ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ರಾವ್‌, ಗಣೇಶ್‌ ನಾವರ, ಚುನಾವಣಾ ಸಂಚಾಲಕ ಮಹಾಬಲ ಗೌಡ, ಅಭ್ಯರ್ಥಿ ಚುನಾವಣಾ ಸಂಚಾಲಕ ಜಯಾನಂದ ಗೌಡ, ಮಾಧ್ಯಮ ಸಂಚಾಲಕ ರಾಜೇಶ್‌ ಪೆಂರ್ಬುಡ ಇದ್ದರು.

Sneha Gowda

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

3 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

3 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

4 hours ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

4 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

4 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

4 hours ago