Categories: ಮಂಗಳೂರು

ಗ್ಯಾರಂಟಿ ಜಾರಿಯಾಗದೇ ಇದ್ರೆ ಬಿಜೆಪಿ ಹೋರಾಟ ನಡೆಸಲಿದೆ: ನಳಿನ್‌ ಕುಮಾರ್‌ ಕಟೀಲ್‌

ಮಂಗಳೂರು: ಕಾಂಗ್ರೆಸ್‌ ಅಡ್ಡ ದಾರಿಯಲ್ಲಿ ಅಧಿಕಾರ ಹಿಡಿದಿದ್ದು, ಜನರನ್ನು ಮೂರ್ಖರನ್ನಾಗಿಸಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗ್ಯಾರಂಟಿ ಘೋಷಿಸಿತ್ತು. ಮಲ್ಲಿಕಾರ್ಜುನ ಖರ್ಗೆ, ರಾಹುಲ್, ಪ್ರಿಯಾಂಕ, ಸೋನಿಯಾ, ಸಿದ್ದರಾಮಯ್ಯ, ಡಿಕೆಶಿ ಘೋಷಣೆ ಮಾಡಿದ್ದರು. ಗ್ಯಾರಂಟಿ ಕಾರ್ಡ್ ಹಿಡಿದು ರಾಜ್ಯದ ಎಲ್ಲಾ ಜನರಿಗೂ ಕೊಡ್ತೇವೆ ಅಂದಿದ್ದರು. ಎಲ್ಲರಿಗೂ 24 ಗಂಟೆಯೊಳಗೆ ಗ್ಯಾರಂಟಿ ಯೋಜನೆ ನೀಡುವುದಾಗಿ ಹೇಳಿದ್ದರು. ಆದರೆ 20 ದಿನ ಕಳೆದರೂ ಯೋಜನೆ ಘೋಷಿಸಿಲ್ಲ.

ಮೀಟಿಂಗ್‌ ಮೇಲೆ ಮೀಟಿಂಗ್‌ ಮಾಡುತ್ತಿದ್ದರೂ ಯೋಜನೆ ಜಾರಿಯಾಗಿಲ್ಲ. ಹಣಕಾಸು ಇಲಾಖೆ ಈ ಯೋಜನೆ ಜಾರಿ ಸಾಧ್ಯವಿಲ್ಲ ಎಂದಿದೆ. ಇನ್ನೊಂದೆಡೆ ಜನ ಕರೆಂಟ್‌ ಬಿಲ್ಲ ಕಟ್ಟುತ್ತಿಲ್ಲ. ಬಸ್‌ಗಳಲ್ಲಿ ಟಿಕೆಟ್‌ಗೆ ಹಣ ನೀಡುತ್ತಿಲ್ಲ. ಹಣಕಾಸು ಸಚಿವ, ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಸತ್ಯಾಂಶ ಗೊತ್ತಿದ್ದರೂ ಸುಳ್ಳು ಹೇಳಿದ್ದಾರೆ. ಈಗ ಹಾದಿ ತಪ್ಪಿಸಲು ಮೋದಿ 15 ಲಕ್ಷ ಕೊಡ್ತೀನಿ ಅಂತ ಹೇಳಿದ್ದರು ಅಂತ ಹೇಳುತ್ತಿದ್ದಾರೆ.

ಆದರೆ ಮೋದಿ ಎಲ್ಲಿಯೂ 15 ಲಕ್ಷ ರೂ. ಕೊಡುವ ಗ್ಯಾರಂಟಿ ಕಾರ್ಡ್ ಕೊಟ್ಟಿರಲಿಲ್ಲ. ಅವರು ಕಪ್ಪು ಹಣ ತಂದರೆ ಕೊಡುತ್ತೇವೆ ಎಂದು ಹೇಳಿದ್ದಾರೆ. ನಾವು ಜನರ ಪರ ಇದ್ದೇವೆ, ಗ್ಯಾರಂಟಿ ಜಾರಿಯಾಗದೇ ಇದ್ರೆ ಬಿಜೆಪಿ ಹೋರಾಟ ನಡೆಸಲಿದೆ. ಕಾಂಗ್ರೆಸ್‌ ನವರಿಂದ ಬೀದಿಯಲ್ಲಿ ನೌಕರರು ಏಟು ತಿನ್ನುವ ಹಾಗೆ ಆಗಿದೆ ಎಂದರು.

Gayathri SG

Recent Posts

ಕಿಡ್ನಾಪ್​ ಕೇಸ್ ನಲ್ಲಿ ಭವಾನಿ ರೇವಣ್ಣ ಹೆಸರು ಉಲ್ಲೇಖಿಸಿದ ಸಂತ್ರಸ್ತೆಯರು

ಅಶ್ಲೀಲ ವಿಡಿಯೋ ಹಾಗೂ ಕಿಡ್ನಾಪ್​ ಕೇಸ್​ಗೆ ಸಂಬಂಧಿಸಿದಂತೆ ಸಂತ್ರಸ್ತೆಯರು ಎಸ್​​ಐಟಿ ಬಳಿ  ಭವಾನಿ ರೇವಣ್ಣರ ಹೆಸರನ್ನು ಉಲ್ಲೇಖ ಮಾಡಿದ್ದಾರೆ ಎನ್ನುವ…

6 mins ago

ಅತ್ಯಾಚಾರ ಪ್ರಕರಣ: ರೇವಣ್ಣನ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು ಎಸ್‌ಐಟಿ ಅಧಿಕಾರಿಗಳು

ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಬಸವನಗುಡಿಯಲ್ಲಿರುವ ಎಚ್‌.ಡಿ.ರೇವಣ್ಣ ಅವರ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು…

13 mins ago

ರಾಯ್‌ಬರೇಲಿಗೆ ಬಘೇಲ್‌, ಅಮೇಠಿಗೆ ಅಶೋಕ್‌ ಗೆಹಲೋತ್‌ ವೀಕ್ಷಕರಾಗಿ ನೇಮಕ

ಉತ್ತರ ಪ್ರದೇಶದ ಪ್ರತಿಷ್ಠಿತ ಲೋಕಸಭಾ ಕೇತ್ರಗಳಾದ ರಾಯ್‌ಬರೇಲಿ ಮತ್ತು ಅಮೇಠಿಗೆ ಕಾಂಗ್ರೆಸ್‌ ಹೈಕಮಾಂಡ್‌ ವೀಕ್ಷಕರನ್ನು ನೇಮಕ ಮಾಡಿದೆ.

23 mins ago

ಬಿಲ್ಲವ Vs ಬಂಟ; ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬೆಟ್ಟಿಂಗ್ ದಂಧೆ

ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಮತದಾನ ಈಗಾಲೇ ಪೂರ್ಣಗೊಂಡಿದೆ. ಇತ್ತ ಗೆಲುವಿನ ಲೆಕ್ಕಾಚಾರದಲ್ಲಿ ರಾಜಕೀಯ ಪಕ್ಷಗಳು ನಿರತವಾಗಿದೆ. ಮತ್ತೊಂದು ಕಡೆ ಐಪಿಎಲ್…

25 mins ago

ಸಿಟ್ಟಿನಲ್ಲಿ ಕಪಾಳ ಮೋಕ್ಷ: ವ್ಯಕ್ತಿ ಮೃತ್ಯು

ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಸಿಟ್ಟಾಗಿ ಕಪಾಳಕ್ಕೆ ಹೊಡೆದಿದ್ದರಿಂದ ಮೃತಪಟ್ಟ ಘಟನೆ ಬೆಂಗಳೂರಿನ ಕಾಡುಗೋಡಿ ಠಾಣಾ ವ್ಯಾಪ್ತಿಯ ಬೆಳ್ತೂರು ಕಾಲೋನಿಯಲ್ಲಿ ನಡೆದಿದೆ.

31 mins ago

ಸರ್ಕಾರಿ ವಸತಿ ಗೃಹದಲ್ಲೇ ಭ್ರೂಣ ಹತ್ಯೆ: ನಾಲ್ಕು ಜನರ ಬಂಧನ

ಮಂಡ್ಯ ಜಿಲ್ಲೆಯ ಸರ್ಕಾರಿ ವಸತಿ ಗೃಹದಲ್ಲೇ ಭ್ರೂಣ ಹತ್ಯೆ ನಡೆಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ತಿಳಿದು…

31 mins ago