Categories: ಮಂಗಳೂರು

ಮಂಗಳೂರು: ಹಿಂದುತ್ವದ ಕಾರ್ಯಕರ್ತರಿಗೆ ಬಿಜೆಪಿ 25 ಸೀಟು ಬಿಟ್ಟು ಕೊಡಬೇಕು- ಪ್ರಮೋದ್ ಮುತಾಲಿಕ್

ಮಂಗಳೂರು: ವಿಧಾನಸಭೆಯಲ್ಲಿ ಹಿಂದುತ್ವ , ಗೋವುಗಳ ಪರವಾಗಿ ಧ್ವನಿ ಇರುವಂತಾಗಲು ನಮ್ಮ ಕಾರ್ಯಕರ್ತರು ಶಾಸಕರಾಗಬೇಕು ಅದಕ್ಕಾಗಿ ಮುಂದಿನ ಚುನಾವಣೆಯಲ್ಲಿ ಕನಿಷ್ಠ ಇಪ್ಪತ್ತೈದು ಸೀಟನ್ನು ಹಿಂದುತ್ವದ ಹಿನ್ನೆಲೆ ಕಾರ್ಯಕರ್ತರಿಗೆ ನೀಡಬೇಕು ಬಿಜೆಪಿ ಮುಂದೆ ನಾವು ಬೇಡಿಕೆ ಇಟ್ಟಿದ್ದೇವೆ ಪರಿಗಣಿಸದೇ ಇದ್ದರೆ ನಮ್ಮ ಗುರಿ ನಾವು ನೋಡಿಕೊಳ್ಳುತ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮುತಾಲಿಕ್ ಶ್ರೀರಾಮಸೇನೆ ರಾಜಕೀಯ ಪಕ್ಷ ಅಲ್ಲ ,ಚುನಾವಣೆ ಸ್ಪರ್ಧೆ ಮಾಡಲ್ಲ ಆದ್ರೆ ಬಿಜೆಪಿ ಗೆ ಬೆಂಬಲಿಸುತ್ತೇವೆ ಹಿಂದುತ್ವದ ಕಾರ್ಯಕರ್ತರಿಗೆ ಬಿಜೆಪಿ ಸೀಟು ಕೊಡಬೇಕೆಂದು ಆಗ್ರಹಿಸುತ್ತೇವೆ ಎಂದರು.

ಬಿಜೆಪಿ ಸರಕಾರದ ನಡೆಯಿಂದ ಹಿಂದೂ ಸಮಾಜ ರೋಸಿ ಹೋಗಿದೆ ಈಗಲೇ ನೀವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ಧೂಳಿಪಟ ಆಗುತ್ತೀರಿ 25 ಸೀಟು ಹಿಂದೂ ಕಾರ್ಯಕರ್ತರಿಗೆ ಕೊಡಿ ರಾಜ್ಯದಲ್ಲಿ ನೂರ ಐವತ್ತು ಕ್ಕೂ ಹೆಚ್ಚು ಸೀಟನ್ನು ಗೆಲ್ಲಿಸಿಕೊಡುತ್ತೇವೆ .ಕಟ್ಟರ್ ಹಿಂದುತ್ವ ಪರ ನಿಂತ ದಕ್ಕಾಗಿ ನನ್ನನ್ನು ಬಿಜೆಪಿಯವರು ತಡೆಯುತ್ತಿದ್ದಾರೆ ಹಿಂದೆ ಕಾಂಗ್ರೆಸ್ ಜೆಡಿಎಸ್ ಸರಕಾರ ಇದ್ದಾಗಲೂ ತಡೆದಿದ್ದಾರೆ .ಇವರಿಗೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಅದು ನಮ್ಮಿಂದ ಆಗುತ್ತಿಲ್ಲ ಎಂದರು.

ಗೋವಾದಲ್ಲಿ ಬಿಜೆಪಿ ಸರ್ಕಾರ ಇದ್ದರೂ 8ವರ್ಷಗಳಿಂದ ನನಗೆ ನಿರ್ಬಂಧ ಹಾಕಿದ್ದಾರೆ ಇವರು ಹಿಂದುತ್ವದ ಬಗ್ಗೆ ನೈಜ ಕಾಳಜಿ ಇದ್ದರೆ ಅಲ್ಲಿನ ನಿರ್ಬಂಧ ತೆರವು ಮಾಡು ತ್ತಿದ್ದರು . ಗೋವಾಕ್ಕೆ ಪಾಕಿಸ್ತಾನದಿಂದ ಬರೋದಲ್ಲ ನೆರೆಯ ಕರ್ನಾಟಕದಲ್ಲಿರುವ ವ್ಯಕ್ತಿಯನ್ನು ತಡೆಯುದಾದರೆ ಇದರ ಅರ್ಥ ಏನೆಂದು ಪ್ರಶ್ನಿಸಿದರು.

ಇಸ್ಲಾಮ್ ಹುಟ್ಟಿದಾಗಿನಿಂದ ಈ ರೀತಿಯ ಕೊಲೆ ಹಿಂಸೆ ನಡೆಯುತ್ತಾ ಬಂದಿದೆ ಇವರ ಬದಲಾಗುತ್ತಿಲ್ಲ ನಾವು ನೀವು ಇನ್ನೂ ಸೌಹಾರ್ದದಿಂದ ಇರಲು ಕಾಲ ಮುಗಿದಿದೆ ಇನ್ನೇನಿದ್ದರೂ ನಮ್ಮ ನಿಮ್ಮ ನಡುವೆ ಸಂಘರ್ಷ ಅಷ್ಟೇ ಇರುತ್ತದೆ .ಹಿಂದೂ ಸಮಾಜ ಇದಕ್ಕೆ ಉತ್ತರ ಕೊಡಲು ಮರೆಯಲಿಲ್ಲ ಎಂದು ಹೇಳಿದ ಅವರು ಪ್ರವೀಣ್ ಪ್ರಕರಣದಲ್ಲಿ ಎನ್ ಐಎ ತನಿಖೆಯಿಂದ ನ್ಯಾಯ ಸಿಗುತ್ತೆ ಎನ್ನುವುದನ್ನು ನಾನು ಒಪ್ಪುವುದಿಲ್ಲ , ಪರಮೇಶ್ ಮೇಸ್ತ ಪ್ರಕರಣವನ್ನು ಎನ್ ಐಎ ನೀಡಿದರು ಆದ್ರೆ ಈ ತಂಡ ನಿರ್ಲಕ್ಷ್ಯ ನೀಚರು ಪರಮೇಶ್ ಮೇಸ್ತ ಮನೆಗೆ ಭೇಟಿ ನೀಡಿಲ್ಲ .ಪಿಎಫ್ಐ ಎಸ್ಡಿಪಿಐ ದೇಶದ್ರೋಹಿ ಸಂಘಟನೆ ಭಾಗಿಯಾಗಿದೆ ಹೀಗಾಗಿ ಇವರ ಮೇಲೆ ಕೋಕಾ ಕಾಯ್ದೆ ಹಾಕಬೇಕೆಂದು ಹೇಳಿದರು.

ರಾತ್ರಿ ವೇಳೆ ಧ್ವನಿವರ್ಧಕ ನಿಷೇಧದಿಂದಾಗಿ ಕರಾವಳಿಯಲ್ಲಿ ಯಕ್ಷಗಾನ ನಾಟಕ ದೇವಸ್ಥಾನದ ಕಾರ್ಯಕ್ರಮಕ್ಕೆ ಅಡ್ಡಿಯಾಗಿದೆ ಎಂಬ ಪ್ರಶ್ನೆಗೆ ಇದು ಕಾನೂನು ಜಾರಿ ಮಾಡಿದ್ದು ಸುಪ್ರೀಂ ಕೋರ್ಟ್ ಮುತಾಲಿಕ್ ಅಲ್ಲ , ಆದೇಶ ಆಗಿ ಆದ್ಮೇಲೆ ವರ್ಷವಾದರೂ ಅದನ್ನು ಜಾರಿಗೆ ತಂದಿಲ್ಲ ಮುಸ್ಲಿಮರು ಸುಪ್ರೀಂಕೋರ್ಟಿಗೂ ನಮಗೂ ಸಂಬಂಧವಿಲ್ಲ ಎಂಬ ನೀಚ ನಿರ್ಲಕ್ಷ್ಯ ನಿರ್ಲಜ್ಜ ಹೇಳಿಕೆ ನೀಡುತ್ತಿದ್ದಾರೆ . ಸುಪ್ರೀಂಕೋರ್ಟ್ ಮಾತು ಕೇಲಲ್ಲ ಅಂದರೆ ಪಾಕಿಸ್ತಾನದ ಹೋಗಿ ನಿಮ್ಮ ನಮಾಜಿಗೆ ನಮ್ಮ ವಿರೋಧವಿಲ್ಲ ಆದರೆ ಸುತ್ತಮುತ್ತಲಿನ ಜನರ ಕಿವಿ ಕಚ್ಚುವ ಶಬ್ದಕ್ಕೆ ಮಾತ್ರ ನಮ್ಮ ವಿರೋಧ ಇದೆ ಕೋರ್ಟ್ ಅಲ್ಲ ಕುರಾನ್ ನಮ್ಮ ಕಾನೂನೆಂಬ ಸೊಕ್ಕಿನ ಮಾತಾಡಿ ಒಪ್ಪಲ್ಲ .ನಮ್ಮ ಹೋರಾಟದ ಕಾರಣ ಇಪ್ಪತ್ತೈದು ಶೇಕಡಾ ಸದ್ದು ನಿಂತಿದೆ ಇದಕ್ಕೆ ಕಾರಣವಾಗಿದ್ದು ಶ್ರೀರಾಮ ಸೇನೆ ಹೋರಾಟ ಎಂದರು ಮುತಾಲಿಕ್.

Gayathri SG

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

1 hour ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

2 hours ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

2 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

2 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

3 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

3 hours ago