Categories: ಮಂಗಳೂರು

ಬೆಳ್ತಂಗಡಿ: ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

ಬೆಳ್ತಂಗಡಿ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಹೊನಲು ಬೆಳಕಿನ ೩೦ನೇ ವರ್ಷದ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳವು ಶನಿವಾರ ಉದ್ಘಾಟನೆಗೊಂಡಿತು.

ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ ಅಜಿಲರು ಕಂಬಳದ ಉದ್ಘಾಟನೆಯನ್ನು ನೆರವೇರಿಸಿ, ಜಾನಪದ ಕ್ಷೇತ್ರಕ್ಕೆ ಕಂಬಳದ ಕೊಡುಗೆ ಅಪಾರವಾಗಿದೆ. ಇಲ್ಲಿಯ ಕಂಬಳ ಸಮಿತಿಯ ಪ್ರಯತ್ನಕ್ಕೆ ದೇವರು ಪೂರ್ಣನುಗ್ರಹ ನೀಡಲಿ, ಕಾಂತಾರ ಸಿನೆಮಾದ ಬಳಿಕ ದೈವರಾಧನೆ ಮತ್ತು ತುಳುನಾಡಿನ ಆಚರಣೆಗಳಿಗೆ ಮತ್ತಷ್ಟು ಮಹತ್ವ ಬಂದಿರುವುದು ಸಂತಸದ ವಿಚಾರ ಎಂದರು.

ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್ ಅಧ್ಯಕ್ಷತೆ ವಹಿಸಿದ್ದರು. ಯಂ. ವಿಜಯರಾಜ ಅಧಿಕಾರಿ ಮಾರಗುತ್ತು, ಸುರೇಶ್ ಆರಿಗ ಪೆರ್ಮಾಣುಗುತ್ತು, ಕುಂಡದಬೆಟ್ಟು ಜುಮ್ಮಾ ಮಸೀದಿಯ ಧರ್ಮಗುರು ಕೆ.ಎಂ. ಹನೀಫ್ ಸಖಾಫಿ, ಪಡಂಗಡಿ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ, ರಾಜಕೀರ್ತಿ ಜೈನ್ ಮೇಗಿನ ಕುಕ್ಕೇಡಿ, ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಯೋಗೀಶ್ ಪೂಜಾರಿ ಬಿಕ್ರೊಟ್ಟು, ತಾ.ಪಂ. ಮಾಜಿ ಸದಸ್ಯೆ ವಿನುಷಾ ಪ್ರಕಾಶ್, ಪ್ರಮುಖರಾದ ಲಕ್ಷ್ಮಣ ಪೂಜಾರಿ ಹೇಡ್ಮೆ, ಭಾಸ್ಕರ ಬಲ್ಯಾಯ, ಆಶಾ ಟ್ರಾವೆಲ್ಸ್‌ನ ರಾಜೇಶ್ ದ್ರುವಿ, ರಾಜೀವ್ ಶೆಟ್ಟಿ ಎಡ್ತೂರು, ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆ, ಗಣೇಶ್ ನಾರಾಯಣ ಪಂಡಿತ್, ನವೀನ್ ಪೂಜಾರಿ ಪಚ್ಚೇರಿ, ಕೃಷ್ಣಪ್ಪ ಪೂಜಾರಿ, ಡಾ| ಪ್ರತೀತ್ ಅಜಿಲ, ನಿಶ್ಮಿತಾ ರಾಜೇಶ್, ನಾರಾಯಣ ಪೂಜಾರಿ ಆಲಡ್ಕ, ಗ್ರಾ.ಪಂ. ಸದಸ್ಯರಾದ ಗುಣವತಿ ಡಿ., ತೇಜಾಕ್ಷಿ, ವಕೀಲ ಸತೀಶ್ ಪಿ.ಯನ್., ಲೋಕೇಶ್ ಪೂಜಾರಿ ಕೋರ್ಲೋಡಿ, ಕಂಬಳ ಸಮಿತಿಯ ಉಪಾಧ್ಯಕ್ಷರುಗಳಾದ ಕರುಣಾಕರ ಸಾಲ್ಯಾನ್, ಸ್ಟೀವನ್ ಮೋನಿಸ್, ಗೋಪಾಲ ಪೂಜಾರಿ, ಕೋಶಾಧ್ಯಕ್ಷ ಅಶೋಕ್ ಪಾಣೂರು, ಕಾರ್ಯದರ್ಶಿ ಭರತ್‌ರಾಜ್ ಪಾಪುದಡ್ಕ ಮತ್ತಿತರರು ಉಪಸ್ಥಿತರಿದ್ದರು. ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಕೋಟ್ಯಾನ್ ಪ್ರಸ್ತಾವಿಸಿ, ಸ್ವಾಗತಿಸಿದರು. ಸತೀಶ್ ಹೊಸ್ಮಾರು ನಿರೂಪಿಸಿ, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ ವಂದಿಸಿದರು.

ಕೋಣಗಳನ್ನು ಬಿಡುವ ಗಂತಿನಲ್ಲಿ ಸಮಯ ವ್ಯರ್ಥ ಸಲ್ಲದು. ಮಂಜೊಟ್ಟಿಯಲ್ಲಿ ಸೆನ್ಸರ್ ಲೈಟ್ ಮೂಲಕ ಸ್ಪರ್ಧೆಯನ್ನು ನಿರ್ಣಯಿಸುವಂತೆ ಗಂತಿನಲ್ಲೂ ಕೋಣಗಳನ್ನು ಬಿಡಲು ಸೆನ್ಸರ್ ಲೈಟ್ ಆಗಬೇಕು- ಡಾ| ಪದ್ಮಪ್ರಸಾದ್ ಅಜಿಲ

Gayathri SG

Recent Posts

ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ.  ಗುಟ್ಕಾ, ಎಲೆಅಡಿಕೆ, ತಂಬಾಕು ಅಗೆಯುವುದರಿಂದ, ಬೀಡಿ, ಸಿಗರೇಟ್ ಸೇದುವುದರಿಂದ ಹಲ್ಲುಗಳು ನೈಜ ಹೊಳಪು…

8 mins ago

ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಸಾವು

ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ 62 ವರ್ಷದ ರಿಚರ್ಡ್​ ಸ್ಲಾಯ್​​ಮನ್ ನಿಧನರಾಗಿದ್ದಾರೆ. ಕಳೆದ ಮಾರ್ಚ್​​ನಲ್ಲಿ ಅವರು…

31 mins ago

ಎಸ್‌ಐಟಿಯವರು ಅಪರಾಧಿಗಳನ್ನ ಬಂಧಿಸುತ್ತಿಲ್ಲ: ಬಸವರಾಜ ಬೊಮ್ಮಾಯಿ

ಪ್ರಜ್ವಲ್ ಪ್ರಕರಣದ ತನಿಖೆ ನಡೆಯುತ್ತಿರುವ ರೀತಿ ಸರಿ ಇಲ್ಲ. ಎಸ್‌ಐಟಿಯ ತನಿಖೆಯ ದಿಕ್ಕು ತಪ್ಪುತ್ತಿದೆ. ಅಪರಾಧಿಗಳನ್ನ ಎಸ್‌ಐಟಿಯವರು ಬಂಧಿಸುತ್ತಿಲ್ಲ. ಎಂದು…

48 mins ago

ಅಮ್ಮನ ಮೇಲಿನ ಪ್ರೀತಿಗಾಗಿ ಹೆಸರು ಬದಲಿಸಿಕೊಂಡ ವಿಜಯ್ ಸೂರ್ಯ

ತಾಯಿ ಎಂದರೆ ಮಮತೆಯ ಆಗರ, ತಾಯಿ ಎಂದರೆ ಕರುಣೆಯ ಕಡಲು, ತಾಯಿ ಎಂದರೆ ಪ್ರೀತಿಯ ಸೆಲೆ... ಹೀಗೆ ತಾಯಿಯ ಬಗ್ಗೆ…

52 mins ago

ಮಲ್ಲಿಕಾರ್ಜುನ ಖರ್ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪರಿಶೀಲಿಸಿದ ಚುನಾವಣಾ ಅಧಿಕಾರಿಗಳು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.

1 hour ago

ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಸಂಸ್ಕಾರ ಕಲಿಸಿ : ರವಿ ಶಾಸ್ತ್ರಿ

ಮಕ್ಕಳಿಗೆ ಆಸ್ತಿ ಮಾಡಿ ಇರಿಸುವುದರ ಬದಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಸಂಸ್ಕಾರವಂತರನ್ನಾಗಿ ಮಾಡಿದರೆ ಅದುವೇ ದೊಡ್ಡ ಆಸ್ತಿ ಎಂದು ಶ್ರೀ ಕೃಷ್ಣ…

2 hours ago