ಮಂಗಳೂರು

ಬೆಳ್ತಂಗಡಿ: ಕಡವೆ ಅಡ್ಡಬಂದು ದ್ವಿಚಕ್ರ ವಾಹನ ಮಗುಚಿ ಬಿದ್ದು ಸವಾರ ಆಸ್ಪತ್ರೆ ದಾಖಲು

ಬೆಳ್ತಂಗಡಿ: ಅಳದಂಗಡಿ ಸಮೀಪದ ಸುಲ್ಕೇರಿಮೊಗ್ರು ಎಂಬಲ್ಲಿ ಕಡವೆ ಅಡ್ಡಬಂದು ದ್ವಿಚಕ್ರ ವಾಹನ ಮಗುಚಿಬಿದ್ದು ಸವಾರ ಪರಂಟ್ಯಾಲ ನಿವಾಸಿ ನಾರಾಯಣ ಪೂಜಾರಿ (೪೯) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸುಲ್ಕೇರಿಮೊಗ್ರು ದೇವಸ್ಥಾನಕ್ಕೆ ತೆರಳಿ ಮನೆ ಕಡೆಗೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಮುಗೇರು ಎಂಬಲ್ಲಿ ಏಕಾಏಕಿ ಕಡವೆ ರಸ್ತೆಗೆ ಅಡ್ಡಬಂದಿದ್ದು, ಅದಕ್ಕೆ ಡಿಕ್ಕಿಯಾಗಿ ನಿಯಂತ್ರಣ ತಪ್ಪಿದ ನಾರಾಯಣ ಪೂಜಾರಿಯವರ ದ್ವಿಚಕ್ರ ವಾಹನ ಪಲ್ಟಿಯಾಗಿದ್ದು, ಎದೆ, ಕಾಲಿಗೆ ಗಾಯವಾಗಿದೆ.

ತಕ್ಷಣ ಸ್ಥಳೀಯರ ಸಹಕಾರದಿಂದ ಗಾಯಾಳನ್ನು ಬೆಳ್ತಂಗಡಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ವೇಣೂರು ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಮಹೀಮ್ ಎಂ. ಜನ್ನು ಅವರು ಮಾಹಿತಿ ನೀಡಿ, ನಾರಾಯಣ ಪೂಜಾರಿಯವರ ವಾಹನಕ್ಕೆ ಕಡವೆ ಅಡ್ಡಬಂದು ಬಿದ್ದು ಗಾಯಗೊಂಡಿರುವ ಬಗ್ಗೆ ಮಾಹಿತಿ ಬಂದಿದೆ.

ಈ ಬಗ್ಗೆ ನಾರಾಯಣ ಪೂಜಾರಿಯವರಿಗೆ ಏನಾದರೂ ಪರಿಹಾರ ದೊರೆಯುವುದಿದ್ದರೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.

Sneha Gowda

Recent Posts

ಮಂತ್ರಿಮಾಲ್​ನ ಬೀಗ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ

ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆ ಕಳೆದ ಶುಕ್ರವಾರ ಪ್ರತಿಷ್ಠಿತ ಮಂತ್ರಿಮಾಲ್ ನನ್ನು ಬಂದ್ ಮಾಡಲಾಗಿತ್ತು, ಮಾಲ್‌ ನ ಬೀಗ ತೆರೆಯುವಂತೆ ಬಿಬಿಎಂಪಿಗೆ…

6 mins ago

ಭಾರತದಲ್ಲಿ ಮೊಟೊರೊಲ ಎಡ್ಜ್ 50 ಫ್ಯೂಷನ್ ಬಿಡುಗಡೆ

ಭಾರತದಲ್ಲಿ ಅಪರೂಪಕ್ಕೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಪ್ರಸಿದ್ಧ ಮೊಟೊರೊಲ ಕಂಪನಿ ಇದೀಗ ನೂತನ ಫೋನ್​ನೊಂದಿಗೆ ಬಂದಿದೆ.

7 mins ago

ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಠಾಣೆಗೆ ಮುತ್ತಿಗೆ ಯತ್ನ, ಪ್ರತಿಭಟನೆ

ನಗರದಲ್ಲಿ ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಶಹರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು…

18 mins ago

ಅಕ್ರಮ ಅಡುಗೆ ಎಣ್ಣೆ ಮಾರಾಟ: ಚಾಲಕ ಪೊಲೀಸರ ವಶಕ್ಕೆ

ಅಕ್ರಮವಾಗಿ ಅಡುಗೆ ಎಣ್ಣೆ ಮಾರಾಟ ಮಾಡಿ ಲಾರಿ ಪಲ್ಟಿಯಾಗಿ ಎಣ್ಣೆ ಕಳುವಾಗಿದೆ ಎಂದು ಮಾಲೀಕರಿಗೆ ಸುಳ್ಳು ಹೇಳಿದ್ದ ಚಾಲಕ ಸಿಕ್ಕಿಬಿದ್ದಿರುವ…

19 mins ago

ತ್ರಿವಳಿ ತಲಾಖ್‌ನಿಂದ ನೊಂದು ಹಿಂದೂ ಯುವಕನ್ನು ಮದುವೆಯಾದ ಮುಸ್ಲಿಂ ಮಹಿಳೆ

ತ್ರಿವಳಿ ತಲಾಖ್‌ ನಿಂದ ನೊಂದಿದ್ದ ಮುಸ್ಲಿಂ ಮಹಿಳೆಯೊಬ್ಬಳು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಯುವಕನನ್ನು ಮದುವೆ ಆಗಿರುವ ಘಟನೆ ಉತ್ತರಪ್ರದೇಶದಲ್ಲಿ…

37 mins ago

ಶಿಕಾರಿಗೆ ತೆರಳಿದ್ದ ಯುವಕನ ಮೇಲೆ ಮಿಸ್​​ ಫೈರ್; ಯುವಕ ಸಾವು

ಶಿಕಾರಿಗೆ ತೆರಳಿದ್ದ ಯುವಕನ ಮೇಲೆ ಮಿಸ್ ಫೈರ್ ಆದ ಘಟನೆ ಚಿಕ್ಕಮಗಳೂರಿನ ತಾಲೂಕಿನ ಉಲುವಾಗಿಲು ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದಲ್ಲಿ…

48 mins ago