Categories: ಮಂಗಳೂರು

ಬೆಳ್ತಂಗಡಿ: ಫೆ.19 – 27ರವರೆಗೆ ನಡೆಯಲಿದೆ ವೇಣೂರು ದೇಗುಲದ ಬ್ರಹ್ಮಕಲಶೋತ್ಸವ

ಬೆಳ್ತಂಗಡಿ: ದೇವರ ಇಚ್ಚೆಯಿಂದ ರಾಜ್ಯದ ಇತಿಹಾಸಲ್ಲೇ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ದೇಗುಲಗಳಿಗೆ ಬಹುದೊಡ್ಡ ಅನುದಾನ ಬಂದಿದೆ. ಈ ಬಾರಿ ತಾಲೂಕಿನಲ್ಲಿ ೨೪ ದೇಗುಲದ ಬ್ರಹ್ಮಕಲಶ ನಡೆಯಲಿದ್ದು, ಸಾಮೂಹಿಕ ಒಗ್ಗಟ್ಟಿನಿಂದ 2023ರ ಫೆ. 19 ರಿಂದ 27ರವರೆಗೆ ವೇಣೂರು ದೇಗುಲದ ಬ್ರಹ್ಮಕಲಶೋತ್ಸವ ಅದ್ಬುತ ಯಶಸ್ಸು ಕಾಣಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಜೀರ್ಣೋದ್ಧಾರಗೊಳ್ಳುತ್ತಿರುವ ಅಜಿಲಸೀಮೆಯ ಇತಿಹಾಸ ಪ್ರಸಿದ್ಧ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಸಮಿತಿ ರಚನೆಯ ಪೂರ್ವಭಾವಿಯಾಗಿ ನ. ೨೫ರಂದು ದೇಗುಲದಲ್ಲಿ ಕರೆದ ಸಭೆಯಲ್ಲಿ ಅವರು ಮಾತನಾಡಿದರು.

ಅರಸರ ಸಮ್ಮುಖದಲ್ಲಿ ಹಿರಿಯರ ಕಟ್ಟುಕಟ್ಟಲೆಯಂತೆ ಅರಮನೆಯಲ್ಲೇ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿಪಡಿಸುವ ಕೆಲಸ ಅಗಿದೆ. ಸಮಾರೋಪಾದಿಯಲ್ಲಿ ನಾವು ಕೆಲಸ ನಿರ್ವಹಿಸಬೇಕಿದೆ. ಅವರವರ ಭಾವನೆಯಂತೆ ಬ್ರಹ್ಮಕಲಶೋತ್ಸವಕ್ಕೆ ಸೇರಿಕೊಳ್ಳುತ್ತಾರೆ. ಆದರೆ ಸೀಮೆಯ ಪ್ರತಿಯೊಬ್ಬರಿಗೂ ದೇಗುಲದಲ್ಲಿ ಸೇವೆ ಮಾಡಲು ಅವಕಾಶ ಒದಗಿಸಬೇಕು. ಸೀಮೆಯ ಪ್ರತೀ ಬಂಧುಗಳು ಕರಸೇವೆಯಲ್ಲಿ ಪಾಲ್ಗೊಳ್ಳುವಂತಾಗಬೇಕು. ಈ ಮೂಲಕ ೫೦ ಸಾವಿರ ಭಕ್ತರು ಪಾಲ್ಗೊಳ್ಳುವ ಮೂಲಕ ಅತ್ಯದ್ಭುತ ಯಶಸ್ವಿನ ಬ್ರಹ್ಮಕಲಶ ನಡೆಯಬೇಕು ಎಂದರು. ಬ್ರಹ್ಮಕಲಶೋತ್ಸವ ಸಮಿತಿ, ಉಪಸಮಿತಿಗಳ ರಚನೆಗೆ ಡಿ.೪ಕ್ಕೆ ಸಭೆ ಕರೆಯುವಂತೆ ಅವರು ಸೂಚಿಸಿದರು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್ ಪ್ರಸ್ತಾವಿಸಿ, ಸ್ವಾಗತಿಸಿದರು. ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್, ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷ ಜನಾರ್ಧನ ಪೂಜಾರಿ, ಆರಂಬೋಡಿ ಗ್ರಾ.ಪಂ. ಅಧ್ಯಕ್ಷೆ ವಿಜಯಾರಮೇಶ್, ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಕರುಣಾಕರ ಪೂಜಾರಿ, ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಯಶವಂತ್ ಎಸ್., ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾದ ಸುಂದರ ಹೆಗ್ಡೆ ಬಿ.ಇ., ಆನಂದ ಶೆಟ್ಟಿ , ಕಾರ್ಯದರ್ಶಿ ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆ, ತಾಂತ್ರಿಕ ಸಮಿತಿ ಸಂಚಾಲಕ ಯಜ್ಞನಾರಾಯಣ ಭಟ್, ವ್ಯವಸ್ಥಾಪನ ಹಾಗೂ ಜೀರ್ಣೋದ್ಧಾರ ಸಮಿತಿ ಸದಸ್ಯರು ಮತ್ತು ಸೀಮೆಯ ಭಕ್ತರು ಉಪಸ್ಥಿತರಿದ್ದರು.

Sneha Gowda

Recent Posts

ಇಂದು ಮಧ್ಯಾಹ್ನ ರೇವಣ್ಣ ರಿಲೀಸ್ : ಜೈಲಿನ ಬಳಿ ಬೆಂಬಲಿಗರ ಸಂಭ್ರಮ

ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಜೆಡಿಎಸ್ ಶಾಸಕ ಎಚ್‌.ಡಿ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಾಮೀನು ನೀಡಿದೆ. ಇಂದು…

9 mins ago

ಕೇರಳದಲ್ಲಿ ಎರಡು ಕಡೆ ಐಸ್‌ಕ್ರೀಂ ಬಾಂಬ್‌ ಸ್ಫೋಟ

ಇಲ್ಲಿನ ಪರಿಯಾರಂನ ಅಂಚರಕಂಡಿಯಲ್ಲಿ ಸೋಮವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ರಸ್ತೆಗೆ ಎಸೆಯಲಾದ 2 ಐಸ್‌ ಕ್ರೀಂ ಬಾಂಬ್‌ಗಳು…

23 mins ago

ಮುಂಬೈನಲ್ಲಿ ದಿಢೀರ್‌ ದೂಳಿನ ಬಿರುಗಾಳಿ: 8 ಸಾವು, 65 ಜನರಿಗೆ ಗಾಯ

ಮುಂಬೈನಲ್ಲಿ ಸಂಜೆ ದಿಢೀರನೆ ಬಿರುಗಾಳಿ ಕಾಣಿಸಿಕೊಂಡಿದ್ದು ಪರಿಣಾಮ 8 ಮಂದಿ ಸಾವನಪ್ಪಿದ್ದಾರೆ. ಜೊತೆಗೆ 65 ಜನರು ಗಾಯಗೊಂಡಿದ್ದಾರೆ. ಗಾಳಿಯ ಬೆನ್ನಲ್ಲೇ…

46 mins ago

ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ನಿಧನ

ಬಿಹಾರದ ಮಾಜಿ ಡಿಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಸುಶೀಲ್ ಮೋದಿ (72) ಅವರು ನಿಧನ ಹೊಂದಿದ್ದಾರೆ. ದೆಹಲಿಯ ಅಖಿಲ…

59 mins ago

ನುಡಿದಂತೆ ನಡೆದ ಮೋದಿ : ಬಾಗಲಕೋಟೆ ಬಾಲಕಿಗೆ ಬಂತು ನಮೋ ಪತ್ರ

ಪ್ರಧಾನಿ ನರೇಂದ್ರ ಮೋದಿ ಮತ್ತು ತಾಯಿಯ ಸ್ಕೆಚ್ ನೀಡಿದ್ದ ಬಾಗಲಕೋಟೆಯ ಯುವತಿ ನಾಗರತ್ನ ಮೇಟಿಗೆ ಕೊಟ್ಟ ಮಾತಿನಂತೆ ಮೋದಿ ಇದೀಗ…

1 hour ago

4ನೇ ಹಂತದ ಮತದಾನ ಅಂತ್ಯ : ಶೇ.62.84 ರಷ್ಟು ಮತದಾನ

ಸೋಮವಾರ ನಡೆದ ಲೋಕಸಭೆ ಚುನಾವಣೆಯ ನಾಲ್ಕನೇ ಹಂತದಲ್ಲಿ ರಾತ್ರಿ 8 ಗಂಟೆಯವರೆಗೂ ಶೇ 62. 84 ರಷ್ಟು ಮತದಾನವಾಗಿದೆ. 2019ರ…

2 hours ago