Categories: ಮಂಗಳೂರು

ಬೆಳ್ತಂಗಡಿ: ತಿಮರೋಡಿ ಹಿಂದುತ್ವದ ಬಗ್ಗೆ ಪ್ರಶ್ನಿಸುವ ಹಕ್ಕು ಶಶಿರಾಜ್ ಗಿಲ್ಲ- ಅನಿಲ್ ಕುಮಾರ್

ಬೆಳ್ತಂಗಡಿ: ಮಹೇಶ್ ಶೆಟ್ಟಿಯವರ ಹಿಂದುತ್ವದ ಬಗ್ಗೆ ಪ್ರಶ್ನಿಸುವ ಹಕ್ಕು ಶಶಿರಾಜ್ ಶೆಟ್ಟಿ ಅವರಿಗೆ ಇಲ್ಲ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್ ಹೇಳಿದ್ದಾರೆ.

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿಯವರ ಹಿಂದುತ್ವದ ಬಗ್ಗೆ ಶಶಿರಾಜ್ ಶೆಟ್ಟಿ ಆರೋಪ ಮಾಡಿದ್ದಾರೆ. ಆರೋಪ ಮಾಡಲು ಶಶಿರಾಜ್ ಶೆಟ್ಟಿ ಯಾರು ಅವರಿಗೆ ಏನು ನೈತಿಕತೆ ಇದೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್ ಪ್ರಶ್ನಿಸಿದ್ದಾರೆ.

ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಚುನಾವಣೆ ಸಂದರ್ಭದಲ್ಲಿ ಯಾರು ಯಾರಿಗೂ ಬೆಂಬಲ ಮಾಡಬಹುದು, ಇದು ಪ್ರಜಾಪ್ರಭುತ್ವ ಸಂವಿಧಾನದ ವ್ಯವಸ್ಥೆ. ಆದರೆ ಶಾಸಕ ಹರೀಶ್ ಪೂಂಜರು ಅವರ ವಿಜಯೋತ್ಸವ ಸಂದರ್ಭದಲ್ಲಿ ಹಿಂದೂ ನಾಯಕರುಗಳ ಬಗ್ಗೆ ಆರೋಪ ಮಾಡಿದ್ದಾರೆ. ಅದಕ್ಕೆ ಉತ್ತರವಾಗಿ ಮಹೇಶ್ ಶೆಟ್ಟಿ ನೀಡಿದ್ದಾರೆ.

ಆದರೆ ಮಹೇಶ್ ಶೆಟ್ಟಿಯವರ ಉತ್ತರಕ್ಕೆ ಶಶಿರಾಜ್ ಶೆಟ್ಟಿ ಉತ್ತರ ಕೊಡಲು ಯಾರು?, ಶಶಿರಾಜ್ ರವರಿಗೆ ತಮ್ಮ ಬೋರ್‌ ವೆಲ್ ಎಜೆನ್ಸಿಗೆ ಮಹೇಶ್ ಶೆಟ್ಟಿ ಸಾಕಷ್ಟು ಸಹಕಾರ ಮಾಡಿದ್ದಾರೆ.ಆದರೆ ಇವರೇ ಮಹೇಶ್ ಶೆಟ್ಟಿಯವರಿಂದ ಹಿಂದೂಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.ಮಹೇಶ್ ಶೆಟ್ಟಿಯವರು ಕಳೆದ 31 ವರ್ಷಗಳಿಂದ ಹಿಂದೂ ಸಂಘಟನೆ ಮೂಲಕ ಹಿಂದೂಗಳಿಗೆ ಆಗುವ ಅನ್ಯಾಯದ ವಿರುದ್ಧ ಹೋರಾಟ ಮಾಡಿದವರು.ಇವರು ಐಟಿಸಿ, ಓಟಿಸಿ ಮಾಡಿ ಹಿಂದೂ ಧರ್ಮದ ಪರವಾಗಿ ಹೋರಾಟ ಮಾಡಿದ ನಾಯಕ. ಇವರ ಹಿಂದುತ್ವದ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಎಂದರು.

ನನ್ನ ಮಗಳ ಹೆಸರನ್ನು ಹೇಳಲು ಶಶಿರಾಜ್ ಶೆಟ್ಟಿ ಯಾರು? ಸೌಜನ್ಯಾಳ ತಾಯಿ ಕುಸುಮಾವತಿ: ನನ್ನ ಮಗಳು ಸೌಜನ್ಯ ಹತ್ಯೆಯಾದ ಬಳಿಕ ನಮ್ಮೊಂದಿಗೆ ಹೋರಾಟ, ಬೆಂಬಲಕ್ಕೆ ನಿಂತವರು ಮಹೇಶ್ ಶೆಟ್ಟಿ ತಿಮರೋಡಿ. ಅಲ್ಲದೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನಮಗೆ ಬೆಂಬಲವಾಗಿ ನಿಂತಿದ್ದಾರೆ. ಶಶಿರಾಜ್ ಶೆಟ್ಟಿ ನನ್ನ ಮಗಳು ಸೌಜನ್ಯರ ಹೆಸರನ್ನು ರಾಜಕೀಯಕ್ಕೆ ಏಳೆತಂದಿದ್ದಾರೆ. ಅಲ್ಲದೆ ಶಶಿರಾಜ್‌ ಶೆಟ್ಟಿ ಯಾರು ಎಂದು ನನಗೆ ಗೊತ್ತೆ ಇಲ್ಲ ಎಂದು ಹೇಳಿದ್ದಾರೆ.

ಅವರು ಮಾತನಾಡುವುದಾದರೆ ಹತ್ಯೆಯಾದ ನನ್ನ ಮಗಳಿಗೆ ನ್ಯಾಯ ಒದಗಿಸಿ ಕೊಡಲಿ ಅಥವಾ ನನ್ನ ಮಗಳನ್ನು ಬದುಕಿಸಿ ಕೊಡಲಿ ಎಂದು ಸೌಜನ್ಯ ತಾಯಿ ಕುಸುಮಾವತಿ ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಚಾಲಕ ಮನೋಜ್ ಕುಂಜರ್ಪ, ಗೌರವ ಅಧ್ಯಕ್ಷ ಹರೀಶ್ ಬರಮೇಲು, ಕಾರ್ಯಕರ್ತರಾದ ಜಗದೀಶ್ ಹೆಡ್ಯ, ಪ್ರಜ್ವಲ್, ವಿಠಲ ಗೌಡ ಉಪಸ್ಥಿತರಿದ್ದರು.

Ashika S

Recent Posts

ಅಯೋದ್ಯೆಗೆ ಮೋದಿ ಬೇಟಿ : ರಾಮಲಲ್ಲಾನಿಗೆ ಸಾಷ್ಟಾಂಗ ನಮಸ್ಕಾರ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರ, ದೇಶಾದ್ಯಂತ ಸಾಲು ರ‍್ಯಾಲಿಗಳ ಭರಾಟೆಯ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ…

21 mins ago

ಇಂದು ಈ ರಾಶಿಯವರಿಗೆ ನಿರೀಕ್ಷೆ ತಕ್ಕ ಫಲ ದೊರಕಲಿದೆ

ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ. ಆಪ್ತ ವ್ಯಕ್ತಿಗಳಿಗೆ ಸಹಾಯ ಮಾಡುವಿರಿ. ಮನೆಯಲ್ಲಿ ಕಲಹಗಳಿಗೆ ಆಸ್ಪದ ಕೊಡಬೇಡಿ. ಆರೋಗ್ಯ ಪರಿಪೂರ್ಣವಾಗಿರಲಿದೆ.…

34 mins ago

ಮೈಸೂರು ಜಿಲ್ಲೆಯಲ್ಲಿ ಶೇ.75ರಷ್ಟು ಮಳೆ ಕೊರತೆ

ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿದ್ದು, ಬಿತ್ತನೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ವಾಡಿಕೆಯಷ್ಟು…

8 hours ago

ಮುರುಘಾ ಶರಣರಂತೆ ಪ್ರಜ್ವಲ್‌ ರೇವಣ್ಣನನ್ನು ಬಂಧಿಸಿ: ಮಾರಸಂದ್ರ ಮುನಿಯಪ್ಪ

'ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಡಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಬಂಧಿಸಿರುವಂತೆ ಹಾಸನದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ…

9 hours ago

ಯುವತಿಯ ಮೇಲೆ ಅತ್ಯಾಚಾರವೆಸಗಿ ವೀಡಿಯೋ ಹರಿಬಿಟ್ಟ ನಾಲ್ವರು ಅಪ್ರಾಪ್ತರ ಬಂಧನ

ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೃತ್ಯವನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ  ಹರಿಬಿಟ್ಟ ಘಟನೆ ಏಪ್ರಿಲ್ 21 ರಂದು…

9 hours ago

ಸ್ವತಂತ್ರರಾಗಿ ಬದುಕಲು ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸಿ: ಕೆ. ಬುಕ್ಕಾ ಮನವಿ

ಜಿಲ್ಲೆಯ ಜ‌ನ ಸ್ವತಂತ್ರರಾಗಿ ಬದುಕಬೇಕಾದರೆ‌ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನಗೆ ಬೆಂಬಲಿಸಿ ಮತ ಹಾಕಬೇಕೆಂದು ಪಕ್ಷೇತರ ಅಭ್ಯರ್ಥಿ ಜೈರಾಜ ಕೆ.…

9 hours ago