Categories: ಮಂಗಳೂರು

ಬೆಳ್ತಂಗಡಿ: ಡಿ.7ರಂದು ಸೇಕ್ರೆಡ್ ಹಾರ್ಟ್ ಚರ್ಚ್ ನ ವಾರ್ಷಿಕ ಮಹೋತ್ಸವ

ಬೆಳ್ತಂಗಡಿ: ತಾಲೂಕಿನ ಮಡಂತ್ಯಾರಿನಲ್ಲಿರುವ ಸೇಕ್ರೆಡ್ ಹಾರ್ಟ್ ಚರ್ಚ್ ಇದರ ವಾರ್ಷಿಕ ಮಹೋತ್ಸವವು ಡಿ. 07ರಂದು ನಡೆಯಲಿದೆ. ಈ ಪಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಡಿ. 4 ರಂದು ಬೆಳಗ್ಗೆ 8ರಿಂದ ಸಹೋದರತೆಯ ಪ್ರತೀಕವಾಗಿ ದಿವ್ಯ ಬಲಿಪೂಜೆ ನಡೆಯುಲಿದ್ದು ಸೈಂಟ್ ಜೋಸೆಫ್ ವರ್ಕ್‍ಶಾಫ್, ಜೆಪ್ಪುವಿನ ಸಹಾಯ ನಿರ್ದೇಶಕ ಮತ್ತು ಸಹಾಯಕ ಮೆನೇಜರ್‍ರಾದ ವಂ. ಸ್ವಾಮಿ ಕೆನೆಟ್ ಆರ್, ಕ್ರಾಸ್ತ ರವರು ಅಂದಿನ ವಿದಿವಿಧಾನವನ್ನು ನಡೆಸಲಿದ್ದಾರೆ. ಅಂದು ಸಂಸ್ಕಾರ ರೂಪದಲ್ಲಿರುವ ಪ್ರಭು ಏಸು ಕ್ರಿಸ್ತರಿಗೆ ಬಹಿರಂಗ ಆರಾಧನೆ ಮತ್ತು ಪರಮ ಕ್ರಿಸ್ತ ಪ್ರಸಾದದ ಭವ್ಯ ಮೆರವಣಿಗೆ ನಡೆಯಲಿದೆ.

ಡಿ.6 ರಂದು ಸಂಜೆ 6ರಿಂದ ಪವಿತ್ರ ದೇವರ ವಚನಗಳ ಹಾಗೂ ಕೀರ್ತನೆಗಳ ಸಂಭ್ರಮ, ಅಸ್ವಸ್ಥರಿಗೆ ವಿಶೇಷ ಪ್ರಾರ್ಥನೆ ನಡೆಯಲಿದೆ. ಮಡಂತ್ಯಾರು ಪೇಟೆಯ ವೆಲಂಕನಿ ಮಾತೆಯ ಆವರಣದಿಂದ ಮಂಗಳೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಸಹ ನಿರ್ದೇಶಕರಾದ ವಂ. ಸ್ವಾಮಿ ಆಲ್ವಿನ್ ರಿಚರ್ಡ್ ಡಿ’ಸೋಜರವರು ಕನ್ನಡ ಭಾಷೆಯಲ್ಲಿ ದೇವರ ವಾಕ್ಯದ ಸಂದೇಶ ನೀಡಲಿರುವರು. ನಂತರ ಯೇಸು ಕ್ರಿಸ್ತರ ಪವಿತ್ರ ಹೃದಯದ ಪವಾಡ ಪ್ರತಿಮೆಯನ್ನು ಇಗರ್ಜಿಗೆ ಮೊಂಬತ್ತಿ ಮೆರವಣಿಗೆ ಮೂಲಕ ತರಲಾಗುವುದು. ನಂತರ ಈ ದಿನದ ಪವಿತ್ರ ವಿಧಿವಿಧಾನಗಳು ನಡೆಯಲಿವೆ.

ಡಿ. 7 ರಂದು ವಾರ್ಷಿಕ ಮಹೋತ್ಸವದ ಸಂಭ್ರಮ ನಡೆಯಲಿದ್ದು, ಈ ದಿನದ ಪೂಜಾ ವಿಧಿವಿಧಾನವನ್ನು ಮಂಗಳೂರು ಪೆರ್ಮನ್ನೂರು ಸಂತ ಸೆಬೆಸ್ಟಿಯಾನ್ ಚರ್ಚ್‍ನ ಸಹಾಯಕ ಧರ್ಮಗುರುಗಳಾದ ವಂದನೀಯ ಸ್ವಾಮಿ ಸ್ಟೀವನ್ ಜೋಯಲ್ ಕುಟಿನ್ನಾರವರು ನೆರವೇರಿಸಲಿದ್ದಾರೆ. ವಿವಿಧ ಇಗರ್ಜಿಗಳ ವಿಶೇಷ ಆಮಂತ್ರಿತ ಧರ್ಮಗುರುಗಳು ಈ ದಿವ್ಯ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಸಾರ್ವಜನಿಕರಿಗೆ ಇಗರ್ಜಿಯ ಮುಂಭಾಗದಲ್ಲಿ ವಿಶೇಷ ಮೊಂಬತ್ತಿ ಸೇವೆ ಮತ್ತು ಪವಿತ್ರ ಹೂ ಪ್ರಸಾದದ ವಿತರಣೆಯ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಎಲ್ಲಾ ವಿಧಿ ವಿಧಾನ, ಸಂಭ್ರಮಗಳಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿ ಶ್ರೀ ಯೇಸು ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಇಗರ್ಜಿಯ ಮುಖ್ಯ ಧರ್ಮಗುರುಗಳಾದ ವಂದನೀಯ ಫಾ| ಬೇಸಿಲ್ ವಾಸ್, ಸಹಾಯಕ ಧರ್ಮಗುರುಗಳಾದ ವಿಲಿಯಂ ಡಿ’ಸೋಜಾ, ಪ್ರಾಚಾರ್ಯರಾದ ರೆ| ಫಾ| ಜೆರೋಮ್ ಡಿ’ಸೋಜಾ, ಮತ್ತು ಮುಖ್ಯೋಪಾಧ್ಯಾಯ ಫಾ| ದೀಪಕ್ ಡೇಸಾ, ಉಪಾದ್ಯಾಕ್ಷ ಲಿಯೋ ರೊಡ್ರಿಗಸ್, ಕಾರ್ಯದರ್ಶಿ ಜೆರಾಲ್ಡ್ ಮೊರಾಸ್, ಸಂಯೋಜಕ ವಿವೇಕ್ ವಿ. ಪಾೈಸ್, ಪ್ರಚಾರ ಸಮಿತಿಯ ವಿನ್ಸೆಂಟ್ ಮೊರಾಸ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Gayathri SG

Recent Posts

ಜಿಂದಾಲ್‌ನ ಎಚ್ಎಸ್ಎಂ ಪ್ಲಾಂಟ್‌ನಲ್ಲಿ ನೀರಿನ ಟ್ಯಾಂಕ್‌ಗೆ ಬಿದ್ದು 3 ಎಂಜಿನಿಯರ್‌ಗಳು ಮೃತ್ಯು

ನೀರಿನ ಟ್ಯಾಂಕ್‌ನಲ್ಲಿ ಬಿದ್ದು ಮೂವರು ಎಂಜಿನಿಯರ್‌ಗಳು ಸಾವಿಗೀಡಾದ ಘಟನೆ ಬಳ್ಳಾರಿ ಜಿಲ್ಲೆಯ ಜಿಂದಾಲ್‌ನ ಎಚ್ಎಸ್ಎಂ ಪ್ಲಾಂಟ್‌ನಲ್ಲಿ ನಡೆದಿದೆ.

16 mins ago

ವಿದ್ಯುತ್ ಹೈಟೆನ್ಷನ್ ವೈರ್ ತಾಗಿ ವ್ಯಕ್ತಿ ಮೃತ್ಯು

ವಿದ್ಯುತ್ ಹೈಟೆನ್ಷನ್ ವೈರ್ ತಾಕಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ನಡೆದಿದೆ.

29 mins ago

ಅದೃಷ್ಟ ನಮ್ಮ ಕೈ ಹಿಡಿಯಬೇಕಿದೆ: ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​

ಕ್ರಿಕೆಟ್​ ಅಸೋಸಿಯೇಷನ್​ ಮೈದಾನದಲ್ಲಿ ನಡೆದ 17ನೇ ಆವೃತ್ತಿಯ 58ನೇ ಐಪಿಎಲ್​ ಪಂದ್ಯದಲ್ಲಿ ಅಲ್ರೌಂಡ್​ ಪ್ರದರ್ಶನದ ಫಲವಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು…

44 mins ago

“ಜೈಶ್ರೀರಾಮ್” ಹಾಡಿನಿಂದ ಕಾಲೇಜಿನಲ್ಲಿ ಧರ್ಮದಂಗಲ್: ಸಂಸದ ಪ್ರತಾಪ್​ ಸಿಂಹ ಖಂಡನೆ

ಧರ್ಮ ದಂಗಲ್​ ಕಿಡಿ ಮೈಸೂರಿನಲ್ಲಿ ಹೊತ್ತಿಕೊಂಡಿದ್ದು, ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಾಡಿದ ಜಯತು ಜಯತು ಜೈ…

1 hour ago

ಭಾರತದಲ್ಲಿ ಹಿಂದುಗಳ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಏರಿಕೆ: ಆರ್ಥಿಕ ಸಲಹಾ ಮಂಡಳಿ

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಕುಸಿತವಾಗುತ್ತಿದ್ದು ಇದೇ ವೇಳೆ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ…

1 hour ago

ಪಟಾಕಿ ತಯಾರಿಕಾ ಕಾರ್ಖಾನೆ ಸ್ಫೋಟ: 8 ಮಂದಿ ಮೃತ್ಯು

ಕಾರ್ಖಾನೆಯೊಂದರಲ್ಲಿ ಪಟಾಕಿ ಸಿಡಿದು 8 ಜನರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಶಿವಕಾಶಿಯಲ್ಲಿ ನಡೆದಿದೆ.

2 hours ago