Categories: ಮಂಗಳೂರು

ಬೆಳ್ತಂಗಡಿ: ಅರ್ಹ ಫಲಾನುಭವಿಗಳಿಗೆ 94ಸಿ ,94ಸಿ ಸಿ, ಹಕ್ಕುಪತ್ರ ವಿತರಣೆ

ಬೆಳ್ತಂಗಡಿ: ತಾಲೂಕಿನಲ್ಲಿ ಹಕ್ಕುಪತ್ರವನ್ನು‌ ನಿರಂತರವಾಗಿ ವಿತರಿಸುವ ಮೂಲಕ ಉತ್ತಮ ವ್ಯವಸ್ಥೆಗಳನ್ನು ಜನರಿಗೆ ಮಾಡುವ ದೃಷ್ಟಿಯಿಂದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ 4 ವರ್ಷಗಳ ಅವಧಿಯಲ್ಲಿ ಸುಮಾರು 3 ಸಾವಿರ ಹಕ್ಕುಪತ್ರಗಳನ್ನು ವಿತರಿಸುವ ಕೆಲಸ ಶಾಸಕನಾಗಿ ಬಂದ್ದ ನಂತರ ಮಾಡಿದ್ದೇನೆ ಎಂದು ಹೇಳಲು ಸಂತೋಷವಾಗುತ್ತಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಸೋಮವಾರ ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಕಂದಾಯ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.

ಸರ್ಕಾರದ ಜನಪರ ಯೋಜನೆಗಳು ತಾಲೂಕಿನ ಕಟ್ಟ ಕಡೆಯ ವ್ಯಕ್ತಿಗೂ ಮುಟ್ಟ ಬೇಕು ಎಂಬ ನಿಟ್ಟಿನಲ್ಲಿ ತಾಲೂಕಿನ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಹಕಾರದ ಮೂಲಕ ಜನರಿಗೆ ಉತ್ತಮ ರೀತಿಯಲ್ಲಿ ಮುಟ್ಟುತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಉಜ್ವಲ ಗ್ಯಾಸ್ ಯೋಜನೆಯಿಂದಾಗಿ ತಾಲೂಕಿನ ಸುಮಾರು 18 ಸಾವಿರ ಮನೆಗಳಿಗೆ ಗ್ಯಾಸ್ ವಿತರಿಸುವಂತಹ ವ್ಯವಸ್ಥೆ ಆಗಿದೆ . ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಕೃಷಿಕರಿಗೆ 6 ಸಾವಿರ ರೂಪಾಯಿಂತೆ ತಾಲೂಕಿನ ಶೆ 70 ಕೃಷಿಕರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗುವ ಮೂಲಕ ಉತ್ತಮ ರೀತಿಯಲ್ಲಿ ಅನುಷ್ಟಾನ ಆಗುತ್ತಿದೆ. ಈ ರೀತಿಯ ಸರ್ಕಾರದ ಯೋಜನೆಗಳು ನಮ್ಮ ತಾಲೂಕಿನ ಜನರಿಗೆ ಸಮರ್ಪಕವಾಗಿ ಮುಟ್ಟಬೇಕು ಎಂಬ ನಿಟ್ಟಿನಲ್ಲಿ ಅದಕ್ಕೆ ಬೇಕಾದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತಿದೆ. ತಾಲೂಕಿನ ಅಭಿವೃದ್ಧಿ ಕೆಲಸಗಳನ್ನು ನೋಡಿದಾಗ ತಾಲೂಕಿನಾದ್ಯಂತ ಸರ್ವ ಋತು ರಸ್ತೆಗಳಾಗಬೇಕು ಎಂಬ ನಿಟ್ಟಿನಲ್ಲಿ ಅಗಲದ ರಸ್ತೆ ನಿರ್ಮಿಸಿ ಹಳ್ಳಿ ಹಳ್ಳಿಗಳನ್ನು ಸಂಪರ್ಕಿಸುವ ಕೆಲಸ ಪೂರ್ಣ ಪ್ರಮಾಣದಲ್ಲಿ ಆಗುತ್ತಿದೆ. ಅದಲ್ಲದೇ ಕಿಂಡಿ ಅಣೆಕಟ್ಟುಗಳನ್ನು ರಚಿಸಿ ಭೂಮಿಯ ಅಂತರ್ಜಾಲ ಹೆಚ್ಚಿಸುವ ಕಾರ್ಯಗಳೂ ನಡೆಯುತ್ತಿದೆ. ವಿದ್ಯುತ್ ವ್ಯವಸ್ಥೆಗೆ ಬೇಕಾಗಿ ತಾಲೂಕಿನ ವಿವಿಧ ಕಡೆಗಳಲ್ಲಿ ಸುಮಾರು 440 ಟ್ರಾನ್ಸ್ ಫಾರ್ಮರ್ ಅನುಷ್ಟಾನ ಗೊಂಡಿದೆ ತಾಲೂಕಿನ ಸಮಗ್ರವಾದ ಅಭಿವೃದ್ಧಿಯ ದೃಷ್ಟಿಯಲ್ಲಿ ತಾಲೂಕಿನ ಕೆಲಸಗಳು ನಡೆಯುತ್ತಿವೆ. ಎಂದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ, ನಾವೂರು ಗ್ರಾ.ಪಂ. ಅಧ್ಯಕ್ಷ ಗಣೇಶ ಗೌಡ, ಪುದುವೆಟ್ಟು ಗ್ರಾ.ಪಂ. ಅಧ್ಯಕ್ಷ ಯಶವಂತ್, ನಿಡ್ಲೆ ಗ್ರಾ.ಪಂ. ಅಧ್ಯಕ್ಷ ಪ್ರವೀಣ್ ಹೆಬ್ಬಾರ್, ಕಲ್ಮಂಜ ಗ್ರಾ.ಪಂ. ಅಧ್ಯಕ್ಷ ಶ್ರೀಧರ್, ಶಿರ್ಲಾಲ್ ಗ್ರಾ.ಪಂ. ಅಧ್ಯಕ್ಷ ತಾರಾನಾಥ ಗೌಡ, ಪಡಂಗಡಿ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ, ಕಳಿಯ ಗ್ರಾ.ಪಂ. ಅಧ್ಯಕ್ಷೆ
ಸುಭಾಷಿಣಿ ಜೆ.ಗೌಡ, ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷ ಕೆ.ವಿ. ಪ್ರಸಾದ್, ಮೇಲಂತಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಹರಿಣಾಕ್ಷಿ, ಬಳಂಜ ಗ್ರಾ.ಪಂ. ಅಧ್ಯಕ್ಷ ಹೇಮಂತ್, ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಜೆ, ಉಪತಹಸೀಲ್ದಾರ್ ದಯಾನಂದ ಹೆಗ್ಡೆ, 94ಸಿ ವಿಷಯ ನಿರ್ವಾಹಕ ಶಂಕರ್, ಗ್ರಾಮಕರಣಿಕರಾದ ಸತೀಶ್ ಪಿಂಟೋ, ಪರಮೇಶ್ ಟಿ. ಉಪಸ್ಥಿತರಿದ್ದರು.

94ಸಿ ವಿಷಯ ನಿರ್ವಾಹಕಿ ಹೇಮಾ ಕೆ. ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಬೆಳ್ತಂಗಡಿ ತಾಲೂಕಿನ ಮೂರು ಹೋಬಳಿಯ ಅರ್ಹ ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರ ವಿತರಿಸಲಾಯಿತು. ಬೆಳ್ತಂಗಡಿ‌ ಹೋಬಳಿಯಲ್ಲಿ 4 ಮಂದಿಗೆ 94ಸಿಸಿ, 22 ಮಂದಿಗೆ 94ಸಿ, ಕೊಕ್ಕಡ ಹೋಬಳಿಯ 40 ಮಂದಿಗೆ ಹಾಗೂವೇಣೂರು ಹೋಬಳಿಯ 44 ಮಂದಿಗೆ 94 ಸಿ ವಿತರಿಸಲಾಯಿತು.

Sneha Gowda

Recent Posts

ಮೋದಿ ಪಾತ್ರದಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಸತ್ಯರಾಜ್

ಸಿನಿ, ರಾಜಕೀಯ, ಕ್ರೀಡಾ ಕ್ಷೇತ್ರದ ದಿಗ್ಗಜರ ಬದುಕಿನ ಮೇಲೆ ಸಿನಿಮಾ ಮಾಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಇತ್ತೀಚೆಗೆ…

28 seconds ago

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಸೈಬರ್ ವಂಚನೆ: ಓರ್ವ ವಶಕ್ಕೆ

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಕೂತು ಸೈಬರ್ ವಂಚನೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರ…

12 mins ago

ಯಾರನ್ನು ಬಂಧಿಸಬೇಕೋ ಅವರನೆಲ್ಲಾ ಬಂಧಿಸಿ ಜೈಲಿಗೆ ತಳ್ಳಿ ಎಂದು ಮೋದಿಗೆ ಚಾಲೆಂಜ್‌ ಹಾಕಿದ ಕೇಜ್ರಿವಾಲ್

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ…

23 mins ago

ಜುಲೈ 1ರಿಂದ ಮೂರು ಹೊಸ ಕ್ರಿಮಿನಲ್ ಕಾನೂನು ಜಾರಿ

ಮೂರು ಹೊಸ ಕ್ರಿಮಿನಲ್ ಕಾನೂನುಗಳು ಸರ್ಕಾರದ ಅಧಿಸೂಚನೆಯ ಪ್ರಕಾರ ಜುಲೈ 1ರಿಂದ ಜಾರಿಗೆ ಬರಲಿವೆ. ಇದರಲ್ಲಿ ಭಾರತೀಯ ನ್ಯಾಯ ಸಂಹಿತಾ,…

43 mins ago

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಿಭವ್‌ ಕುಮಾರ್‌ 5 ದಿನ ಕಸ್ಟಡಿಗೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ದಿಲ್ಲಿ ಮುಖ್ಯಮಂತ್ರಿ…

1 hour ago

ಆರ್​ಸಿಬಿ ಮುಂದಿನ ಪಂದ್ಯವನ್ನು ಯಾವ ತಂಡದ ಜೊತೆ ಆಡಲಿದೆ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಸೋಲಿಸಿ ರಾಯಲ್ಲಾಗಿಯೇ ಪ್ಲೇಆಫ್​ಗೆ ಪ್ರವೇಶಿಸಿದೆ. ಇನ್ನು ಆರ್​ಸಿಬಿ…

1 hour ago