ಮಂಗಳೂರು

ಬೆಳ್ತಂಗಡಿ: ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾಂನಂದ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ

ಬೆಳ್ತಂಗಡಿ: ನಿತ್ಯಾನಂದ ನಗರ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾಚರಣೆಯ ಬಗ್ಗೆ ಭಕ್ತರ ಸಮಾಲೋಚನಾ ಸಭೆ ಜೂ.27 ರಂದು ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದಲ್ಲಿ ಚತುರ್ಮಾಸ್ಯ ಸಮಿತಿ ಅಧ್ಯಕ್ಷ ಶಾಸಕ ಹರೀಶ್ ಪೂಂಜಾರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸ್ವಾಮೀಜಿ ಆಶೀರ್ವಚನ ನೀಡುತ್ತಾ ಲೋಕಕಲ್ಯಾಣಕ್ಕಾಗಿ ಯುಗ ಯುಗಾoತರದಿಂದ ಬಂದಿರುವ ಚತುರ್ಮಾಸ್ಯ ವೃತದ ಮೂಲಕ ಅಧ್ಯತ್ಮಿಕ ಕ್ರೋಡಿಕರಣವಾಗಲಿ ಶ್ರದ್ಧಾ ಭಕ್ತಿಯಿಂದ ಮಾಡುವ ಈ ವೃತ ಸರಳ ಮತ್ತು ಸಮಾನತೆಗೆ ಪ್ರೇರಣೆಯಾಗಲಿ. ಹರಿದ್ವಾರದಲ್ಲಿ ಶಿಷ್ಯವರ್ಗಕ್ಕಾಗಿ ನಾಲ್ಕು ಎಕ್ರೆ ಜಾಗ ಭಕ್ತರ ಸಹಕಾರದಿಂದ ಗುರುತಿಸಲಾಗಿದೆ ಎಂದರು.

ಶಾಸಕ ಹರೀಶ್ ಪೂಂಜಾ ಮಾತನಾಡುತ್ತಾ ಜು. 13 ರಿಂದ ಅಗೋಸ್ಟ್ 29 ರ ವರೆಗೆ 48 ದಿನಗಳಲ್ಲಿ ನಡೆಯಲಿರುವ ಈ ವರ್ಷದ ಚತುರ್ಮಾಸ್ಯ ವೃತ 5 ಜಿಲ್ಲೆಗಳ ಗುರುಗಳ ಶಿಷ್ಯರಿಂದ ಶ್ರದ್ಧಾ ಭಕ್ತಿಯಿಂದ ನಡೆಯಲಿದ್ದು ಜಿಲ್ಲೆಯ ಮಂತ್ರಿಗಳ ಮತ್ತು ಶಾಸಕರ ಮತ್ತು ಭಕ್ತರ ಸಹಕಾರದಿಂದ ನಡೆಯಲಿದೆ.

ಗುರುದೇವ ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಶಾಶ್ವತ ಚಪ್ಪಾರ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಜುಲೈ 12 ರ ಒಳಗೆ ಕಾಮಗಾರಿ ಮುಗಿಯಲಿದೆ. ಎಲ್ಲರು ಯಶಸ್ವಿವಿಗೆ ಸಹಕಾರ ನೀಡ ಬೇಕು ಎಂದರು. ಶ್ರೀರಾಮ ಕ್ಷೆತ್ರ ಸೇವಾ ಸಮಿತಿ ಚಂಚಾಲಕ ಜಯಂತ್ ಕೋಟ್ಯಾನ್ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಚತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಗಣೇಶ್ ಗೌಡ, ತಾಲೂಕು ಶ್ರೀ ರಾಮ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು, ಸದಸ್ಯರು,ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಶಿಷ್ಯವರ್ಗದವರು ಉಪಸ್ಥಿತರಿದ್ದರು. ಶ್ರೀ ರಾಮ ಕ್ಷೆತ್ರ ಸಮಿತಿಯ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ನೀರೂಪಿಸಿ ವಂದಿಸಿದರು.

Sneha Gowda

Recent Posts

ಬ್ಯಾಂಕ್ ಗಳು ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಮಾಡಬೇಡಿ: ಡಿಸಿ

ತೀವ್ರ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದು, ಬ್ಯಾಂಕುಗಳು ಒತ್ತಾಯ ಪೂರ್ವಕವಾಗಿ ರೈತರಿಂದ ಸಾಲ ವಸೂಲಿ ಮಾಡಬಾರದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ…

6 hours ago

ಕೇರಳದ 9 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಇಂದಿನಿಂದ ಮುಂದಿನ ಮಂಗಳವಾರದವರೆಗೆ ಕೇರಳದ  ಬಹುತೇಕ ಭಾಗಗಳಲ್ಲಿ  ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ  ಮುನ್ಸೂಚನೆ ನೀಡಿದೆ.

7 hours ago

ಕೇರಳದಲ್ಲಿ ವೆಸ್ಟ್ ನೈಲ್ ಜ್ವರ: ಬಾವಲಿ ಚೆಕ್ ಪೋಸ್ಟ್ ನಲ್ಲಿ ಕಟ್ಟೆಚ್ಚರ

ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಮೈಸೂರು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಕಟ್ಟೆಚ್ಚರ ವಹಿಸಲಾಗಿದ್ದು, ಕೇರಳದಿಂದ ಆಗಮಿಸುವವರತ್ತ ನಿಗಾವಹಿಸಲಾಗುತ್ತಿದೆ.

7 hours ago

ಬಿರುಗಾಳಿಯೊಂದಿಗೆ ಸುರಿದ ಮಳೆ: ಮಾವು, ಪಪ್ಪಾಯಿ ಬೆಳೆಗೆ ಹಾನಿ

ತಾಲ್ಲೂಕಿನ ವಿವಿಧೆಡೆ ಮಂಗಳವಾರ ಬಿರುಗಾಳಿಯೊಂದಿಗೆ ಸುರಿದ ಮಳೆಗೆ ಮಾವು ಹಾಗೂ ಪಪ್ಪಾಯಿ ಬೆಳೆಗೆ ಹಾನಿ ಉಂಟಾಗಿದೆ.

7 hours ago

ಚಾಮರಾಜನಗರ: ಕುಸಿದು ಬಿದ್ದು ಕೂಲಿ ಕಾರ್ಮಿಕ ಸಾವು

ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿದ ಘಟನೆ   ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ.

8 hours ago

ಸಾಮಾನ್ಯ ಪ್ರಯಾಣಿಕರಂತೆ ಟಿಕೆಟ್‌ ಪಡೆದು ಬಸ್‌ನಲ್ಲಿ ಸಂಚರಿಸಿದ ನ್ಯಾಯಾಧೀಶ

ನಗರದಿಂದ ಸಿದ್ಧೇಶ್ವರ ಮಾರ್ಗವಾಗಿ ಭಾಲ್ಕಿಗೆ ಬಸ್ ಓಡಿಸಬೇಕೆಂಬ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದೆ.

8 hours ago