Categories: ಮಂಗಳೂರು

ಬೆಳ್ತಂಗಡಿ: ಧರ್ಮಸ್ಥಳ ಮಹೋತ್ಸವ ಸಭಾ ಭವನದಲ್ಲಿ ಸೆ.19ರಿಂದ ಭಜನಾ ಕಮ್ಮಟ ತರಬೇತಿ

ಬೆಳ್ತಂಗಡಿ: ಭಜನಾ ಕಮ್ಮಟದಲ್ಲಿ ಭಜನಾ ತರಬೇತಿಯು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗೆಡೆಯವರ ಮಾರ್ಗದರ್ಶನದಲ್ಲಿ ಸೆ.19 ರಿಂದ 24 ನೇ ವರ್ಷದ ಭಜನಾ ಕಮ್ಮಟ ತರಬೇತಿಯು ಮಹೋತ್ಸವ ಸಭಾ ಭವನದಲ್ಲಿ ನಡೆಯುತ್ತಿದೆ.

174 ಭಜನಾ ಮಂಡಳಿಗಳಿಂದ 322 ಶಿಬಿರಾರ್ಥಿಗಳು ಭಜನೆಯಲ್ಲಿ ಭಾಗವಹಿಸಿರುತ್ತಾರೆ. ವಿಶೇಷವಾಗಿ 138 ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿರುತ್ತಾರೆ, ಕಳೆದ ಮೂರು ದಿನಗಳಲ್ಲಿ ರಾಗ ತಾಳಗಳ ಪರಿಚಯ ಹಾಗೂ ತರಗತಿಯನ್ನು ಶಿಕ್ಷಕಿ ಮನೋರಮಾ ತೋಳ್ಪಾಡಿತ್ತಾಯ, ಸಂಗೀತ ವಿದುಷಿ ಶ ಉಷಾ ಹೆಬ್ಬಾರ್ ಹಾಗೂ ಶ್ರೀಮತಿ ಸಂಗೀತ ಬಾಲಚಂದ್ರ ಉಡುಪಿ, ಯವರು ಭಜನಾ ತರಬೇತಿಯನ್ನು ನೀಡಿರುತ್ತಾರೆ. ಸೌಮ್ಯ ಸುಭಾಷ್ ಸಂಪ್ರದಾಯ ಹಾಡುಗಳ ತರಬೇತಿಯನ್ನು ನಡೆಸಿಕೊಟ್ಟರು. ಈ ದಿನ ಭಜನಾ ಕಮ್ಮಟದ ಮೂರನೆಯ ದಿನವಾಗಿದ್ದು ಪ್ರಥಮ ಬಾರಿಗೆ ಭಜನಾ ತರಬೇತಿಯಲ್ಲಿ ಹಿಮ್ಮೇಳದಲ್ಲಿ ಡೋಲಕ್, ಕೀ ಬೋರ್ಡ್‍ಗಳನ್ನು ಬಳಸಲಾಗಿದೆ.

ಸೆ.23 ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಭಜನಾ ಮಂಗಳೋತ್ಸವ ನಡೆಯಲಿದ್ದು ಅಂದಾಜು 500 ಮಂಡಳಿಗಳಿಂದ 6000 ಭಜಕರು ಭಾಗವಹಿಸುವ ನಿರೀಕ್ಷೆ ಇದೆ.

ಸೆ.19 ಮತ್ತು ಸೆ.20 ರಂದು ರಾಮಕೃಷ್ಣ ಕಾಟುಕುಕ್ಕೆ ಹಾಗೂ ಸೆ.20 ಮತ್ತು ಸೆ.21 ರಂದು ಉಪ್ಪುಂದ ರಾಜೇಶ್ ಪಡಿಯಾರ್ ಮೈಸೂರು, ಸೆ.21 ಮತ್ತು ಸೆ.22 ರಂದು ಶಂಕರ ಶ್ಯಾನುಭಾಗ್ ಬೆಂಗಳೂರು, ಇವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲಿದ್ದಾರೆ.

ಪ್ರತಿದಿನ ಮದ್ಯಾಹ್ನ ಗಂಟೆ 12 ರಿಂದ 1.00 ರ ವರೆಗೆ ಉಪನ್ಯಾಸ ಕಾರ್ಯಕ್ರಮವಿದ್ದು, ಯಕ್ಷಗಾನ‌ ಕಲಾವಿದ ಉಜಿರೆ ಅಶೋಕ್ ಭಟ್ ಇವರಿಂದ ಭಜನಾ ಮಂಡಳಿಗಳಲ್ಲಿ ಧಾರ್ಮಿಕ ಆಚರಣೆಗಳು, ಮನು ಹಂದಾಡಿ ಕುಂದಾಪ್ರ ಕನ್ನಡದ ಸಾಂಸ್ಕೃತಿಕ ರಾಯಭಾರಿ, ಇವರಿಂದ ಕುಂದಾಪ್ರ ಕನ್ನಡ-ಗ್ರಾಮ್ಯ ಭಾಷೆಯ ಹಾಸ್ಯ ಮಾತುಗಾರಿಕೆ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಮ್ಮಟದ ಮೊದಲನೇ ದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ|| ಹೇಮಾವತಿ ವೀ. ಹೆಗ್ಗಡೆಯವರ ಪರಿಕಲ್ಪನೆಯ ‘ಯಡವಟ್ಟು ರಾಜ’ ಎಂಬ ನಾಟಕ ಧರ್ಮಸ್ಥಳದ ರಂಗಶಿವ ಕಲಾ ಬಳಗದವರಿಂದ ಪ್ರದರ್ಶಿಸಲ್ಪಿಟ್ಟಿತು.

ಎರಡನೆ ಹಾಗೂ ಮೂರನೆಯ ದಿನ ಧರ್ಮಸ್ಥಳದ ಆಂಗ್ಲ ಮಾದ್ಯಮ ಶಾಲೆ ವಿದ್ಯಾರ್ಥಿಗಳಿಂದ ಕಿರುನಾಟಕ ಪ್ರದರ್ಶನಗೊಂಡಿತು. ಹಾಗೂ ರಂಗಶಿವ ಕಲಾ ಬಳಗ ಧರ್ಮಸ್ಥಳ ಇವರು ರಂಗಗೀತೆಗಳನ್ನು ಪ್ರಸ್ತುತಪಡಿಸಿದರು.
ಕಮ್ಮಟದ ಸಂಧರ್ಭದಲ್ಲಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು, ಶ್ರೀ ಮೋಹನದಾಸ ಸ್ವಾಮೀಜಿ, ಡಾ|| ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಅಮಿತ್, ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು.

Gayathri SG

Recent Posts

ಸಮಸ್ಯೆಗಳ ಆಗರ: ಮೂಲಸೌಕರ್ಯಗಳ ಕೊರತೆಗೆ ಬೇಸತ್ತ ಸಾರ್ವಜನಿಕರು

ಪಟ್ಟಣದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸ್ಥಳೀಯ ಆಡಳಿತದ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಬೇಸರಗೊಂಡಿದ್ದಾರೆ. ಪಟ್ಟಣದಲ್ಲಿ ಒಟ್ಟು 27 ವಾರ್ಡ್‌ಗಳು…

6 mins ago

ನಾಳೆ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನೆ

ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಮೇ.19 ರಂದು ಭಾನುವಾರ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ ಸಾಯಿಬಾಬಾ…

8 mins ago

ಚಾಮರಾಜನಗರದಲ್ಲಿ ಮುಂದುವರೆದ ಮಳೆ ಆರ್ಭಟ: ವಾಹನ ಸವಾರರ ಪರದಾಟ

ಗಡಿಜಿಲ್ಲೆ ವರುಣಾರ್ಭಟ ಮುಂದುವರೆದಿದ್ದು ಶನಿವಾರ ಮಧ್ಯಾಹ್ನದ ಜಿಲ್ಲಾಕೇಂದ್ರದಲ್ಲಿ ಒಂದೂವರೆ ತಾಸು ಜೋರು ಮಳೆಯಾಯಿತು.

19 mins ago

ನ್ಯೂಯಾರ್ಕ್​ಗೆ ತೆರಳಲಿದೆ ಟೀಮ್ ಇಂಡಿಯಾದ ಮೊದಲ ಬ್ಯಾಚ್ : ಯಾವಾಗ?

ಮುಂದಿನ ತಿಂಗಳು ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​ಗಾಗಿ ಟೀಮ್​ ಇಂಡಿಯಾದ ಮೊದಲ ಬ್ಯಾಚ್​…

23 mins ago

ಖಾಸಗಿ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಶಾಸಕ ಶರಣು ಸಲಗರ್‌

ಖಾಸಗಿ ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ್‌ ಅವರು ಪತ್ನಿ ಹಾಗು ಮಕ್ಕಳೊಂದಿಗೆ ಹೆಜ್ಜೆ ಹಾಕಿದ್ದಾರೆ. ಶಾಸಕ ಶರಣು ಸಲಗರ್‌ರಿಂದ…

34 mins ago

ಸ್ವಾತಿ ಮೇಲಿನ ಹಲ್ಲೆ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಬಿಭವ್ ಅರ್ಜಿ

ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ…

1 hour ago