Categories: ಮಂಗಳೂರು

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘದ ವತಿಯಿಂದ “ಬಂಟೆರೆ ಕೆಸರ್ದ ಗೊಬ್ಬು-2022”

ಬೆಳ್ತಂಗಡಿ : ವೀಳ್ಯದೆಲೆಯ ಬಳ್ಳಿ ಭೂಮಿಗೆ ಸಾಕ್ಷಿಯಾದರೆ, ವೀಳ್ಯದೆಲೆ ಆಕಾಶಕ್ಕೆ ಸಾಕ್ಷಿ, ಹೀಗೆ ಭೂಮಿ ಮತ್ತು ಆಕಾಶವನ್ನು ಸಾಕ್ಷಿಯಾಗಿ ಇಟ್ಟುಕೊಂಡು ನಾವು ಒಳ್ಳೆಯ ಕೆಲಸ ಮಾಡಬೇಕು,ಕ್ರೀಡೆಯೊಂದಿಗೆ ತುಳುವರ ಆಚಾರ ವಿಚಾರಗಳನ್ನು ಉಳಿಸುವ ಕೆಲಸವನ್ನು ನಾವು ಮಾಡಬೇಕು ಎಂದು ಉದ್ಯಮಿ ತುಳುಕೂಟ ಬರೋಡಾ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ನವಶಕ್ತಿ ಗುರುವಾಯನಕೆರೆ ಹೇಳಿದರು.

ಅವರು ಬಂಟರ ಯಾನೆ ನಾಡವರ ಸಂಘ (ರಿ) ತಾಲೂಕು ಮಹಿಳಾ ಬಂಟರ ವಿಭಾಗ ಬೆಳ್ತಂಗಡಿ, ವಲಯ ಬಂಟರ ಸಂಘ ಉಜಿರೆ ಸಹಕಾರದಲ್ಲಿ ಬೆಳ್ತಂಗಡಿ ತಾಲೂಕು ಯುವ ಬಂಟರ ವಿಭಾಗದ ವತಿಯಿಂದ ಉಜಿರೆ ಶ್ರೀ ದುರ್ಗಾ ನಿಲಯದ ಕಂಬಲ್ದಡ್ಡ ಗದ್ದೆಯಲ್ಲಿ ನಡೆದ ಬಂಟೆರೆ ಕೆಸರ್ದ ಗೊಬ್ಬು-2022 ಕ್ರೀಡಾ ಕೂಟದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದಿನಿಂದಲೂ ನಾವು ಭೂಮಿಯನ್ನು ತಾಯಿಯೆಂದು, ಮಣ್ಣನ್ನು ದೇವರೆಂದು ಪೂಜಿಸಿಕೊಂಡು, ಕೃಷಿಯನ್ನು ಮೂಲ ಕಸುಬಾಗಿನ್ನಾಗಿಸಿಕೊಂಡು ಬಂದವರು ಅದ್ದರಿಂದಲೇ ಮಣ್ಣನ್ನು ಪವಿತ್ರ ಎಂದು ನಂಬಿಕೊಂಡು ಬಂದವರು. ಇವತ್ತು ಕೆಸರ್ದ ಗೊಬ್ಬು ಎಂಬ ಕ್ರಿಡಾಕೂಟವನ್ನು ಆಯೋಜಿಸುವ ಮೂಲಕ ಮಣ್ಣಿನ ಪವಿತ್ರತೆಯನ್ನು ಈಗಿನ ಸಮಾಜಕ್ಕೆ ಮುಟ್ಟಿಸುವಂತಹ ಕೆಲಸವನ್ನು ಯುವಕರು ಮಾಡುತ್ತಿರುವುದು ಶ್ಲಾಘನೀಯ.

ಕಂಬಳದ ಕೋಣಗಳ ಜೊತೆ ಬಂಟೆರೆ ಕೂಟಕ್ಕೆ ಸ್ವಾಗತ ಕೋರಿದ್ದು ನನಗೆ ಬಹಳ ಸಂತೋಷವಾಯಿತು ಎಂದ ಅವರು ಇಂತಹ ಕ್ರೀಡಾಕೂಟದಲ್ಲಿ ಮಕ್ಕಳಿಗೆ ವಿಶೇಷ ಆಸಕ್ತಿ ಹುಟ್ಟಬೇಕು. ಅದರಲ್ಲೂ ಬಹಳ ಮುಖ್ಯವಾಗಿ ಮುಂಬೈ, ಬೆಂಗಳೂರಿನಲ್ಲಿರುವ ಮಕ್ಕಳಿಗೆ ಇಂತಹ ಆಟಗಳನ್ನು ಪರಿಚಯಿಸುವ ಕಾರ್ಯ ಆಗಬೇಕು. ಈ ರೀತಿಯ ಇನ್ನಷ್ಟು ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯಲಿ. ಮಕ್ಕಳಿಗೆ ಈ ಮಣ್ಣಿನ ಮೇಲೆ ಪ್ರೀತಿ ಹುಟ್ಟಲಿ ಎಂದು ಹೇಳಿದರು.

ಹಿರಿಯರಾದ ಸದಾಶಿವ ಶೆಟ್ಟಿ ಮತ್ತು ಸುನಂದ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಈ ಗದ್ದೆಯಲ್ಲಿ ನಡೆಯುವಂತಹ ಕ್ರೀಡಾಕೂಟವು ಜಾಗದ ದೈವ ದೇವರುಗಳ ಆಶೀರ್ವಾದದಿಂದ ಯಾವುದೇ ವಿಘ್ನವಿಲ್ಲದೇ ನಡೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ತಾಲೂಕು ಬಂಟರ
ಸಂಘದ ಅಧ್ಯಕ್ಷರಾದ ಜಯರಾಮ್ ಶೆಟ್ಟಿ ಮುಂಡಾಡಿಗುತ್ತು, ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪವತಿ ಆರ್ .ಶೆಟ್ಟಿ, ವಿಜಯ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯರಾಮ ಶೆಟ್ಟಿ ಪಡಂಗಡಿ, ಜಾಗತಿಕ ಬಂಟರ ಸಂಘ ಒಕ್ಕೂಟ ಮಂಗಳೂರು ನಿರ್ದೆಶಕ ಜಯಂತ್ ಶೆಟ್ಟಿ ಕುಂಟಿನಿ, ರಘುರಾಮ ಶೆಟ್ಟಿ ಸಂಚಾಲಕರು, ಮಾತೃಸಂಘ ತಾಲೂಕು ಸಮಿತಿ,ವಿಠಲ ಶೆಟ್ಟಿ ಶ್ರದ್ಧಾ,ಲಾಯಿಲ, ಉಮೇಶ್ ಶೆಟ್ಟಿ ಶ್ರೀ ದುರ್ಗಾ ಉಜಿರೆ, ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಶೋಭಾ ವಿ. ಶೆಟ್ಟಿ, ನಡೆಯಿತು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭ
ಕ್ರೀಡಾಕೂಟದಲ್ಲಿ ಮಹಿಳೆಯರಿಗೆ, ಪುರುಷರಿಗೆ, ಪುಟಾಣಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ಸಂಜೆ ಯುವ ವಿಭಾಗದ ಅಧ್ಯಕ್ಚ ಸುಜಯ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಕ್ರಿಡಾಕೂಟದಲ್ಲಿ ಭಾಗವಹಿಸಿದ ತಂಡಗಳಿಗೆ ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ರಾಜುಶೆಟ್ಟಿ ಬೆಂಗೆತ್ಯಾರ್, ರಾಧಾಕೃಷ್ಣ ಶೆಟ್ಟಿ ಹಂಬೆಟ್ಟು, ಪುಷ್ಪರಾಜ್ ಶೆಟ್ಟಿ, ಪ್ರಕಾಶ್ ಶೆಟ್ಟಿ ನೊಚ್ಛ,ರಮೇಶ್ ಶೆಟ್ಟಿ, ಜಯಂತ ಶೆಟ್ಟಿ ಮಡಂತ್ಯಾರ್, ರವೀಂದ್ರ ಶೆಟ್ಟಿ ಉಜಿರೆ, ವನಿತಾ.ವಿ. ರೈ, ವಸಂತ ಶೆಟ್ಟಿ ಶ್ರದ್ಧಾ , ಸುರೇಶ್ ಶೆಟ್ಟಿ ಲಾಯಿಲ, ಪ್ರಸಾದ್ ಶೆಟ್ಟಿ ಎಣಿಂಜೆ, ಕಿರಣ್ ಕುಮಾರ್ ಶೆಟ್ಟಿ, ಯುವ ವಿಭಾಗದ ಉಪಾಧ್ಯಕ್ಷ ದಿನೇಶ್ ಶೆಟ್ಟಿ, ಕೋಶಾಧಿಕಾರಿ ಶಶಿರಾಜ್ ಶೆಟ್ಟಿ, ಜತೆ ಕಾರ್ಯದರ್ಶಿ ಸಂತೋಷ್ ಚಿಬಿದ್ರೆ, ಸೇರಿಂತೆ ಸದಸ್ಯರು, ಮಹಿಳಾ ವಿಭಾಗದ ಪದಾಧಿಕಾರಿಗಳು ಸದಸ್ಯರು ಇದ್ದರು. ನಿತೇಶ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.ವೆಂಕಟರಮಣ ಶೆಟ್ಟಿ ಸ್ವಾಗತಿಸಿ ಯುವ ವಿಭಾಗದ ಕಾರ್ಯದರ್ಶಿ ಅಜೇಯ್ ಮಡಂತ್ಯಾರ್ ಧನ್ಯವಾದವಿತ್ತರು.

Sneha Gowda

Recent Posts

ಅಧಿಕಾರಿಗಳಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಮತದಾನದ ಆರೋಪ: ಸ್ಥಳಕ್ಕೆ ಉಮೇಶ ಜಾಧವ್ ಭೇಟಿ

ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…

4 hours ago

ಅತನೂರ ಗ್ರಾಮದಲ್ಲಿ ಸರ್ವಧರ್ಮಗಳ ಆರಾಧ್ಯದೈವ ನಂದಿ ಬಸವನ ಜಾತ್ರೆಯ ಸಡಗರ

ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.

4 hours ago

ಪ್ರೀತಿಸಿ ಮದುವೆಯಾದ ಅನ್ಯಕೋಮಿನ ಜೋಡಿ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…

5 hours ago

ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ  ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

5 hours ago

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…

6 hours ago

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

6 hours ago