Categories: ಮಂಗಳೂರು

ಬಂಟ್ವಾಳ: ಎಸ್ ಡಿ ಪಿಐ, ನಿಷೇಧಿತ ಪಿಎಫ್‌ಐ ಸಂಘಟನೆಯ ಬಿ ಟೀಮ್‌: ಅಣ್ಣಾಮಲೈ

ಬಂಟ್ವಾಳ: ಬಂಟ್ವಾಳದಲ್ಲಿ ಬಿಜೆಪಿ ಪರವಾದ ಅಲೆ ಇದ್ದು, ಕ್ಷೇತ್ರವನ್ನು ಬಂಟ್ವಾಳ 2.0ರ ಕಡೆಗೆ ಒಯ್ಯಲು ರಾಜೇಶ್ ನಾಯ್ಕ್ ಕನಸುಕಟ್ಟಿದ್ದಾರೆ, ಅದನ್ನು ಕಾರ್ಯಕರ್ತರು ಸಾಕಾರಗೊಳಿಸಬೇಕು ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕರೆ ನೀಡಿದ್ದಾರೆ.

ಶನಿವಾರ ಬೆಳಿಗ್ಗೆ ಪುತ್ತೂರಿಗೆ ತೆರಳುವ ದಾರಿ ಮಧ್ಯೆ ಬಿ.ಸಿ.ರೋಡಿನಲ್ಲಿ ಬಂಟ್ವಾಳ ಬಿಜೆಪಿ ಕಚೇರಿಗೆ ಭೇಟಿ‌ ನೀಡಿದ ಅವರು, ಬಿಜೆಪಿಯ ಅಭ್ಯರ್ಥಿ ರಾಜೇಶ್ ನಾಯ್ಕ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಕಾಂಗ್ರೆಸ್‌ ಪಕ್ಷದವರಿಗೆ ರಿವರ್ಸ್ ಗೇರ್ ಹಾಕುವ ಬಯಕೆ. ಅವರು ಬಂಟ್ವಾಳವನ್ನು 2017ರ ಅಂಚಿಗೆ ಕೊಂಡೊಯ್ಯಲು ಹೊರಟರೆ, ಬಿಜೆಪಿ ಮುಂದಿನದ್ದನ್ನು ಯೋಚಿಸುತ್ತಿದೆ ಎಂದರು.

ರಾಜಕೀಯ ಪಕ್ಷವಾಗಿ ಗುರುತಿಸಿಕೊಂಡಿರುವ ಎಸ್ ಡಿ ಪಿಐ , ನಿಷೇಧಿತ ಪಿಎಫ್‌ಐ ನ ಬಿ ಟೀಮ್‌ ಎಂದು ಆರೋಪಿಸಿದ ಅವರು, ಕಾಂಗ್ರೇಸ್ ಇವರ ಜೊತೆ ಒಳ ಒಪ್ಪಂದದ ರಾಜಕೀಯ ನಡೆಸುತ್ತಿದೆ ಎಂದರು. ಐದು ವರ್ಷದ ಹಿಂದೆ ಇದ್ದ ಸ್ಥಿತಿ ಮತ್ತೆ ಬರಬೇಕಾ ಎಂದು ಪ್ರಶ್ನಿಸದ ಅವರು, ಕಾರ್ಯಕರ್ತರು ಇಂತಹಾ ವಿಚಾರವನ್ನು ಮನೆಮನೆಯ ಚರ್ಚೆಯ ವಿಷಯವನ್ನಾಗಿಸಿ, ಮುಂದಿನ ಹತ್ತು‌ದಿನಗಳಲ್ಲಿ ಇದ್ದ ಎಲ್ಲಾ ಶಕ್ತಿಸಾಮರ್ಥ್ಯ ಬಳಸಿ ಪ್ರಚಾರ ನಡೆಸುವಂತೆ ತಿಳಿಸಿದರು.

ರಾಜೇಶ್ ನಾಯ್ಕ್ ಅವರ ಮೂಲಕ ಬಂಟ್ವಾಳದಲ್ಲಿ ಕಾನೂನು ಸುವ್ಯವಸ್ಥೆಯ ಜತೆ ನಡೆದಿರುವ ಅಭಿವೃದ್ಧಿಯನ್ನು ಮತವಾಗಿ ಪರಿವರ್ತಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು. ರಾಷ್ಟ್ರ ನಾಯಕರಾದ ಮೋದಿ, ಅಮಿತ್ ಷಾ, ನಡ್ಡಾ ಹೀಗೆ ಎಲ್ಲಾ ನಾಯಕರು ತಮ್ಮ ಸಮಯವನ್ನು ಕರ್ನಾಟಕಕ್ಕೆ ಮೀಸಲಿಟ್ಟಿದ್ದು, ಕಾರ್ಯಕರ್ತರು ಪೂರ್ಣ ಪ್ರಮಾಣದ ಶ್ರಮದೊಂದಿಗೆ ಬಿಜೆಪಿಯನ್ನು ಗೆಲ್ಲಿಸಬೇಕು ಎಂದರು.

ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ ಮಾತನಾಡಿ, ಕಾರ್ಯಕರ್ತರಿಗೆ ಅಣ್ಣಾಮಲೈ ಶಕ್ತಿ ತುಂಬಿದ್ದು, ಬಿಜೆಪಿ ಗೆದ್ದೇ ಗೆಲ್ಲುತ್ತದೆ. ವಿಜಯೋತ್ಸವದ ಸಂದರ್ಭ ಅಣ್ಣಾಮಲೈ ಮತ್ತೆ ಭಾಗವಹಿಸಲಿದ್ದಾರೆ ಎಂದರು.

ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಮುಖಂಡರಾದ ದೇವಪ್ಪ ಪೂಜಾರಿ, ಆರ್.ಸಿ.ನಾರಾಯಣ, ಸುಲೋಚನಾ ಜಿ.ಕೆ.ಭಟ್, ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Gayathri SG

Recent Posts

ಪ್ರಜ್ವಲ್ ಪ್ರಕರಣ ಕಾಂಗ್ರೆಸ್ ನಿಂದ ರಾಜಕೀಯ: ಅರವಿಂದ ಲಿಂಬಾವಳಿ ಆರೋಪ

ಪ್ರಜ್ವಲ್ ಲೈಂಗಿಕ ಹಗರಣದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಆರೋಪಿಸಿದರು.

13 mins ago

ಬಿಸಿಲಿನ ತಾಪದಿಂದ ಹೊಲದಲ್ಲಿ ಕೆಲಸಕ್ಕೆ ಹೋಗಿದ್ದ ರೈತ ಸಾವು

ಬಿಸಿಲಿನ ತಾಪದಿಂದ ಹೊಲದ ಕೆಲಸಕ್ಕೆ ತೆರಳಿದ್ದ ರೈತರೊಬ್ಬರು ಸಾವಿಗೀಡಾದ ಘಟನೆ ಜಾಲಿಬೆಂಚಿ ಗ್ರಾಮದಲ್ಲಿ ನಡೆದಿದೆ.

28 mins ago

ದೇವೇಗೌಡರ ಕುಟುಂಬ ನೈತಿಕ ಹೊಣೆ ಹೊತ್ತು ರಾಜಕೀಯ ಬಿಡಲಿ: ಮೊಯ್ಲಿ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ದೇವೇಗೌಡರ ಕುಟುಂಬ ನೈತಿಕ ಹೊಣೆ ಹೊತ್ತು ರಾಜಕೀಯ ಬಿಡಬೇಕು ಎಂಬ…

35 mins ago

ಬಾಲಕನನ್ನು ಕಚ್ಚಿದ ನಾಯಿಯನ್ನು ಕೊಂದು ತಿಂದ ಭೂಪ

ತನ್ನ ಸೋದರಳಿಯನಿಗೆ ಕಚ್ಚಿದ ಸಾಕುನಾಯಿಯನ್ನು ವ್ಯಕ್ತಿಯೊಬ್ಬ ಕೊಂದು ತಿಂದ ಘಟನೆ ಥೈಲ್ಯಾಂಡಿನಲ್ಲಿ ನಡೆದಿದ್ದು, ಇದರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

52 mins ago

ಯೋಗಿ ಆದಿತ್ಯನಾಥ್ ಅವರ ಡೀಪ್‌ಫೇಕ್ ವೀಡಿಯೋ ಶೇರ್ ಮಾಡಿದ ಆರೋಪಿಯ ಬಂಧನ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಅವರ ಡೀಪ್‌ಫೇಕ್ ವೀಡಿಯೋವನ್ನು ಪೋಸ್ಟ್ ಮಾಡಿ ಶೇರ್ ಮಾಡಿದ ಆರೋಪದ ಮೇಲೆ ಉತ್ತರಪ್ರದೇಶ ಎಸ್‌ಟಿಎಫ್  ತಂಡ…

1 hour ago

ಉರುಳಿಗೆ ಸಿಲುಕಿದ ಚಿರತೆಯನ್ನು ರಕ್ಷಿಸಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ

ಉರುಳಿಗೆ ಸಿಲುಕಿ ನರಳುತ್ತಿದ್ದ ಚಿರತೆಯನ್ನು ರಕ್ಷಿಸಿ ಸುರಕ್ಷಿತವಾಗಿ ನಾಗರಹೊಳೆ ಅಭಯಾರಣ್ಯಕ್ಕೆ ಬಿಟ್ಟ ಘಟನೆ ಪಿರಿಯಾಪಟ್ಟಣ ತಾಲೂಕಿನ ಮಲ್ಲಿನಾಥಪುರ ಗ್ರಾಮದ ಅರಣ್ಯ ನಡು ತೋಪಿನಲ್ಲಿ ನಡೆದಿದೆ.

1 hour ago