Categories: ಮಂಗಳೂರು

ಉಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಿದ ರಾಜೇಶ್ ನಾಯ್ಕ್

ಬಂಟ್ವಾಳ: ಉಳಿ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ೯.೩೫ ಕೋ.ರೂ. ಶಾಸಕರ ನಿಧಿಯಿಂದ ನೀಡಲಾಗಿದ್ದು, ೩ ಕೋ.ರೂ. ಕಿಂಡಿ ಅಣೆಕಟ್ಟು ಅನುಷ್ಠಾನಗೊಂಡಿದ್ದು, ಕ್ಷೇತ್ರಕ್ಕೆ ೧೫ ಕೋ.ರೂ.ಹೆಚ್ಚುವರಿಯಾಗಿ ಅನುದಾನ ಬಂದಿದ್ದು, ಅದರ ಮೂಲಕ ೨ ಕಿಂಡಿ ಅಣೆಕಟ್ಟುಗಳನ್ನು ಉಳಿ ಗ್ರಾಮದಲ್ಲಿ ಅನುಷ್ಠಾನಗೊಳಿಸುವ ಕಾರ್ಯ ಮಾಡಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.

ಅವರು ಉಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ- ಶಿಲಾನ್ಯಾಸದ ಬಳಿಕ ಗ್ರಾ.ಪಂ.ಸುವರ್ಣ ಸಭಾಭವನದಲ್ಲಿ ನಡೆದ ೯೪ಸಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.

ಜೆಜೆಎಂ ಮೂಲಕ ಮನೆ ಮನೆಗೆ ನಳ್ಳಿ ನೀರು ಕೊಡುವ ಕಾರ್ಯ ನಡೆದಿದ್ದು, ಉಳಿಯಲ್ಲಿ ೪೭ ಲಕ್ಷ ರೂ.ಕಾಮಗಾರಿ ನಡೆಯುತ್ತಿದೆ. ಗ್ರಾಮದ ೨೯ ರಸ್ತೆಗಳು ಅಭಿವೃದ್ಧಿಯಾಗಿದ್ದು, ೩೦೦ಕ್ಕೂ ಅಧಿಕ ಹಕ್ಕು ಪತ್ರ ವಿತರಿಸುವ ಕಾರ್ಯ ನಡೆದಿದೆ.

ಕಳೆದ ನಾಲ್ಕು ವರ್ಷ ೧೦ ತಿಂಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನದ ಮಾಡುವ ಅವಕಾಶವನ್ನು ಬಂಟ್ವಾಳದ ಜನತೆ ನೀಡಿದ್ದಾರೆ. ಮೊದಲ ವರ್ಷ ವಿರೋಧ ಪಕ್ಷದ ಶಾಸಕನಾಗಿ, ಬಳಿಕ ಬಂದ ಪ್ರವಾಹದ ಸ್ಥಿತಿಯ ನಿಭಾಯಿಸಿ ಮುಂದೆ ಮಹಾಮಾರಿ ನಮ್ಮನ್ನು ಕೊರೊನಾ ಆವರಿಸುತ್ತದೆ. ಆದರೆ ನಮ್ಮ ಪ್ರಧಾನಿ ಮೋದಿಯವರ ನಿರಂತರ ಹೋರಾಟದ ಫಲವಾಗಿ ಭಾರತ ಕೊರೊನಾವನ್ನು ಯಶಸ್ವಿ ಗೆದ್ದು ಬರುತ್ತದೆ.

ಕೊರೊನಾದ ಬಳಿಕ ಬಂಟ್ವಾಳ ಆರೋಗ್ಯ ವ್ಯವಸ್ಥೆಯಲ್ಲೂ ಸಾಕಷ್ಟು ಬದಲಾವಣೆ ನಡೆದಿದ್ದು, ಬಂಟ್ವಾಳ ಹಾಗೂ ವಾಮದಪದವು ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ಕಾರ್ಯನಿರ್ವಹಿಸುತ್ತದೆ. ಜತೆಗೆ ಡಯಾಲಿಸೀಸ್ ಘಟಕ, ನುರಿತ ತಜ್ಞ ವೈದ್ಯರು, ಪುಂಜಾಲಕಟ್ಟೆ ಆಸ್ಪತ್ರೆಯನ್ನು ಸಮುದಾಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. ಪುಂಜಾಲಕಟ್ಟೆಯಲ್ಲಿ ಜಿಲ್ಲೆಯ ಏಕೈಕ ನಾರಾಯಣ ಗುರು ವಸತಿ ಶಾಲೆ ಆರಂಭಗೊಂಡಿದ್ದು, ೩೦ ಕೋ.ರೂ.ವೆಚ್ಚದಲ್ಲಿ ಅದಕ್ಕೂ ಶಿಲಾನ್ಯಾಸ ನೇರವೇರಿಲಾಗುತ್ತದೆ.

ಗ್ರಾ.ಪಂ.ಅಧ್ಯಕ್ಷ ಸುರೇಶ್ ಮೈರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಚಿದಾನಂದ ರೈ ಕಕ್ಯ, ಭೂ ನ್ಯಾಯ ಮಂಡಳಿಯ ಸದಸ್ಯ ರಂಜಿತ್ ಮೈರ, ಗ್ರಾ.ಪಂ.ಸದಸ್ಯರಾದ ಚೇತನ್ ಉರ್ದೊಟ್ಟು, ವಸಂತ್ ಸಾಲ್ಯಾನ್ ರಾಮನಗರ, ಸಂಜೀವ ಗೌಡ ಅಗ್ಪಲ, ಶಾಂತ ಕೊಡಂಗೆ, ರೇವತಿ ಮುದಲಾಡಿ, ಗುಲಾಬಿ ಮಾಡೋಡಿ, ರಕ್ಷಿತಾ ಮಾಡೋಡಿ, ಶಾರದಾ ಕೊಡಂಗೆ, ಗ್ರಾಮ ಆಡಳಿತ ಅಧಿಕಾರಿ ನಿಶ್ಮಿತಾ‌, ಲೆಕ್ಕ ಸಹಾಯಕ ಬಾಲಕೃಷ್ಣ ಉಪಸ್ಥಿತರಿದ್ದರು.

ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವಿದ್ಯಾಶ್ರೀ ವಿದ್ಯಾಶ್ರೀ ಸ್ವಾಗತಿಸಿದರು. ಪಾರ್ಶ್ವನಾಥ ಜೈನ್ ಬಾರೆತ್ಯಾರು ಕಾರ್ಯಕ್ರಮ ನಿರ್ವಹಿಸಿದರು.

Ashika S

Recent Posts

ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ  ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

8 mins ago

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…

42 mins ago

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

50 mins ago

ಜೆಪಿ ನಡ್ಡಾ, ಬಿವೈ ವಿಜಯೇಂದ್ರಗೆ ಸಮನ್ಸ್‌ ಜಾರಿ ಮಾಡಿದ ಬೆಂಗಳೂರು ಪೊಲೀಸ್

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರಿಗೆ…

1 hour ago

ಹಳ್ಳಕ್ಕೆ ತಡೆಗೋಡೆ ನಿರ್ಮಾಣ: ತೆರವಿಗೆ ಆಗ್ರಹಿಸಿ ಮನವಿ

ಕೊಪ್ಪಾ ತಾಲೂಕಿನ ಕಾಡ್ಕೆರೆಯಲ್ಲಿ ಕುಡಿಯುವ ನೀರಿನ ಹಳ್ಳಕ್ಕೆ ಪ್ರಭಾವಿಗಳು ನಿರ್ಮಿಸಿರುವ ತಡೆಗೋಡೆಯನ್ನು ತೆರವುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು…

2 hours ago

ಆನೆ ಸೆರೆ ಕಾರ್ಯಾಚರಣೆಗೆ ಸಿದ್ಧತೆ: ಪುಂಡಾನೆ ಪತ್ತೆಗೆ ಟ್ರ್ಯಾಪ್ ಕ್ಯಾಮೆರಾ

ಕಾಡಾನೆ ಹಾವಳಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಒಂದು ವರ್ಷದ ಅವಧಿಯಲ್ಲಿ ಐದು ಜನ ಪ್ರಾಣ ಕಳೆದುಕೊಂಡಿದ್ದಾರೆ.

2 hours ago