News Karnataka Kannada
Monday, April 22 2024
Cricket
ಮಂಗಳೂರು

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಎರಡು ದಿನದ ಕ್ರೀಡಾಕೂಟ

Bantwal: Two-day sports meet at Kalladka Sri Rama Vidya Kendra
Photo Credit : By Author

ಬಂಟ್ವಾಳ: ನ. 1 ಮತ್ತು 2 ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ
ಶಿಕ್ಷಣಾಧಿಕಾರಿಗಳ ಕಛೇರಿ, ಬಂಟ್ವಾಳ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಬಾಳ್ತಿಲ ಕ್ಲಸ್ಟರ್ ಇದರ ಸಂಯುಕ್ತ ಆಶ್ರಯದಲ್ಲಿ
ಕಲ್ಲಡ್ಕ ವಲಯ ಮಟ್ಟದ ಪ್ರಾಥಮಿಕ, ಪ್ರೌಢಶಾಲೆಗಳ ಎರಡು ದಿನದ ಕ್ರೀಡಾಕೂಟವು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡುತ್ತಾ, “ಓದುವುದು ಮಾತ್ರವಲ್ಲ, ಬುದ್ಧಿಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೇ ಶರೀರದ ಶಕ್ತಿಯನ್ನು ಹೆಚ್ಚುಮಾಡಿಕೊಳ್ಳಬೇಕು ಎನ್ನುವ ಮಾನಸಿಕತೆ ಬಂದಿರುವುದು ತುಂಬಾ ಸಂತೋಷ. ಮನಸ್ಸು ಚೆನ್ನಾಗಿರಬೇಕು ಎಂದರೆ ಶರೀರ ಚೆನ್ನಾಗಿರಬೇಕು. ಅಂದರೆ ಆಹಾರ ಚೆನ್ನಾಗಿ ತೆಗೆದುಕೊಳ್ಳಬೇಕು ಅದರೆ ಆ ತೆಗೆದುಕೊಂಡ ಆಹಾರವನ್ನು ಕರಗಿಸುವಂತ ವ್ಯವಸ್ಥೆ ನಮ್ಮಲ್ಲಿ ಇರಬೇಕು ಅದಕ್ಕಾಗಿ ಬೇರೆ ಬೇರೆ ಶಾರೀರಿಕ ಚಟುವಟಿಕೆ ಇರುತ್ತದೆ. ಅದರ ಜೊತೆ ಬೇರೆ ಬೇರೆ ಕ್ರೀಡೆಗಳು ಇರುತ್ತೆ ಅಂತಹ ಕ್ರೀಡೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಒಳ್ಳೆ ಆರೋಗ್ಯಕರ ವ್ಯಕ್ತಿಯಾಗುತ್ತಾನೆ. ಕ್ರೀಡೆಗಳಲ್ಲಿ ಶಿಸ್ತು, ಅನುಶಾಸನ, ಒಂದೇ ರೀತಿಯ ಉದಾರತೆ ಇದ್ದರೆ ಅವನು ಒಬ್ಬ ಒಳ್ಳೆಯ ಕ್ರೀಡಾಪಟು ಆಗುತ್ತಾನೆ. ಈ ಮಟ್ಟದಲ್ಲಿರುವ ವಿದ್ಯಾರ್ಥಿಗಳು ತಾನು ಒಬ್ಬ ಒಳ್ಳೆಯ ಕ್ರಿಡಾಪಟು ಆಗಬೇಕು ಎನ್ನುವ ಯೋಚನೆ ಮಾಡಿ ಮುಂದಿನ ದಿನಗಳಲ್ಲಿ ನಾನು ನನ್ನ ದೇಶವನ್ನು ಪ್ರತಿನಿಧಿಸುತ್ತೇನೆ. ಇಡೀ ಜಗತ್ತಿನಲ್ಲಿ ಭಾರತ ಅದ್ವಿತೀಯವಾದ ಸ್ಥಾನವನ್ನು ಕ್ರೀಡೆಯಲ್ಲಿ ಕೂಡಾ ಗಳಿಸುತ್ತದೆ ಎನ್ನುವ ದೃಷ್ಠಿಯನ್ನು ನೀಡೋಣ. ಜಗತ್ತು ಪೂರ್ತಿ, ಭಾರತದ ಕಡೆಗೆ ನೋಡುತ್ತದೆ. ಭಾರತದ ಪ್ರಧಾನ ಮಂತ್ರಿಯಿರಬಹುದು ಹಾಗೂ ಭಾರತದ ಚಿಂತನೆ ಇರಬಹುದು ಇಡೀ ಜಗತ್ತು ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಅಷ್ಟೇ ಅಲ್ಲದೆ ಅದರ ಒಳಗಿರುವ ನಾವುಗಳು ಕೂಡಾ ಭಾರತವನ್ನು ಎಲ್ಲಾ ಕ್ಷೇತ್ರದಲ್ಲಿಯೂ ಎತ್ತರಕ್ಕೆ ಕೊಂಡೊಯ್ಯಬೇಕು” ಎಂದು ತನ್ನ ಉದ್ಘಾಟಕ ಮಾತುಗಳಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಇವರು 67ನೇ ಕನ್ನಡ ರಾಜ್ಯೋತ್ಸವದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮೊದಲಿಗೆ ಧ್ವಜಾರೋಹಣವನ್ನು ನೆರವೇರಿಸಲಾಯಿತು, ನಂತರ ಕ್ರೀಡಾಪಟುಗಳಿಂದ ಪಥಸಂಚಲನ ನಡೆಯಿತು. ಶ್ರೀರಾಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಅಯೋಧ್ಯಾ ಕಟ್ಟಡದಿಂದ ಕ್ರೀಡಾ ಜ್ಯೋತಿಯನ್ನು ತಂದು ಹಿರಿಯರಿಗೆ ಹಸ್ತಾಂತರಿಸಿದರು.

ಎಲ್ಲಾ ದೈಹಿಕ ಶಿಕ್ಷಕರು, ತೀರ್ಪುಗಾರರು ಹಾಗೂ ವಿದ್ಯಾಕೇಂದ್ರದ ಹಿತೈಷಿಳಿಂದ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುತ್ತಾ ಎರಡನೇ ದಿನದ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಕ್ರೀಡಾಕೂಟದ ಕೊನೆಯಲ್ಲಿ ಧ್ವಜಅವರೋಹಣ ಮಾಡಿ ಮಾಣಿ ವಲಯಕ್ಕೆ ಹಸ್ತಾಂತರಿಸಲಾಯಿತು.

ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕರಾದ ರಮೇಶ್ ಎನ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಸಾಲ್ಯಾನ್, ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರು ಜತ್ತಪ್ಪ ಗೌಡ , ವಲಯ ನೋಡೆಲ್ ಅಧಿಕಾರಿ ಜಗದೀಶ್ ಕಲ್ಲಡ್ಕ, ಬಾಳ್ತಿಲ ವಲಯದ ಸಿ.ಆರ್.ಪಿ ಜ್ಯೋತಿ,ಶ್ರೀರಾಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ್, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸುಮಂತ್ ಆಳ್ವ ಸ್ವಾಗತಿಸಿ, ಪ್ರೀತಾ ನಿರೂಪಿಸಿ, ಗೋಪಲ್ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು