Categories: ಮಂಗಳೂರು

ಬಂಟ್ವಾಳ: ಅ.2ರಂದು ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬೆಳ್ಳಿ ಹಬ್ಬ ಸಮಾರಂಭ

ಬಂಟ್ವಾಳ: ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ನಿ)ಇದರ ಬೆಳ್ಳಿ ಹಬ್ಬದ ಸಮಾರಂಭವು ಬಂಟ್ವಾಳದ ಬಂಟರ ಭವನ ತುಂಬೆಯಲ್ಲಿ ಅ2 ರಂದು ಆದಿತ್ಯವಾರ ಸಂಜೆ 5.30ಯಿಂದ ನಡೆಯಲಿದೆ.

ಈ ಕಾರ್ಯಕ್ರಮವನ್ನು ಮಾನ್ಯ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಇವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ) ಇದರ ಅಧ್ಯಕ್ಷ ಜೀವನ್ ಲೋಲ್ಡ್ ಪಿಂಟೊ ವಹಿಸಲಿದ್ದಾರೆ. ಮಂಗಳೂರಿನ ವಿಶ್ರಾಂತ ಧರ್ಮಾಧಿಕಾರಿಗಳು ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ ಡಿಸೋಜ ಆಶೀರ್ವಚನ ನುಡಿಗಳನ್ನು ಹೇಳಲಿದ್ದಾರೆ.

ಕಾರ್ಯಕ್ರಮದ ವಿಶೇಷ ಘನ ಉಪಸ್ಥಿತಿಯನ್ನು ಲೋಕಸಭಾ ಸದಸ್ಯರು ಫ್ರಾನ್ಸಿಸ್ಕೊ ಸರ್ಡಿನ್ಹಾ ಗೌರವ ಉಪಸ್ಥಿತಿಯನ್ನು ದ.ಕ.ಜಿ.ಕೆ.ಸ ಬ್ಯಾಂಕ್ ಮಂಗಳೂರಿನ ಡಾ. ಎಮ್. ಎನ್ ರಾಜೇಂದ್ರ ಕುಮಾರ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ದ.ಕ.ಜಿಲ್ಲೆಯ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಜಾಲತಾಣ ಬಿಡುಗಡೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯಕ್, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ, ಕರ್ನಾಟಕ ಸರ್ಕಾರದ ಮಾಜಿ ಸಚಿವ ಬಿ.ರಮಾನಾಥ ರೈ, ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಅತೀ ವಂದನೀಯ ಮ್ಯಾಕ್ಸಿವ್ ನೊರೊನ್ಹಾ, ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ)ದ ಸ್ಥಾಪಕ ಅಧ್ಯಕ್ಷ ಲಿಗೋರಿ ಲೋಬೋ, ಮಂಗಳೂರಿನ ಸಹಕಾರ ಸಂಘಗಳ ಉಪನಿಬಂಧಕರು ಪ್ರವೀಣ್ ಬಿ.ನಾಯಕ್, ಮಂಗಳೂರಿನ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರು  ಸುಧೀರ್ ಕುಮಾರ್ ಜೆ ಸಹಿತ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.

ಸಂಜೆ 5.30ಯಿಂದ ಬಲೇ ತೆಲಿಪಾಲೆ ಖ್ಯಾತಿಯ ಉಮೇಶ್ ಮಿಜಾರ್ ತಂಡದಿಂದ ಕಾಮಿಡಿ ಶೋ ಹಾಗೂ ರಾತ್ರಿ 9ರಿಂದ ಇಟ್ಬಾಲ್ ಮತ್ತು ರೂಪಾ ಪ್ರಕಾಶ್ ಮಹಾದೇವನ್ ತಂಡದಿಂದ ಸಂಗೀತ ರಸಮಂಜರಿ ನಡೆಯಲಿದೆ.

Gayathri SG

Recent Posts

ನಗರ ಸಾರಿಗೆ ಬಸ್‌ ಮಾರ್ಗ ಬದಲಾಯಿಸಲು ಆಗ್ರಹ

ನಗರದಲ್ಲಿ ಸಂಚರಿಸುವ ನಗರ ಸಾರಿಗೆಯ ಎಲ್ಲ ಬಸ್‌ಗಳು ಡಾ.ಬಿ.ಆರ್.ಅಂಬೇಡ್ಕರ್ ಮುಖ್ಯ ವೃತ್ತದ ಮೂಲಕ ಹಾದು ಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ಎಂದು…

4 mins ago

ನಟಿ ಮಾಳವಿಕಾ ಅವಿನಾಶ್ ತಂದೆ ನಟೇಶನ್ ಗಣೇಶನ್ ನಿಧನ

ರಾಜ್ಯ ಬಿಜೆಪಿ ಉಪಾಧ್ಯಕ್ಷ, ನಟಿ, ಮಾಳವಿಕಾ ಅವಿನಾಶ್ ಅವರ ತಂದೆ ನಟೇಶನ್ ಗಣೇಶನ್ ಅವರು ನಿಧನರಾಗಿದ್ದಾರೆ.

13 mins ago

ಪತ್ನಿಯ ಗುಪ್ತಾಂಗವನ್ನು ಮೊಳೆಗಳಿಂದ ವಿರೂಪಗೊಳಿಸಿ,ಬೀಗ ಹಾಕಿದ ಕ್ರೂರ ಪತಿ

ಪುಣೆಯಲ್ಲಿ ಭೀಕರ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಪತ್ನಿಯ ಜನನಾಂಗವನ್ನು ಕಬ್ಬಿಣದ ಮೊಳೆಗಳಿಂದ ವಿರೂಪಗೊಳಿಸಿದ್ದಾನೆ ಮತ್ತು ಆಕೆಯ ಮೇಲೆ ಸಂದೇಹ ವ್ಯಕ್ತಪಡಿಸಿದ…

29 mins ago

ಬೀದರ್: ಕಾರ್ಮಿಕರ ಮಕ್ಕಳಿಗೆ ‘ಕೂಸಿನ ಮನೆ’ ಆಸರೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಮಹಿಳಾ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆ ಆಸರೆಯಾಗಿದೆ.

35 mins ago

ಬಿಜೆಪಿ ಮುಖಂಡ ಅರೆಸ್ಟ್: ರಾತ್ರೋರಾತ್ರಿ ಠಾಣೆಯಲ್ಲಿ ಧರಣಿ ನಡೆಸಿದ ಶಾಸಕ ಹರೀಶ್ ಪೂಂಜಾ

ಅಕ್ರಮವಾಗಿ ಕಲ್ಲುಕೋರೆ ಗಣಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಬಿಜೆಪಿ ಯುವಮೋರ್ಚಾ ಮುಖಂಡ ಶಶಿರಾಜ್ ಶೆಟ್ಟಿಯನ್ನು ಅರೆಸ್ಟ್…

54 mins ago

ತಾಯಿ ಎದುರೇ ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ

ತಾಯಿ ಎದುರೇ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಪಾಟ್ನಾದ ನೌಬತ್‌ಪುರ ಪ್ರದೇಶದಲ್ಲಿ ಚಲಿಸುತ್ತಿದ್ದ…

59 mins ago