News Karnataka Kannada
Sunday, April 14 2024
Cricket
ಮಂಗಳೂರು

ಬಂಟ್ವಾಳ: 90 ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಾಗೂ ಶೋಭಾಯಾತ್ರೆ

Bantwal: The 90th anniversary of mosarukudike festival and shobha yatra
Photo Credit :

ಬಂಟ್ವಾಳ: ಕಲ್ಲಡ್ಕ ಶ್ರೀರಾಮ‌ಮಂದಿರದ ಶ್ರೀರಾಮಾಂಜನೇಯ ವಿಶ್ವಸ್ಥ ಮಂಡಳಿಯ ಆಶ್ರಯದಲ್ಲಿ 90 ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಾಗೂ ಆಕರ್ಷಕ ಶೋಭಾಯಾತ್ರೆ ಕಲ್ಲಡ್ಕದಲ್ಲಿ ಶುಕ್ರವಾರ ನಡೆಯಿತು.

ಶ್ರೀಕೃಷ್ಣನ ಶೋಭಾಯಾತ್ರೆ ಶ್ರೀರಾಮ ಮಂದಿರದಿಂದ ಹೊರಟು ಕಲ್ಲಡ್ಕ ಪೇಟೆಯಲ್ಲಿ ಸಂಚರಿಸಿ ಕೆ.ಸಿ. ರೋಡ್ ಮೂಲಕ ಸಾಗಿ ಬಂದು ಮಂದಿರದಲ್ಲಿ ಸಮಾಪನಗೊಂಡಿತು.

ಶಿಲ್ಪಾಗೊಂಬೆ ಬಳಗ, ತ್ರಿಶೂಲ್ ಫ್ರೆಂಡ್ಸ್ ಕಲ್ಲಡ್ಕ, ಓಂ ಶಕ್ತಿ ಫ್ರೆಂಡ್ಸ್ ಕಲ್ಲಡ್ಕ ಮೊದಲಾದ ಸಂಸ್ಥೆಗಳ ಸ್ತಬ್ಧ ಚಿತ್ರಗಳು ಗಮನ ಸೆಳೆದವು.ಶ್ರೀರಾಮ ಶಿಶು ಮಂದಿರ ಮತ್ತು ಪ್ರಾಥಮಿಕ ಶಾಲೆಯ ಪುಟಾಣಿಗಳು ಬಾಲಕೃಷ್ಣ ಪಾತ್ರಧಾರಿಗಳಾಗಿ ಪಾಲ್ಗೊಂಡಿದ್ದರು. ಯುವಕರ ಗುಂಪು ಕಂಬಗಳನ್ನು‌ ಹತ್ತಿ ಮಡಿಕೆಗಳನ್ನು ಒಡೆದು ಸಾಹಸ ಪ್ರದರ್ಶಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಶ್ರೀ ರಾಮಾಂಜನೇಯ ವಿಶ್ವಸ್ಥ ಮಂಡಳಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಡಾ. ಕೆ. ಪ್ರಭಾಕರ ಭಟ್ ಕಲ್ಲಡ್ಕ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಆರ್.ಚೆನ್ನಪ್ಪ ಕೋಟ್ಯಾನ್, ಸುಲೋಚನಾ ಜಿ.ಕೆ. ಭಟ್, ಕ.ಕೃಷ್ಣಪ್ಪ, ಸುಜಿತ್ ಕೊಟ್ಟಾರಿ, ನಾಗೇಶ್ ಕಲ್ಲಡ್ಕ, ಬಿ.ನಾರಾಯಣ ಸೋಮಯಾಜಿ, ವಸಂತ ಮಾಧವ, ಯತಿನ್ ಕುಮಾರ್, ಪುಷ್ಪರಾಜ್ ಶೆಟ್ಟಿಗಾರ್, ಉತ್ತಮ್ ಕುಮಾರ್ ಪಳನೀರು, ಹರೀಶ್ ಆಚಾರ್ಯ, ದಿನೇಶ್ ಅಮ್ಟೂರು, ಬೊಂಡಾಲ ಜನಾರ್ದನ ಕುಲಾಲ್, ಚಿತ್ತರಂಜನ್ ಹೊಸಕಟ್ಟ, ಮೋನಪ್ಪ ದೇವಸ್ಯ, ವಜ್ರನಾಥ ಕಲ್ಲಡ್ಕ ಸಹಿತ ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಪೊಲೀಸರು ಬಿಗಿಬಂದೋಬಸ್ತ್ ಒದಗಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು