ಮಂಗಳೂರು

ಬಂಟ್ವಾಳ:  ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಆಚರಣೆ

ಬಂಟ್ವಾಳ:  ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಆಚರಣೆಯು ಬಿ.ಸಿ.ರೋಡಿನ ಆಡಳಿತ ಸೌಧದಲ್ಲಿ ನಡೆಯಿತು. ಶಾಸಕ ರಾಜೇಶ್ ನಾಯ್ಕ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಮಾತನಾಡಿದ ಅವರು, ಜಗತ್ತನ್ನು ವಿನ್ಯಾಸಗೊಳಿಸಿದ ವಿಶ್ವಕರ್ಮ ಜಯಂತಿ ಆಚರಣೆಯನ್ನು ಎಲ್ಲರೂ ಒಟ್ಟಾಗಿ ನಡೆಸಬೇಕು ಎಂಬ ಉದ್ದೇಶದಿಂದ ಸರ್ಕಾರಿ ಕಾರ್ಯಕ್ರಮಗಳನ್ನೂ ಮಾಡಲಾಗುತ್ತಿದೆ. ಇದೇ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಆಚರಣೆಯೂ ನಡೆದಿದ್ದು, ನವಭಾರತದ ನಿರ್ಮಾಣದಲ್ಲಿ ಅವರು ತೊಡಗಿಸಿಕೊಂಡಿರುವುದು ಸಂತಸ ತಂದಿದೆ ಎಂದರು.

ಬಂಟ್ವಾಳ ಕಾಲೇಜಿನ ಪ್ರಾಧ್ಯಾಪಕ ಮುರಳೀಧರ ಅವರು ವಿಶ್ವಕರ್ಮ ಪೂಜೆಯ ಕುರಿತು ಉಪನ್ಯಾಸ ನೀಡಿದರು.

ಬಂಟ್ವಾಳ ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಸುಧಾಕರ ಆಚಾರ್ಯ, ಕಾರ್ಯದರ್ಶಿ ಸಂದೀಪ್ ಬಿ., ಮಹಿಳಾ ಘಟಕಾಧ್ಯಕ್ಷೆ ಪ್ರತಿಮಾ ಆಚಾರ್ಯ, ಪ್ರಮುಖರಾದ ಸುನಿಲ್, ಉಮೇಶ್ ಆಚಾರ್ಯ, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಉಪತಹಸೀಲ್ದಾರ್ ವಿಜಯ ವಿಕ್ರಮ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

ಕಂದಾಯ ನಿರೀಕ್ಷಕ ಪ್ರಶಾಂತ್‌ ಶೆಟ್ಟಿ ಸ್ವಾಗತಿಸಿದರು. ವಿಷಯ ನಿರ್ವಾಹಕ ವಿಷುಕುಮಾರ್ ವಂದಿಸಿದರು.

Sneha Gowda

Recent Posts

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ: ಕಂಗನಾ ರಣಾವತ್

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ, ಬಡ ಕುಟುಂಬದಲ್ಲಿ ಹುಟ್ಟಿ ದೇಶದ ಕಲ್ಯಾಣ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಂದು ಹಿಮಾಚಲ…

2 mins ago

ವಾಸವಿ ಯುವಜನ ಸಂಘದಿಂದ ರಕ್ತದಾನ ಶಿಬಿರ : ದಿನೇಶ್‌ಗುಪ್ತ

ನಗರದ ವಾಸವಿ ಯುವಜನ ಸಂಘ ಮತ್ತು ವಾಸವಿ ಕ್ಲಬ್‌ ಆಶ್ರಯದಲ್ಲಿ ಇಂದು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು…

30 mins ago

ಗ್ರಾಮಸ್ಥರ ಆರೋಗ್ಯ ಸುರಕ್ಷತೆಗೆ ಕ್ರಮಕೈಗೊಳ್ಳಲು ಬಿಜೆಪಿ ಒತ್ತಾಯ

ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವ ಗ್ರಾಮಕ್ಕೆ ತಜ್ಞ ವೈದ್ಯಾಧಿಕಾರಿ ಗಳ ತಂಡವನ್ನು ರಚಿಸಿ ನಿವಾಸಿಗಳ ಆರೋಗ್ಯ ಕಾಪಾಡಬೇಕು ಎಂದು ಎರೆಹಳ್ಳಿ ಗ್ರಾಮಸ್ಥರು…

38 mins ago

ಕಿಯಾ ಕಾರಿಗೆ ಅಡ್ಡ ಬಂದ ಕುದುರೆ: ಸರಣಿ ಅಪಘಾತ

ಕುದುರೆಯೊಂದು ಏಕಾಏಕಿ ಕಿಯಾ ಕಾರಿಗೆ ಅಡ್ಡ ಬಂದ ಕಾರಣ ಸರಣಿ ಅಪಘಾತ ಸಂಭಿಸಿರೋ ಘಟನೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹ್ಯಾಂಡ್…

39 mins ago

ಹಿರಿಯಡ್ಕ: ಕಾಲೇಜಿಗೆ ಹೋದ ಯುವತಿ ನಾಪತ್ತೆ

ಹಿರಿಯಡ್ಕ ನಿವಾಸಿ ವಿದ್ಯಾಲಕ್ಷ್ಮೀ (20) ಎಂಬ ಯುವತಿಯು ಏಪ್ರಿಲ್ 19 ರಂದು ಕಾಲೇಜಿಗೆಂದು ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.

48 mins ago

ಕೆಸರು ಗದ್ದೆಯಾದ ತಾಲೂಕು ಆಡಳಿತ ಸೌಧ: ಕೆಲಸಕ್ಕಾಗಿ ಬಂದ ಸಾರ್ವಜನಿಕರ ಪರದಾಟ

ಅಫಜಲಪುರ ತಾಲೂಕು ಆಡಳಿತ ಸೌಧ ಅಕ್ಷರಶಃ ಕೆಸರು ಗದ್ದೆಯಾಗಿದೆ. ದಿನಾಲು ಸಾವಿರಾರು ಜನರು ತಹಶೀಲ್ದಾರ ಕಚೇರಿಗೆ ತಮ್ಮ ಕೆಲಸಗಳಿಗೆ ಬಂದು…

1 hour ago