Categories: ಮಂಗಳೂರು

ಬಂಟ್ವಾಳ: ನ್ಯಾಯವಾದಿ ಕುಲ್‌ದೀಪ್ ಶೆಟ್ಟಿಯವರ ಮೇಲೆ ನಡೆದ ಹಲ್ಲೆ ಖಂಡಿಸಿ ಪ್ರತಿಭಟನೆ!

ಬಂಟ್ವಾಳ: ನ್ಯಾಯವಾದಿ ಕುಲ್‌ದೀಪ್ ಶೆಟ್ಟಿಯವರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದ ಪುಂಜಾಲಕಟ್ಟೆ ಠಾಣಾಧಿಕಾರಿ ಮತ್ತು ಇತರ ಪೊಲೀಸರನ್ನು ಅಮಾನತು ಮಾಡುವಂತೆ ಆಗ್ರಹಿಸಿ ದ.ಕ.ಜಿಲ್ಲಾ ಲೀಗಲ್ ಫೋರಂ ಹಾಗೂ ಜಿಲ್ಲೆಯ ನ್ಯಾಯವಾದಿಗಳು ಬಿ.ಸಿ.ರೋಡಿನಲ್ಲಿ ಸೋಮವಾರ ಸಂಜೆ ಪ್ರತಿಭಟನೆ ನಡೆಸಿ ಬಂಟ್ವಾಳ ಡಿವೈಎಸ್‌ಪಿ ಪ್ರತಾಪ್ ಥೋರಟ್ ಅವರಿಗೆ ಮನವಿ ನೀಡಿದರು.

ಫೋರಂನ ದ.ಕ.ಜಿಲ್ಲಾಧ್ಯಕ್ಷ ಎಸ್.ಪಿ.ಚೆಂಗಪ್ಪ ಮಾತನಾಡಿ, ಏಕಾಏಕಿ ಮನೆಗೆ ಆಗಮಿಸಿದ ಪೊಲೀಸರು ವಕೀಲ ಕುಲದೀಪ್‌ಗೆ ಹಲ್ಲೆ ನಡೆಸಿ ಅಂಗಿ ಹರಿದು ಹಾಕಿ ಕುಟುಂಬದ ಸದಸ್ಯರ ಬೇಡಿಕೊಂಡರೂ ಲೆಕ್ಕಿಸದೆ ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದಾರೆ. ಇವರನ್ನು ವಾರದೊಳಗೆ ಅಮಾನತು ಮಾಡುವಂತೆ ಆಗ್ರಹಿಸಿದರು.

ಪ್ರಕರಣವು ತನಿಖೆಯಲ್ಲಿದ್ದು, ಅದರ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಡಿವೈಎಸ್‌ಪಿ ತಿಳಿಸಿದರು.

ಫೋರಂನ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಕುಮಾರ್ ವೈ, ಪ್ರಧಾನ ಕಾರ್ಯದರ್ಶಿ ಉದನೇಶ್ವರ ಬಿ, ಸಂಘಟನಾ ಕಾರ್ಯದರ್ಶಿ ವೀರೇಂದ್ರ ಎಂ. ಸಿದ್ದಕಟ್ಟೆ, ಬಂಟ್ವಾಳ ತಾಲೂಕು ಅಧ್ಯಕ್ಷ ಸುರೇಶ್ ಪೂಜಾರಿ ಮೊದಲಾದವರಿದ್ದರು.

Sneha Gowda

Recent Posts

ರಘುಪತಿ ಭಟ್ ಆರೋಪಕ್ಕೆ ಡಾ. ಧನಂಜಯ ಸರ್ಜಿ ತಿರುಗೇಟು

ಶಿವಮೊಗ್ಗ ಹರ್ಷಾ ಹತ್ಯೆ ವೇಳೆ ಕಮ್ಯುನಿಸ್ಟರ ಜೊತೆ ಸರ್ಜಿ ಪೌಂಡೇಷನ್ ಶಾಂತಿ ನಡಿಗೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ನೈರುತ್ಯ ಪದವೀಧರ…

8 mins ago

ಕುಡಿಯುವ ನೀರಿನ ಸಮಸ್ಯೆ: ಕಲುಷಿತ ನೀರು ಸೇವಿಸಿ 114 ಮಂದಿಗೆ ಕಾಲರಾ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಧಾನಸಭೆ ಕ್ಷೇತ್ರವಾದ ವರುಣದ ತಗಡೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಅಲ್ಲಿನ ಜನ…

15 mins ago

ಆರ್‌ಸಿಬಿ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡದೇ ಮೈದಾನದಿಂದ ತೆರಳಿದ ಧೋನಿ..!

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 27 ರನ್​ಗಳಿಂದ…

25 mins ago

ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ಬಂದಿದೆ ಹಸಿರು ಕಳೆ

ಬೇಸಿಗೆಯ ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ವರುಣನ ಕೃಪೆಯಿಂದ ಹಸಿರು ಕಳೆ ಬಂದಿದೆ.  ಜನವರಿಯಿಂದ ಏಪ್ರಿಲ್ ತನಕವೂ ಮಳೆ ಸುರಿಯದ…

36 mins ago

ಆರ್​ಸಿಬಿಗೆ ಟ್ವೀಟ್​ ಮೂಲಕ ವಿಜಯ್​ ಮಲ್ಯ ಅಭಿನಂದನೆ

ಶನಿವಾರ ತಡರಾತ್ರಿ ನಡೆದ ಐಪಿಎಲ್​ನ ರೋಚಕ ಪಂದ್ಯದಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಹಾಲಿ ಚಾಂಪಿಯನ್​…

46 mins ago

ತಾಯಿಯ ಶವದ ಜೊತೆಗೆ ನಾಲ್ಕು ದಿನ ಕಳೆದಿದ್ದ ಬುದ್ಧಿಮಾಂದ್ಯ ಪುತ್ರಿಯೂ ಮೃತ್ಯು

ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ ತನ್ನ ತಾಯಿಯ ಮೃತದೇಹದ ಮುಂದೆ ಅನ್ನ ನೀರು ಇಲ್ಲದೆ ಇದ್ದ ವಿಶೇಷಚೇತನ ಮಗಳು ಕೂಡ…

52 mins ago