Categories: ಮಂಗಳೂರು

ಬಂಟ್ವಾಳ: ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಗಳು

ಬಂಟ್ವಾಳ: ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿಯಲ್ಲಿ ತೊಡಗಿಸಿಕೊಂಡ ಕಾಂಗ್ರೆಸ್ ಪಕ್ಷ ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರದ ದಿಂದಲೂ ಟೆಕೆಟ್ ಅಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಈಗಾಗಲೇ ಟಿಕೆಟ್ ಅಕಾಂಕ್ಷಿಗಳ ಅರ್ಜಿ ಸಲ್ಲಿಕೆಯ ಭರಾಟೆ ಜೋರಾಗಿ‌ ನಡೆಯುತ್ತಿದ್ದು, ಜಿಲ್ಲೆಯಲ್ಲಿ ರಾಜಕೀಯ ತವರೂರು ಆಗಿರುವ ಬಂಟ್ವಾಳದಿಂದಲೂ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಗಳಿಂದ ಕೆಪಿಸಿಸಿ ಗೆ ಅರ್ಜಿ ಸಲ್ಲಿಕೆಯಾಗಿದೆ. ಮಾಜಿ ಸಚಿವ ಕಾಂಗ್ರೆಸ್ ಪಾಳಯದಲ್ಲಿ ಹಿರಿಯಣ್ಣ ನಾಗಿರುವ ಬಂಟ್ವಾಳ ಕ್ಷೇತ್ರದ ಜೊತೆಗೆ ರಾಜ್ಯಮಟ್ಟದ ಪ್ರಭಾವಿ ನಾಯಕ ಬಿ.ರಮಾನಾಥ ರೈ ಅವರು ಅರ್ಜಿ ಸಲ್ಲಿಸಿದ್ದಾರೆ.

ಇವರ ಜೊತೆಯಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕುಂದಾಪುರ ಕ್ಷೇತ್ರ ದಿಂದ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದ ರಾಕೇಶ್ ಮಲ್ಲಿ ಹಾಗೂ ಯುವ ನಾಯಕ, ಸೌಮ್ಯವಾದಿ , ಯುವ ನ್ಯಾಯವಾದಿ, ಮೇನಾಲ ಗುತ್ತು ಅಶ್ವನಿ ಕುಮಾರ್ ರೈ ಅವರು ಕೂಡ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಇವರ ಜೊತೆಗೆ ಬಂಟ್ವಾಳ ಕ್ಷೇತ್ರದ ಯುವ ನಾಯಕ , ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಅವರು ಸುರತ್ಕಲ್ ಕ್ಷೇತ್ರದಿಂದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಜಿ.ಪಂ.ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್ ಅವರು ಪುತ್ತೂರು ಕ್ಷೇತ್ರದಿಂದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.

Gayathri SG

Recent Posts

ಬಿಜೆಪಿ ಮುಖಂಡ ಅರೆಸ್ಟ್: ರಾತ್ರೋರಾತ್ರಿ ಠಾಣೆಯಲ್ಲಿ ಧರಣಿ ನಡೆಸಿದ ಶಾಸಕ ಹರೀಶ್ ಪೂಂಜಾ

ಅಕ್ರಮವಾಗಿ ಕಲ್ಲುಕೋರೆ ಗಣಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಬಿಜೆಪಿ ಯುವಮೋರ್ಚಾ ಮುಖಂಡ ಶಶಿರಾಜ್ ಶೆಟ್ಟಿಯನ್ನು ಅರೆಸ್ಟ್…

18 mins ago

ತಾಯಿ ಎದುರೇ ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ

ತಾಯಿ ಎದುರೇ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಪಾಟ್ನಾದ ನೌಬತ್‌ಪುರ ಪ್ರದೇಶದಲ್ಲಿ ಚಲಿಸುತ್ತಿದ್ದ…

23 mins ago

ರಘುಪತಿ ಭಟ್ ಆರೋಪಕ್ಕೆ ಡಾ. ಧನಂಜಯ ಸರ್ಜಿ ತಿರುಗೇಟು

ಶಿವಮೊಗ್ಗ ಹರ್ಷಾ ಹತ್ಯೆ ವೇಳೆ ಕಮ್ಯುನಿಸ್ಟರ ಜೊತೆ ಸರ್ಜಿ ಪೌಂಡೇಷನ್ ಶಾಂತಿ ನಡಿಗೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ನೈರುತ್ಯ ಪದವೀಧರ…

38 mins ago

ಕುಡಿಯುವ ನೀರಿನ ಸಮಸ್ಯೆ: ಕಲುಷಿತ ನೀರು ಸೇವಿಸಿ 114 ಮಂದಿಗೆ ಕಾಲರಾ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಧಾನಸಭೆ ಕ್ಷೇತ್ರವಾದ ವರುಣದ ತಗಡೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಅಲ್ಲಿನ ಜನ…

44 mins ago

ಆರ್‌ಸಿಬಿ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡದೇ ಮೈದಾನದಿಂದ ತೆರಳಿದ ಧೋನಿ..!

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 27 ರನ್​ಗಳಿಂದ…

55 mins ago

ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ಬಂದಿದೆ ಹಸಿರು ಕಳೆ

ಬೇಸಿಗೆಯ ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ವರುಣನ ಕೃಪೆಯಿಂದ ಹಸಿರು ಕಳೆ ಬಂದಿದೆ.  ಜನವರಿಯಿಂದ ಏಪ್ರಿಲ್ ತನಕವೂ ಮಳೆ ಸುರಿಯದ…

1 hour ago