Categories: ಮಂಗಳೂರು

ಬಂಟ್ವಾಳ: ಬಿಜೆಪಿ ಸರಕಾರ ಹಿಂದುಳಿದ ವರ್ಗಕ್ಕೆ ಪ್ರಾದ್ಯಾನ್ಯತೆ ನೀಡಿದೆ- ಸುನಿಲ್ ಕುಮಾರ್

ಬಂಟ್ವಾಳ: ರಾಜ್ಯ ರಾಜಕಾರಣದಲ್ಲಿ ಹೊಸ ತಿರುವನ್ನು ಪಡೆಯುವಂತೆ ಮಾಡಲು ಹಿಂದುಳಿದ ವರ್ಗಗಳ ಮೋರ್ಚಾವನ್ನು ಸಂಘಟನಾತ್ಮಕವಾಗಿ ಗಟ್ಟಿಗೊಳಿಸುವ ಉದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದರು.

ಅವರು ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಮಂಗಳವಾರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನಡೆದ ಹಿಂದುಳಿದ ವರ್ಗಗಳ ಪ್ರಮುಖರ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಅ.30 ರಂದು ಗುಲ್ಬರ್ಗ ದಲ್ಲಿ ನಡೆಯುವ ಹಿಂದುಳಿದ ಮೋರ್ಚಾದ ಸಮಾವೇಶ ಕಾರ್ಯಕ್ರಮ ಯಶಸ್ವಿಗೊಳಿಸುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ಮೋರ್ಚಾದ ವಿಶೇಷ ಸಭೆಯನ್ನು ಹಮ್ಮಿಕೊಂಡು ಮುಕ್ತ ಚರ್ಚೆಗಳನ್ನು ಮಾಡಲಾಗುತ್ತಿದೆ. ಸಮಾವೇಶದಲ್ಲಿ ದ.ಕ.ಜಿಲ್ಲೆಯಿಂದ ಕನಿಷ್ಠ 5000 ಸಾವಿರ ಜನ ಸಮಾವೇಶದಲ್ಲಿ ಭಾಗಿಯಾಗಬೇಕು ಎಂಬ ನಿಟ್ಟಿನಲ್ಲಿ ಪೂರ್ವತಯಾರಿಗಳು ನಡೆಯುತ್ತಿದೆ.

ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಹಿಂದುಳಿದ ವರ್ಗದ ಅಭಿವೃದ್ದಿಗಾಗಿ ವಿವಿಧ ಯೋಜನೆ ಗಳನ್ನು ಪರಿಣಾಮ ಕಾರಿಯಾಗಿ ಜಾರಿ‌ಮಾಡಿದೆ. ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಹೈಕಮಾಂಡ್ ನ ಸೂಚನೆಯಂತೆ, ವಿವಿಧ ಮೋರ್ಚಾಗಳ ಹಾಗೂ ಪಾರ್ಟಿಯ ಕಾರ್ಯಕ್ರಮ ಗಳು ಬೇರೆ ಬೇರೆ ಕಡೆಗಳಲ್ಲಿ ಮಾಡಲು ನಿಶ್ಚಯಿಸಲಾಗಿದೆ.

ನಿರಂತರವಾಗಿ ಹಿಂದುಳಿದ ವರ್ಗ ದವರಿಗೆ ಪ್ರಾದ್ಯಾನ್ಯತೆ ನೀಡುವ ಕೆಲಸ ಬಿಜೆಪಿ ಹಾಗೂ ಸರಕಾರ ಮಾಡಿದೆ. ಹಿಂದುಳಿದ ವರ್ಗಗಳ ಸಮುದಾಯಗಳು ಪರಾಂಪರಿಕವಾಗಿ ಬಿಜೆಪಿ ಯನ್ನು ಬೆಂಬಲಿಸುತ್ತಾ ಬಂದಿದ್ದು, ಬಿಜೆಪಿ ಅಧಿಕಾರಕ್ಕೆ ಹಾಗೂ ಸಂಘಟನಾತ್ಮಕ ಅಭಿವೃದ್ಧಿಯಲ್ಲಿ ಹಿಂದುಳಿದ ಮೋರ್ಚಾ ದ ದೊಡ್ಡ ಕೊಡುಗೆ ಇದೆ ಎಂದು ಅವರು ಹೇಳಿದರು.

ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷ ನೆ.ಲ.ನರೇಂದ್ರ ಬಾಬು ಅವರು ಮಾತನಾಡಿ , ಕೋವಿಡ್ ಮಧ್ಯೆ ಯೂ ಸಂಘಟನೆ ಒತ್ತು ನೀಡಿದ್ದೇವೆ. ಮುಂದಿ‌ನ ಚುನಾವಣೆಯಲ್ಲಿ 150 ಪ್ಲಸ್ ಗುರಿ ತಲುಪಲು ಹಿಂದುಳಿದ ಮೋರ್ಚಾದ ಸಂಘಟಿತ ಹೋರಾಟ ಅಗತ್ಯ ವಿದೆ. ಅ ನಿಟ್ಟಿನಲ್ಲಿ ಸಮಾವೇಶಗಳ ಮೂಲಕ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ.

ರಾಜ್ಯದಲ್ಲಿ 5 ತಂಡಗಳನ್ನು ರಚನೆ ಮಾಡಿಕೊಂಡು ಪ್ರವಾಸ ಮಾಡುತ್ತಿದ್ದೇವೆ, ಸಮಾವೇಶ ಯಶಸ್ವಿಯಾಗಲು ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡಬಿದಿರೆ, ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ವಿಶ್ವ ಕರ್ಮ ನಿಗಮದ ಮಾಜಿ ಅಧ್ಯಕ್ಷ ಬಾಬು ಪತ್ತಾರ್, ಹಿಂದುಳಿದ ವರ್ಗಗಳ ಕಾರ್ಯದರ್ಶಿ ವಿಠಲ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಮ್ ದಾಸ ಬಂಟ್ವಾಳ, ನಿಗಮ ಮಾಜಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರು,

ಕಿಯೋನಿಕ್ಸ್ನಿನಿಗಮದ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಕಾರ್ಯದರ್ಶಿ ಭರತ್ ಕುಮಾರ್, ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ ಪಂಡಿತ್ , ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ, ಡೊಂಬಯ್ಯ ಅರಳ, ಪ್ರಮುಖರಾದ ರೂಪ ಡಿ.ಬಂಗೇರ, ಸತೀಶ್ ಕುಂಪಲ, ನವೀನ ಪಂಗಲ್ ಪಾಡಿ, ಚಂದ್ರಹಾಸ ಉಚ್ಚಿಲ ಮತ್ತಿತರರು ಪ್ರಮುಖರು ಉಪಸ್ಥಿತರಿದ್ದರು.

ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಜಿಲ್ಲಾ ಅಧ್ಯಕ್ಷ ಆರ್.ಸಿ.ನಾರಾಯಣ ರೆಂಜ ಅವರು ಸ್ವಾಗತಿಸಿ, ವಂದಿಸಿದರು.

Gayathri SG

Recent Posts

ಪತ್ರಿಕಾ ವಿತರಕ ರೈಲಿಗೆ ಸಿಲುಕಿ ಆತ್ಮಹತ್ಯೆ

ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದ ಬಳಿ ನಡೆದಿದೆ.

27 seconds ago

ಮಲೆ ಮಾದಪ್ಪನಿಗೆ ಬೆಳ್ಳಿ ಆರತಿ ತಟ್ಟೆ ನೀಡಿದ ದಾನಿ : ಹೇಗಿದೆ ಗೊತ್ತಾ?

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಪವಾಡ ಪುರುಷ ಶ್ರೀ ಮಲೆ ಮಹದೇಶ್ವರನಿಗೆ ಬೆಂಗಳೂರಿನ ನಾಗಮಣಿ.ಎಂ ಮತ್ತು ಕುಟುಂಬ 01 ಕೆಜಿ…

9 mins ago

ಭಯಾನಕ ದೃಶ್ಯ : ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಬೆಂಕಿ ತಗುಲಿ 10 ಮಂದಿಗೆ ಗಾಯ

  ಬೈಕ್ ಸ್ಫೋಟಗೊಂಡು ಸುಮಾರು ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಈ ಭಯಾನಕ ಘಟನೆ…

25 mins ago

ಗುಂಡ್ಲುಪೇಟೆ ಪೊಲೀಸರಿಂದ ಕಾರ್ಯಾಚರಣೆ : ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದ ವೇಳೆ ಗುಂಡ್ಲುಪೇಟೆ ಪೊಲೀಸರು ದಾಳಿ 2 ಕೆ.ಜಿ‌ ಗಾಂಜಾ ಸಮೇತ ಇಬ್ಬರು ಆರೋಪಿಗಳನ್ನು…

46 mins ago

13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ : ಪೊಲೀಸ್‌ ಅಲರ್ಟ್‌

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ ಭಾನುವಾರ ಇ-ಮೇಲ್‌ ಮೂಲಕ ಬೆದರಿಕಯೊಂದು ಬಂದಿದ್ದು ಅದರಂತೆ ದೇಶಾದ್ಯಂತ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ…

53 mins ago

ಮೂರು ಕೊಲೆ ಕೇಸ್‌ : ಬೆಳ್ಳಂ ಬೆಳಗೆ ಆರೋಪಿ ಕಾಲಿಗೆ ಪೊಲೀಸ್‌ ಗುಂಡೇಟು

ಶಿವಮೊಗ್ಗದಲ್ಲಿ ನಡೆದಿದ್ದ ಗ್ಯಾಂಗ್ ವಾರ್ ಪ್ರಕರಣದಲ್ಲಿ ಮೂವರನ್ನು ನಡುಬೀದಿಯಲ್ಲಿ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗಳಲ್ಲಿ ಒಬ್ಬ ರೌಡಿ ಶೀಟರ್‌ ಕಾಲಿಗೆ…

1 hour ago