Categories: ಮಂಗಳೂರು

ಬಂಟ್ವಾಳ: ಮನೆಮನೆಗೆ ತೆರಳಿ ಮತಯಾಚನೆ ನಡೆಸಿದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬಡಗಕಜೆಕಾರು ಗ್ರಾಮಪಂಚಾಯತ್ ವ್ಯಾಪ್ತಿಯ ಬಡಗಕಜೆಕಾರು, ತೆಂಕಕಜೆಕಾರು, ಮಡಾವು ಗ್ರಾಮಗಳಲ್ಲಿ ಮನೆಮನೆಗಳಿಗೆ ತೆರಳಿ ಮತಯಾಚನೆ ನಡೆಸಿದರು.

ಬಳಿಕ ಕಾರ್ಯಕರ್ತರ ಜೊತೆಗೆ ಚುನಾವಣೆಯನ್ನು ಯಾವ ರೀತಿಯಲ್ಲಿ ಎದುರಿಸಬೇಕು, ಬಿಜೆಪಿ ಪರವಾಗಿ ಅಲೆಯನ್ನು ಎಬ್ಬಿಸುವ ಪ್ರಕ್ರಿಯೆಗೆ ಮಾಡಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಕಾಂಗ್ರೇಸ್ ನ ಸುಳ್ಳು ಆರೋಪಗಳಿಗೆ ಕಾರ್ಯಕರ್ತರು ಪ್ರತಿಕ್ರಿಯೆ ನೀಡಬೇಕು. ಬಿಜೆಪಿ ಅಭಿವೃದ್ಧಿಯ ಪ್ರೋಗ್ರೆಸ್ ಕಾರ್ಡ್ ಮೂಲಕ ಮತದಾರರ ಮನಮುಟ್ಟುವ ಕೆಲಸ ಮಾಡಬೇಕು. ಚುನಾವಣೆಯಲ್ಲಿ ಗೆಲುವು ಸಾಧಿಸುವವರೆಗೆ ನಮ್ಮೆಲ್ಲಾ ಕೆಲಸಕಾರ್ಯಗಳನ್ನು ಬದಿಗಿಟ್ಟು ವಿರಮಿಸದೆ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಶಾಂತಿ ನೆಮ್ಮದಿಯ ಬದುಕಿನ ಜೊತೆ 2 ಸಾವಿರಕ್ಕೂ ಅಧಿಕವಾದ ಅನುದಾನಗಳ ಮೂಲಕ ಅಭಿವೃದ್ಧಿ ಮಾಡಿದ್ದೇನೆ. ಆರೋಗ್ಯ, ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಿ, ಬಂಟ್ವಾಳ ಕ್ಷೇತ್ರದಲ್ಲಿ ಎಲ್ಲಾ ಅಭಿವೃದ್ಧಿಯನ್ನು ಮಾಡಿದ್ದೇನೆ. ಕ್ಷೇತ್ರದಲ್ಲಿ ನಡೆಸಲಾಗಿರುವ ಅಭಿವೃದ್ಧಿಯ ಪ್ರೋಗೆಸ್ ಕಾರ್ಡ್ ನ ಮೂಲಕ ಮನೆಮನೆಗೆ ತೆರಳಿ ಗೌರವದಿಂದ ಮತಕೇಳಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಜಿಲ್ಲಾ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಕ್ಷೇತ್ರ ಸಮಿತಿ ಕಾರ್ಯದರ್ಶಿ ರಮನಾಥ ರಾಯಿ, ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರ್ಮಿತ್ ಜೈನ್, ಬಡಗಜೆಕಾರು ಸದಸ್ಯರಾದ ಸುರೇಶ್ ಬಾರ್ದೊಟ್ಟು, ಸತೀಶ್ ಬಂಗೇರ ಕಜೆಕಾರು,ಸುಗಂದಿ, ಉಷಾದೇವದಾಸ್ ಕೇಲ್ದಬೈಲು, ಪ್ರಮುಖರಾದ ಗಂಗಾಧರ ಪೂಜಾರಿ ಕಜೆಕಾರು, ಮುತ್ತಪ್ಪ ಮೂಲ್ಯ ಪಾದೆ, ಅಣ್ಣಿ, ಲೋಕೇಶ್ ಪರಾರಿಬೆಟ್ಟು, ರೋಹಿನಾಥ್ ಕಕ್ಯೆಪದವು, ಯಶವಂತ ಕೋಡ್ಯೇಲು, ಪ್ರಮೋದ್ ಸಾಲಿಯಾನ್ ಬಾರ್ದೊಟ್ಟು, ವಸಂತ ಸಾಲಿಯಾನ್ ಉಳಿ,ಪ್ರಕಾಶ್ ಕರ್ಲ, ಧರ್ಣಪ್ಪ ಮೂಲ್ಯ, ಸದಾಶಿವ ಆಚಾರ್ಯ, ಅಮ್ಮು ಚೇತನ್, ಸುಧಾಕರ ಕರ್ಲ, ಗಿರಿಜಾ ಕರ್ಲ, ಚಿತ್ತರಂಜನ್, ಕೃಷ್ಣಪ್ಪ, ರವೀಂದ್ರ ರೈ, ಕೇಶವ, ಚಿದಾನಂದ, ವಿನುತ್, ರಮಾನಂದ, ಹರೀಶ್ ಪ್ರಭು, ರೋಹಿನಾಥ್ ಕಂರ್ಬಡ್ಕ,ಗಂಗಾಧರ ಪೂಜಾರಿ ಅಂಬಡೆಮಾರ್, ಶೇಷಗಿರಿ ಪರಂಪಾಡಿಗುತ್ತು, ಪ್ರವೀಣ್ ಗೌಡ, ಕೇಶವ ಪ್ರಭು,ಕಂರದೋಡಿ, ಮಾಲತಿಶೋಭ,ಮನ್ಮಥ್ ಮಾಡ, ಕೃಷ್ಣಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಮಡವು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಮಧ್ಯಾಹ್ನ ದ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Gayathri SG

Recent Posts

ಮರಾಠ ಸಮಾಜಕ್ಕೆ ಬಿಜೆಪಿ ಕೊಡುಗೆ ದೊಡ್ಡದಿದೆ : ಎಂ.ಜಿ. ಮುಳೆ

ಮರಾಠ ಸಮಾಜಕ್ಕೆ ಬಿಜೆಪಿ ಕೊಡುಗೆ ಬಹಳ ದೊಡ್ಡದಿದೆ' ಎಂದು ಮರಾಠ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ…

3 mins ago

ಬಿಪಿ-ಶುಗರ್ ರೋಗಿಗಳ ಅಡುಗೆಗೆ ಈ ಎಣ್ಣೆ ಉತ್ತಮ

ಭಾರತೀಯ ಅಡುಗೆಮನೆಗಳಲ್ಲಿ ಎಣ್ಣೆ ಅತ್ಯಗತ್ಯ. ಹೆಚ್ಚಿನ ಭಾರತೀಯ ಆಹಾರ ಉತ್ಪನ್ನಗಳಲ್ಲಿ ತೈಲವು ಪ್ರಮುಖ ಅಂಶವಾಗಿದೆ. ಹೀಗಾಗಿ ಎಷ್ಟೋ ಜನ ಬಳಸುವ…

10 mins ago

ಅಯೋದ್ಯೆಗೆ ಮೋದಿ ಬೇಟಿ : ರಾಮಲಲ್ಲಾನಿಗೆ ಸಾಷ್ಟಾಂಗ ನಮಸ್ಕಾರ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರ, ದೇಶಾದ್ಯಂತ ಸಾಲು ರ‍್ಯಾಲಿಗಳ ಭರಾಟೆಯ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ…

34 mins ago

ಇಂದು ಈ ರಾಶಿಯವರಿಗೆ ನಿರೀಕ್ಷೆ ತಕ್ಕ ಫಲ ದೊರಕಲಿದೆ

ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ. ಆಪ್ತ ವ್ಯಕ್ತಿಗಳಿಗೆ ಸಹಾಯ ಮಾಡುವಿರಿ. ಮನೆಯಲ್ಲಿ ಕಲಹಗಳಿಗೆ ಆಸ್ಪದ ಕೊಡಬೇಡಿ. ಆರೋಗ್ಯ ಪರಿಪೂರ್ಣವಾಗಿರಲಿದೆ.…

46 mins ago

ಮೈಸೂರು ಜಿಲ್ಲೆಯಲ್ಲಿ ಶೇ.75ರಷ್ಟು ಮಳೆ ಕೊರತೆ

ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿದ್ದು, ಬಿತ್ತನೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ವಾಡಿಕೆಯಷ್ಟು…

9 hours ago

ಮುರುಘಾ ಶರಣರಂತೆ ಪ್ರಜ್ವಲ್‌ ರೇವಣ್ಣನನ್ನು ಬಂಧಿಸಿ: ಮಾರಸಂದ್ರ ಮುನಿಯಪ್ಪ

'ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಡಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಬಂಧಿಸಿರುವಂತೆ ಹಾಸನದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ…

9 hours ago