ಮಂಗಳೂರು

ಬಂಟ್ವಾಳ: “ಅಗಮ ಪ್ರವೀಣ” ಬಿರುದು ಪ್ರಧಾನ ಕಾರ್ಯಕ್ರಮ

ಬಂಟ್ವಾಳ: ಇಲ್ಲಿನ ಅದಿಶಕ್ತಿ, ಭದ್ರಕಾಳಿ ಸೇವಾ ಸಮಿತಿಯ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸರ್ವೈಶ್ಚರ್ಯ ಪೂಜೆ, ಗುರುವಂದನೆ ಹಾಗೂ “ಅಗಮ ಪ್ರವೀಣ” ಬಿರುದು ಪ್ರಧಾನ ಕಾರ್ಯಕ್ರಮ ಪಣೆಕಲ ಶ್ರೀ ದುರ್ಗಾಂಭ ಮಹಮ್ಮಾಯಿ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.

ಬ್ರಹ್ಮ ಶ್ರೀ ಕುಂಟಾರು ರವೀಶ್ ತಂತ್ರಿಯವರು ಇದಕ್ಕು ಮೊದಲು ಪಣೆಕಲ ವಸಂತ ಭಟ್ ಅವರಿಗೆ ದೇವಸ್ಥಾನದಲ್ಲಿ ತಂತ್ರಿ ದೀಕ್ಷೆಯನ್ನಿತ್ತರು‌. ಬಳಿಕ ಧಾರ್ಮಿಕಸಭೆಯಲ್ಲಿ ಅವರಿಗೆ “ಆಗಮ ಪ್ರವೀಣ” ಬಿರುದನ್ನು ಪ್ರಧಾನಗೈದರು.ನಂತರ ಧಾರ್ಮಿಕ ಉಪನ್ಯಾಸಗೈದ ಕುಂಟಾರು ರವೀಶ್ ತಂತ್ರಿಯವರು ಭಾರತ ದೇಶ ವಿಶ್ವಗುರುವಾಗಲು ಆಧ್ಯಾತ್ಮಿಕವು ಒಂದು ಕಾರಣವಾಗಿದೆ.ಜಾತಿ ಮಯಿಲೆಗೆ ಎನ್ನುವುದು ಅಜ್ಞಾನವಾಗಿದ್ದು,ಯಜ್ಞವೇ ಸುಜ್ಞಾನವಾಗಿದೆ ಎಂದರು.

ಇದೇ ವೇಳೆ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿಯವರು ಪಣೆಕಲ ಶ್ರೀದುರ್ಗಾಂಭ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಅದರ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿ ಆಶೀರ್ವಚನಗೈದು, ತಂತ್ರಾಗಮನದ ಮೂಲಕ ಜಾತಿ,ಜಾತಿಯನ್ನು ಬೆಸೆಯುವ ಕೆಲಸವಾಗಬೇಕು,ಮನೆ,ಮನೆಯಲ್ಲು ಸಂಸ್ಕಾರ ಬೆಳೆಸುವ ಮತ್ತು ಉಳಿಸುವ ನಿಟ್ಟಿ ನಲ್ಲಿ ಪ್ರಯತ್ನಗಳಾಗಬೇಕು ಎಂದರು.

ಅಳದಂಗಡಿ ಅರಮನೆಯ ಶ್ರೀ ಡಾ. ಪದ್ಮಪ್ರಸಾದ್ ಅಜಿಲರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಸೇಸಪ್ಪಕೋಟ್ಯಾನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಕುಂಟಾರು ರವೀಶ್ ತಂತ್ರಿಯವರನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು‌.ಬಂಟ್ವಾಳ ಶಾಸಕ ರಾಜೇ‌ಶ್ ನಾಯ್ಕ ಉಳಿಪಾಡಿಗುತ್ತು ಅವರು ಅಗಮಿಸಿ ಶುಭಹಾರೈಸಿದರು.

ಮಾಜಿ ಸಚಿವರಾದ ಬಿ. ರಮಾನಾಥ ರೈ ,ಪುರಸಭಾ ಸದಸ್ಯೆ ಮೀನಾಕ್ಷಿಗೌಡ,ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ,ಭಜರಂಗದಳದ ಪುತ್ತೂರು ಜಿಲ್ಲಾ ಸಂಚಾಲಕ ಭರತ್ ಕುಮ್ಡೇಲು,ಶ್ರೀ‌ ಆದಿಶಕ್ತಿ ಭದ್ರಕಾಳಿ ಸೇವಾ ಸಮಿತಿ ಅಧ್ಯಕ್ಷ ಲೋಕೇಶ್ ಭಟ್,ನರಿಕೊಂಬು ಎರಿಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಳದ ಪ್ರದಾನ ಅರ್ಚಕ ಕೇಶವ ಶಾಂತಿ‌,ಶ್ರೀ ಮಹಮ್ಮಾಯಿ ದೇವಸ್ಥಾನದ ಅನುವಂಶಿ ಟ್ರಸ್ಟಿ ದಿನೇಶ್ ಪೂಜಾರಿ,ಶ್ರೀ ಮಹಮ್ಮಾಯಿ ದುರ್ಗಾಂಭ ಟ್ರಸ್ಟ್ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ವೇದಿಕೆಯಲ್ಲಿದ್ದರು.

ಶ್ರೀ ಆದಿಶಕ್ತಿ ಸೇವಾಸಮಿತಿ ಸದಸ್ಯ ಅಭಿಜಿತ್ ಸ್ವಾಗತಿಸಿ ,ಪ್ರಸ್ತಾವಿಸಿದರು. ಶ್ರೀಮಹಮ್ಮಾಯಿ ದುರ್ಗಾಂಭ ಟ್ರಸ್ಟ್ ನ ಪ್ರ.ಕಾರ್ಯದರ್ಶಿ ಮಹಾಬಲ ಬಂಗೇರ ವಂದಿಸಿದರು.ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.

ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಮಾಣಿಲ ಶ್ರೀ ಮೋಹನ್ ದಾಸ್ ಸ್ವಾಮೀಜಿಯವರ ಮಾರ್ಗದರ್ಶನ,ಅಳದಂಗಡಿ ಅರಮನೆಯ ಶ್ರೀ ಡಾ. ಪದ್ಮಪ್ರಸಾದ್ ಅಜಿಲರ ಉಪಸ್ಥಿತಿಯಲ್ಲಿ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಸರ್ವೈಶ್ಚರ್ಯ ಪೂಜೆ,ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಿತು‌.

Ashika S

Recent Posts

ನಂಜನಗೂಡು ಶ್ರೀ ನಂಜುಂಡೇಶ್ವರನ ದರ್ಶನ ಪಡೆದ ಹೆಚ್. ಡಿ ರೇವಣ್ಣ

ಮಹಿಳೆ ಕಿಡ್ನಾಪ್ ಕೇಸ್ ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಮಾಜಿ ಸಚಿವ ಹೆಚ್.…

14 mins ago

ʼನನ್ನನ್ನು ನೋಡಬೇಡಿ, ಅಟಲ್‌ ಸೇತುವೆ ನೋಡಿʼ ಎಂದ ರಶ್ಮಿಕಾಗೆ ಪಿಎಂ ಮೋದಿ ಮೆಚ್ಚುಗೆ

ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ಸಿನಿಮಾಗಳು.…

42 mins ago

ಗಮನ ಸೆಳೆದ ಮಾವು ಮೇಳ; ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ

ಹಣ್ಣುಗಳ ರಾಜನೆಂದು ಕರೆಯಲಾಗುವ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ…

1 hour ago

ಇಂದು ರೀ ರಿಲೀಸ್ ಆದ ಉಪ್ಪಿಯ ‘‘A’’ ಸಿನಿಮಾ; ಸ್ವಾಗತಿಸಿದ ಫ್ಯಾನ್ಸ್

ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ ಇಂದು ರೀ ರಿಲೀಸ್​ ಆಗಿದೆ. ಬೆಂಗಳೂರಿನ…

2 hours ago

ಚಾರ್ ಧಾಮ್​ ಯಾತ್ರೆ, ದೇವಸ್ಥಾನಗಳ ಬಳಿ ರೀಲ್ಸ್​ಗೆ ನಿಷೇಧ

ಚಾರ್​ ಧಾಮ್ ಯಾತ್ರೆ ಶುರುವಾಗಿದ್ದು, ಮೇ 31ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲದೆ ದೇವಾಲಯದಗಳ…

2 hours ago

ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ !

ಭಾರತದ ಎಂಡಿಎಚ್​ ಹಾಗೂ ಎವರೆಸ್ಟ್​ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು…

3 hours ago