Categories: ಮಂಗಳೂರು

ಬಂಟ್ವಾಳ: ಮನೆಯೊಂದಕ್ಕೆ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ

ಬಂಟ್ವಾಳ: ಮನೆಯೊಂದಕ್ಕೆ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ಚೆನೈತ್ತೋಡಿ ಗ್ರಾಮದ ವಾಮದಪದವಿನಲ್ಲಿ ನಡೆದಿದೆ.

ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ವಾಮದಪದವು ಸಮೀಪದ ಕಡ್ತಲಬೆಟ್ಟು ಕೋಡಿಬಾಕಿಮಾರ್ ಎಂಬಲ್ಲಿ ಸುಧಾಕರ್ ಶೆಟ್ಟಿ ಎಂಬವರ ಮನೆಗೆ ಮೇ.25 ರಂದು ಗುರುವಾರ ಮಧ್ಯ ರಾತ್ರಿ 12.30 ರ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಸುಮಾರು 2 ಲಕ್ಷಕ್ಕೂ ಅಧಿಕ ರೂ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ. ಮನೆಯಲ್ಲಿ ಮಲಗಿದ್ದ ವರಿಗೆ ಕೂಡಲೇ ಎಚ್ಚರವಾದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

ಮನೆಯ ಒಂದು ಪಾಶ್ವಭಾಗ ಬೆಂಕಿಗೆ ಅಹುತಿಯಾಗಿದೆ. ಕೂಡಲೇ ಸ್ಥಳೀಯ ಯುವಕರ ಸಹಾಯದಿಂದ ನೀರು ಹಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡಲಾಗಿದೆ .ಹಾಗಾಗಿ ಹೆಚ್ಚಿನ ಅನಾಹುತವನ್ನು ತಪ್ಪಿಸಲಾಗಿದೆ.

ಮನೆಯ ಅಡುಗೆ ತಯಾರಿಸುವ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರೊಳಗೆ ದಾಸ್ತಾನು ಮಾಡಲಾಗಿದ್ದ ಒಣ ಅಡಿಕೆ ಮತ್ತು ಬೆಲೆಬಾಳುವ ಮರದ ಸೊತ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ತಾಲೂಕಿನ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Sneha Gowda

Recent Posts

ಗಬ್ಬೆದ್ದು ನಾರುತ್ತಿರುವ ಚರಂಡಿ: ಅಂಬೇಡ್ಕರ್ ನಾಮಫಲಕದ ಬಳಿಯೇ ದುರ್ನಾತ

ಗಬ್ಬೆದ್ದು ನಾರುತ್ತಿರುವ ಚರಂಡಿಯ ಅವ್ಯವಸ್ಥೆಯಿಂದಾಗಿ ಗ್ರಾಮಸ್ಥರು ಮೂಗು, ಬಾಯಿ ಮುಚ್ಚಿಕೊಂಡೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮ…

16 mins ago

ಪ್ರಜ್ವಲ್ ರೇವಣ್ಣ ಸಹ ಅರೆಸ್ಟ್ ಆಗಲೇಬೇಕು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಪ್ರಜ್ವಲ್ ರೇವಣ್ಣ ಅವರ ಪೆನ್‍ಡ್ರೈವ್ ಪ್ರಕರಣ ಹಾಗೂ ರೇವಣ್ಣ ಬಂಧನದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,…

25 mins ago

ಮಳೆರಾಯನಿಗಾಗಿ ದೇವರ ಮೊರೆ ಹೋದ ತುಮಕೂರು ಜನತೆ

ಬಿಸಿಲ ತಾಪಕ್ಕೆ ಜನ ಜೀವನ ತತ್ತರಿಸಿ ಹೋಗಿದ್ದು, ಇದೀಗ ಮಳೆರಾಯನ ಕಣ್ಣಾಮುಚ್ಚಾಲೆ ಆಟ ನಿಲ್ಲಿಸಲೆಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ…

26 mins ago

ಕರ್ನಾಟಕದ ಮಾನ-ಮರ್ಯಾದೆ ರಸ್ತೆಗಳಲ್ಲಿ ಪೆನ್‌ಡ್ರೈವ್ ಮೂಲಕ ಹರಾಜಾಗುತ್ತಿದೆ

ಪ್ರಜ್ವಲ್ ವಿಚಾರದಲ್ಲಿ ಬಿಜೆಪಿ  ಡಬಲ್ ಸ್ಟ್ಯಾಂಡ್ ತೆಗೆದುಕೊಂಡಿದೆ. ಪ್ರಜ್ವಲ್ ದೇಶ ಬಿಟ್ಟು ಹೋಗಲು ಕೇಂದ್ರದ ಸಪೋರ್ಟ್ ಇದೆ ಎಂದು ಯುವ…

43 mins ago

ಪ್ರಜ್ವಲ್ ವಿಡಿಯೋದಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಹೈ ಟೆನ್ಷನ್!

ಹಾಸನದಲ್ಲಿ ವೈರಲ್ ಆದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಇವತ್ತು ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ…

46 mins ago

ಮುಸ್ಲಿಮರಿಗೆ ನೀಡಿರುವ ಶೇ.4ರಷ್ಟು ಮೀಸಲಾತಿಯನ್ನು ಮುಂದುವರೆಸುತ್ತೇವೆ ಎಂದ ಟಿಡಿಪಿ

ಚುನಾವಣೆಯಲ್ಲಿ ಗೆದ್ದರೆ ಮುಸ್ಲಿಮರಿಗೆ ನೀಡಲಾಗಿರುವ ಶೇ.4ರಷ್ಟು ಮೀಸಲಾತಿಯನ್ನು ಮುಂದುವರೆಸುತ್ತೇವೆ ಎಂದು ತೆಲುಗು ದೇಶಂ ಪಕ್ಷದ(ಟಿಡಿಪಿ) ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು…

50 mins ago