News Karnataka Kannada
Wednesday, April 17 2024
Cricket
ಮಂಗಳೂರು

ಫೆ.1 ರಿಂದ 8 ತಿಂಗಳು ಕುಮಾರ ಪರ್ವತ ಚಾರಣಕ್ಕೆ ನಿಷೇಧ: ಕಾರಣ ಇಲ್ಲಿದೆ

Kk Trk
Photo Credit : News Kannada

ಮಂಗಳೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪವೇ ಇರುವ ಕುಮಾರ ಪರ್ವತದ ಚಾರಣಕ್ಕೆ ಫೆಬ್ರವರಿ 1ರಿಂದ ನಿಷೇಧ ಹೇರಲಾಗಿದೆ. ಜಿಲ್ಲೆಯಾದ್ಯಂತ ಬಿಸಿಲಿನ ವಾತಾವರಣ ಇರುವುದು ಹಾಗೂ ಪರ್ವತದಲ್ಲಿ ನೀರಿನ ಸಮಸ್ಯೆ ಎದುರಾಗುವ ಹಿನ್ನೆಲೆಯಲ್ಲಿ ಮುಂಜಾಗರೂಕತೆ ಕ್ರಮವಾಗಿ ಹಾಗೂ ಚಾರಣಿಗರ ಹಿತದೃಷ್ಟಿಯಿಂದ ಫೆ.1ರಿಂದ ಅಕ್ಟೋಬರ್ ವರೆಗೆ ಅಥವಾ ಮುಂದಿನ ಆದೇಶದವರೆಗೆ ಕುಮಾರಪರ್ವತ ಚಾರಣಕ್ಕೆ ನಿಷೇಧ ವಿಧಿಸಲಾಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಈ ವರ್ಷದ ಕುಮಾರ ಪರ್ವತದ ಚಾರಣ ಅವಧಿ ಮುಗಿದಿದ್ದು, ಪರ್ವತದ ಹುಲ್ಲುಗಾವಲೂ ಸಂಪೂರ್ಣ ಒಣಗಿದೆ. ಬಿಸಿಲಿನ ಬೇಗೆಗೆ ಬೆಂಕಿಗೆ ತುತ್ತಾಗದಂತೆ ಮುಂಜಾಗರೂಕತಾ ಕ್ರಮವನ್ನು ಕೈಗೊಳ್ಳಬೇಕಾದ ಸ್ಥಿತಿಯೂ ಇದೆ. ಜನವರಿ 26ರಂದು ನೂರಾರು ಮಂದಿ ಊಟಕ್ಕೆ ಸಾಲಿನಲ್ಲಿ ನಿಂತಂತೆ ಕುಮಾರ ಪರ್ವತವನ್ನೇರಲು ಆಸಕ್ತಿಯಿಂದ ನಿಂತಿದ್ದರು. ಇದರ ತರುವಾಯ ಅರಣ್ಯ ಇಲಾಖೆಯೂ ಎಚ್ಚೆತ್ತಿದೆ.

ಪುಷ್ಪಗಿರಿ ಚಾರಣ ಎಂದೂ ಕರೆಯಲ್ಪಡುವ ಕುಮಾರ ಪರ್ವತ ಚಾರಣದಲ್ಲಿ ತಳಹಂತದಿಂದ ಶಿಖರದ ವರೆಗೆ ಒಟ್ಟು 25-28 ಕಿ.ಮೀ ನಡೆಯಬೇಕು. ಮತ್ತು ಸಾಮಾನ್ಯವಾಗಿ ಎರಡು ದಿನಗಳ ಅವಧಿಯಲ್ಲಿ ಪೂರ್ಣಗೊಳ್ಳುತ್ತದೆ. ಮೇಲೆ ತಲುಪಿದ ನಂತರ ಕಾಣಸಿಗುವ ವಿಹಂಗಮ ನೋಟ, ದೈತ್ಯ ಬಂಡೆಗಳು ಮತ್ತು ತಂಪಾದ ಗಾಳಿ , ಮಂಜು ನೋಡಲು ಆಕರ್ಷಣೀಯ.

ಅಲ್ಲದೆ, ಇಲ್ಲಿ ಭಟ್ಟರ ಮನೆ, ಗಿರಿಗಡ್ಡೆ ವ್ಯೂ ಪಾಯಿಂಟ್, ಕುಮಾರ ಪರ್ವತ ವ್ಯೂ ಪಾಯಿಂಟ್‌ಗಳು, ನಿತ್ಯಾನಂದ ಶ್ರೀ ಕೈಲಾಸ ದೇವಸ್ಥಾನ, ಪುಷ್ಪಗಿರಿ ಶಿಖರ ನೋಡಲೇಬೇಕಾದ ಜಾಗಗಳು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು