Categories: ಮಂಗಳೂರು

ಅಕ್ಟೋಬರ್‌ 15ರವರೆಗೆ ಮರಳುಗಾರಿಕೆ ನಿಷೇಧ ಜಾರಿ

ಮಂಗಳೂರು: ಸಿಆರ್‌ಝಡ್‌ ಪ್ರದೇಶದಲ್ಲಿ ಮರಳುಗಾರಿಕೆ ಮಳೆಗಾಲ ಆರಂಭವಾಗುವ ಎರಡು ತಿಂಗಳ ಮೊದಲೇ ಪೂರ್ಣಗೊಂಡಿದ್ದು, ಅಕ್ಟೋಬರ್‌ 15ರವರೆಗೆ ಮರಳುಗಾರಿಕೆ ನಿಷೇಧ ಜಾರಿಯಲ್ಲಿರುತ್ತದೆ.

ಪರವಾನಿಗೆಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾ. 4ಕ್ಕೇ ಸಿಆರ್‌ಝಡ್‌ ವ್ಯಾಪ್ತಿಯ ಮರಳು ದಿಣ್ಣೆಗಳಲ್ಲಿ ಮರಳುಗಾರಿಕೆ ನಿಂತಿದ್ದು, ಆ ಬಳಿಕ ಇಸಿ (ಪರಿಸರ ಕ್ಲಿಯರೆನ್ಸ್‌) ಮತ್ತೆ ಪಡೆಯುವುದಕ್ಕೆ ಬೇಕಾದ ಬೆಥಮೆಟ್ರಿ ಸರ್ವೇ ಪೂರ್ಣಗೊಂಡಿದ್ದು, ಆದರೆ ವರದಿ ಬರಲು ಬಾಕಿ ಇದೆ. ಅಲ್ಲದೆ ಈ ಮಧ್ಯೆ ಚುನಾವಣ ಪ್ರಕ್ರಿಯೆಯೂ ಇದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಮಟ್ಟದ ಸಮಿತಿಯೂ ಸಭೆ ಸೇರಲು ಸಾಧ್ಯವಾಗಿಲ್ಲ.

ಇನ್ನು ಬೆಥಮೆಟ್ರಿ ವರದಿ ಬಂದ ಬಳಿಕ ಡಿಸಿ ಸಮಿತಿಯಲ್ಲಿ ಇದಕ್ಕೆ ಅನುಮೋದನೆ ಪಡೆದು ಸರಕಾರದ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿ (ಕೆಸಿಝಡ್‌ಎಂ)ಯ ಅನುಮತಿ ಪಡೆಯುವ ಪ್ರಕ್ರಿಯೆ ಬಾಕಿ ಇದೆ.

Gayathri SG

Recent Posts

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ; ದೇಶದಲ್ಲಿ ಪತ್ರಕರ್ತರ ಭದ್ರತೆಗಿಲ್ಲ ಗ್ಯಾರಂಟಿ!

ಮಾಧ್ಯಮವನ್ನು ಸಂವಿಧಾನದ 4ನೇ ಆಯಾಮ ಎಂದು ಕರೆಯಲಾಗುತ್ತದೆ. ಜಗತ್ತಿನಲ್ಲಿ ನಡೆಯುವ ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯವನ್ನು ಮಾಧ್ಯಮಗಳನ್ನು ಮಾಡುತ್ತವೆ. ಸತ್ಯವನ್ನು…

54 seconds ago

ʼಯಾವ ದೇಶದಲ್ಲಿ ಇದ್ದರೂ ಪ್ರಜ್ವಲ್ ರೇವಣ್ಣನನ್ನು ಹಿಡಿದು ತರುತ್ತೇವೆʼ

ಪ್ರಜ್ವಲ್ ರೇವಣ್ಣ ಯಾವುದೇ ದೇಶದಲ್ಲಿ ಇದ್ದರೂ ಹಿಡಿದು ತರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು. ಕೇಂದ್ರ ಸರ್ಕಾರ ಪ್ರಜ್ವಲ್ ರಕ್ಷಣೆ…

8 mins ago

ಹಾಸನದ ಫಾರ್ಮ್‌ಹೌಸ್‌ಗೆ ಎಸ್ಐಟಿ ತಂಡ ಭೇಟಿ; ವಿಡಿಯೋ ಕೇಸ್‌ಗೆ ಹೊಸ ಟ್ವಿಸ್ಟ್

ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ತನಿಖೆ ಚುರುಕಾಗಿದೆ. ಇಂದು ಬೆಳ್ಳಂಬೆಳಗ್ಗೆ ಎಸ್‌ಐಟಿ ಅಧಿಕಾರಿಗಳ ತಂಡ ಹಾಸನ…

24 mins ago

ಮೇ. 4ರಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಉದ್ಯೋಗ ಮೇಳ

ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು, ವಿಜ್ಡಮ್ ಸಂಸ್ಥೆಗಳ ಸಹಯೋಗದೊಂದಿಗೆ ಉದ್ಯೋಗ ಮೇಳವನ್ನು ಮೇ 4ರಂದು ಬೆಳಿಗ್ಗೆ 9 ರಿಂದ ಸಂಜೆ 4:30ರವರೆಗೆ…

26 mins ago

ಚಲಿಸುತ್ತಿರುವ ರೈಲಿನಲ್ಲಿಯೇ ಪತ್ನಿಗೆ ತ್ರಿವಳಿ ತಲಾಕ್‌ ನೀಡಿ ಪರಾರಿಯಾದ ಭೂಪ

ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲಿನಲ್ಲಿಯೇ ತನ್ನ ಪತ್ನಿಗೆ ತ್ರಿವಳಿ ತಲಾಕ್‌ ನೀಡಿ ಪರಾರಿಯಾದ ಘಟನೆ ಉತ್ತರ ಪ್ರದೇಶದ ಝಾನ್ಸಿ ಜಂಕ್ಷನ್‌ ಸಮೀಪ…

39 mins ago

ಮತ್ತೆ ಮಳೆಯ ಆರ್ಭಟ; ಶಾಲಾ ಕಾಲೇಜುಗಳಿಗೆ ರಜೆ, ವಿಮಾನ ಹಾರಾಟ ಬಂದ್

ಎಪ್ರಿಲ್ ತಿಂಗಳಲ್ಲಿ ಮಳೆಯ ಆರ್ಭಟಕ್ಕೆ ನಲುಗಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತೆ ಮಳೆ ಪ್ರಾರಂಭವಾಗಿದೆ. ಮರಳುಗಾಡು ದುಬೈ ಮಳೆಯಿಂದಾಗಿ ತತ್ತರಿಸಿ…

57 mins ago