Categories: ಮಂಗಳೂರು

ಅರಂತೋಡು: ನದಿಯಲ್ಲಿ ಮುಳುಗಿ ನಿವೃತ್ತ ಶಿಕ್ಷಕ ಸಾವು

ಅರಂತೋಡು: ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರುವಿನಲ್ಲಿ ವ್ಯಕ್ತಿಯೊಬ್ಬರು ರವಿವಾರ ಬೆಳಗ್ಗೆ ಪಯಸ್ವಿನಿ ನದಿಗೆ ಸ್ನಾನಕ್ಕೆಂದು ತೆರಳಿದ್ದು, ಸಂಜೆಯ ವೇಳೆಗೆ ಶವವಾಗಿ ಪತ್ತೆಯಾಗಿದ್ದಾರೆ.

ಆರಂಭವೂರು ಮಾಜಿಗುಂಡಿ ನಿವಾಸಿ ನಿವೃತ ಶಿಕ್ಷಕ ದಿನೇಶ್‌ (65) ಮೃತಪಟ್ಟವರು. ಬೆಳಗ್ಗೆ ಮನೆಯಿಂದ ಸ್ನಾನ ಮಾಡಲೆಂದು ಪಯಸ್ವಿನಿ ನದಿಗೆ ಹೋದವರು ಬಹಳ ಹೊತ್ತು ಕಳೆದರೂ ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಮತ್ತು ಸ್ಥಳೀಯರು ವಿಷಯ ತಿಳಿದು ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರು.

ಸಂಜೆ ವೇಳೆ ಅವರ ಮೃತದೇಹ ಮಜಿಗುಂಡಿಯ ನದಿಯಲ್ಲಿ ತೇಲಿಕೊಂಡಿರುವುದು ಪಕ್ಕದ ಮನೆಯವರ ಗಮನಕ್ಕೆ ಬಂದಿದ್ದು, ಸ್ಥಳೀಯರು ಸುಳ್ಯ ಪೊಲೀಸರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಪೊಲೀಸರು ಆಗಮಿಸಿದ ಬಳಿಕ ಸುಳ್ಯ ವಲಯದ ವಿಪತ್ತು ನಿರ್ವಹಣ ಘಟಕದವರು ಹಾಗೂ ಸ್ಥಳೀಯರು ನದಿಗೆ ಇಳಿದು ಶವವನ್ನು ಮೇಲೆಕ್ಕೆತ್ತಿದ್ದರು.

ಅವರು ಕಳೆದ ಕೆಲವು ದಿನಗಳಿಂದ ಮಾನಸಿಕವಾಗಿ ಅಸ್ವಸ್ಥರಾಗಿದ್ದರೆಂದು ತಿಳಿದುಬಂದಿದೆ. ಮೃತರು ಪತ್ನಿಯನ್ನು ಅಗಲಿದ್ದಾರೆ.

Gayathri SG

Recent Posts

ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನ ಪಡೆದುಕೊಂಡ ಯಶ್‌ ಹೀರೋಯಿನ್‌!

ಸಿನಿಮಾ ರಂಗದಲ್ಲಿ ಮತ್ತೊಂದು ವಿಚ್ಛೇದನ ಖಚಿತವಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

3 hours ago

ಐದು ಮಂದಿಗೆ ವೆಸ್ಟ್ ನೈಲ್ ಜ್ವರ ಪತ್ತೆ; ಅಲರ್ಟ್ ಆದ ಸರಕಾರ

ವೆಸ್ಟ್ ನೈಲ್ ಫೀವರ್ ನ ಐದು ಪ್ರಕರಣಗಳು ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಇದೀಗ ಆತಂಕಕ್ಕೆ ಕಾರಣವಾಗಿದೆ.

3 hours ago

ಆಂಬುಲೆನ್ಸ್ ನೌಕರರ ಮುಷ್ಕರ ತಾತ್ಕಾಲಿಕ ಮುಂದೂಡಿಕೆ

ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಗೆ ಆಗ್ರಹಿಸಿ 108-ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.

3 hours ago

ಬೆಂಗಳೂರಿನಲ್ಲಿ ರೌಡಿಶೀಟರ್​ ಕಾರ್ತಿಕೇಯನ್ ಬರ್ಬರ ಹತ್ಯೆ

ನಗರದ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್​ ಕಾರ್ತಿಕೇಯನ್(40) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ.

4 hours ago

ಪಕ್ಷದ ಬ್ಯಾಡ್ಜ್ ಧರಿಸಿ ಮತದಾನ; ಖೂಬಾ ವಿರುದ್ಧ ಪ್ರಕರಣ ದಾಖಲು

ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರು ತಮ್ಮ ಅಂಗಿ ಮೇಲೆ ಪಕ್ಷದ ಚಿಹ್ನೆ…

4 hours ago

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಬೀದರ್ ಲೋಕಸಭಾ ಕ್ಷೇತ್ರದ ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಮೇ 7 ರಂದು ಶಾಂತಿಯುತವಾಗಿ ಮತದಾನ ನಡೆಯಿತು.

5 hours ago