Categories: ಮಂಗಳೂರು

ನೈತಿಕ ಪೊಲೀಸ್ ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್- ಗೃಹಸಚಿವ ಪರಮೇಶ್ವರ್‌

ಮಂಗಳೂರು: ಮಂಗಳೂರು ಕಮೀಷನೇಟರ್ ವ್ಯಾಪ್ತಿಯಲ್ಲಿ ನೈತಿಕ ಪೊಲೀಸ್ ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ತೆರೆಯಲಾಗುವುದು ಎಂದು ಗೃಹಸಚಿವ ಪರಮೇಶ್ವರ್‌ ಹೇಳಿದ್ದಾರೆ.

ಮಂಗಳೂರು ಕಮೀಷನೇಟರ್ ವ್ಯಾಪ್ತಿಯಲ್ಲಿ ನೂತನ ಪಡೆ ಕಾರ್ಯಾಚರಣೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು ಕರಾವಳಿ ಭಾಗದಲ್ಲಿ ಒಳ್ಳೆಯ ಜನ ಇದ್ದಾರೆ ಎಂದು ನಂಬಿದ್ದೆವು. ಇಡೀ ದೇಶವೇ ಈ ಮಾತನ್ನು ನಂಬುತ್ತದೆ. ಅದರೊಂದಿಗೆ ಬೇರೆ ಮಾತುಗಳೂ ಬಂದಿದೆ. ದ.ಕ ಜಿಲ್ಲೆಯಲ್ಲಿ ಭಾಗದಲ್ಲಿ ಶಾಂತಿ ಇಲ್ಲ,ಕೋಮುಸಾಮರಸ್ಯ ವಿಲ್ಲ ಎಂಬ ಮಾತಿದೆ. ಕಾಂಗ್ರೆಸ್‌ ಚುನಾವಣೆ ಪ್ರಣಾಳಿಕೆ ಸಮಿತಿ ಅಧ್ಯಕ್ಷ ನಾಗಿದ್ದ ಸಂದರ್ಭದಲ್ಲಿಯೂ ಇಪ್ಪತ್ತು ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಯಾಗಿದ್ದೆ. ಆಗ ಈ ಪ್ರದೇಶದಲ್ಲಿ ಶಾಂತಿ ನೆಲೆಯಾಗಬೇಕು ಎಂದು ಹೇಲಿದ್ದರು. ಕೋಮು ಸೌಹಾರ್ದತೆಗೆ ಈ ಹಿಂದೆ ಪಾದಯಾತ್ರೆಯನ್ನೂ ಮಾಡಿದ್ದೆ.

ಕರಾವಳಿ ಯಲ್ಲಿ ಇಂದು ಭಯದ ವಾತಾವರಣ ಇದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿ ಯನ್ನು ನಾವು ತಡೆಯುತ್ತೇವೆ. ಕೋಮುಸೌಹಾರ್ದತೆ ತರಲು ಪೊಲೀಸರಿಗೆ ಕಠಿಣ ಸೂಚನೆ ನೀಡಿದ್ದೇನೆ ಎಂದರು. ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಇಲ್ಲಿ ಹೆಚ್ಚು ನಡೆಯುತ್ತಿವೆ. ಇಲ್ಲಿ ನೈತಿಕ ಪೊಲೀಸ್ ಗಿರಿ ಮಾಡುವವರು ಯಾರು?. ಎಲ್ಲವೂ ಇದ್ದು ನಾವು ತಡೆಯದಿದ್ದರೆ ಇಲಾಖೆ, ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ನೈತಿಕ ಪೊಲೀಸ್ ಗಿರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ನೈತಿಕ ಪೊಲೀಸ್ ಗಿರಿಯನ್ನು ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುತ್ತಿದ್ದೇವೆ ಎಂದರು. ಈ ವಿಂಗ್ ನಲ್ಲಿ ಸಮರ್ಥವಾದ ಅಧಿಕಾರಿಗಳು ಇರುತ್ತಾರೆ ಎಂದರು.

Gayathri SG

Recent Posts

ಮಲ್ಪೆ ಬಂದರಿನಲ್ಲಿರುವ ಅಗ್ನಿಶಾಮಕ ದಳಕ್ಕೆ ತಕ್ಷಣ ವಾಹನ ಒದಗಿಸಿ: ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ

ಮಲ್ಪೆ ಮೀನುಗಾರಿಕೆ ಬಂದರಿನಲ್ಲಿರುವ ಅಗ್ನಿಶಾಮಕ ದಳದ 15 ವರ್ಷ ಹಿಂದಿನ ಎರಡು ವಾಹನಗಳನ್ನು ಸರ್ಕಾರ ಎರಡು ತಿಂಗಳ ಹಿಂದೆ ಸೇವೆಯಿಂದ…

4 mins ago

ಹುಟ್ಟೂರು ಕೆರಾಡಿಯಲ್ಲಿ ಮತ ಚಲಾಯಿಸಿದ ರಿಷಬ್ ಶೆಟ್ಟಿ

ಕಾಂತಾರ’ ಸೂಪರ್ ಸ್ಟಾರ್ ರಿಷಬ್ ಶೆಟ್ಟಿ ‘ಕಾಂತಾರ’ ಪಾರ್ಟ್‌ 1 ಚಿತ್ರದ ಶೂಟಿಂಗ್‌ಗೆ ಬ್ರೇಕ್ ನೀಡಿ ಇಂದು (ಮೇ.7) ಮತದಾನ…

15 mins ago

ಮತದಾನದ ವಿಡಿಯೋ ಚಿತ್ರೀಕರಿಸಿದ ಬಿಜೆಪಿ ಅಭಿಮಾನಿ

ಮತಗಟ್ಟೆಯಲ್ಲಿ ಮತದಾರರೊಬ್ಬರು ಮತ ಹಾಕುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುರುವ ಘಟನೆ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ.

18 mins ago

ಲೋಕಸಭಾ ಚುನಾವಣೆ: ಹುಬ್ಬಳ್ಳಿ, ಧಾರವಾಡದಲ್ಲಿ ಬಿರುಸಿನ ಮತದಾನ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮತದಾನ ಪ್ರಕ್ರಿಯೆ ನಡೆದಿದ್ದು ಹುಬ್ಬಳ್ಳಿಯಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಪ್ರಲ್ಲಾದ ಜೋಶಿ ಅವರು ಕುಟುಂಬ…

28 mins ago

ನಾನು ಇಸ್ಲಾಂ ಹಾಗೂ ಮುಸ್ಲಿಮರ ವಿರೋಧಿಯಲ್ಲ: ಪ್ರಧಾನಿ ಮೋದಿ

ನಾನು ಎಂದಿಗೂ ಇಸ್ಲಾಂ ಧರ್ಮ ಮತ್ತು ಮುಸ್ಲಿಂರನ್ನು ವಿರೋಧಿಸುವುದಿಲ್ಲ ಹೀಗಾಗಿ ಆ ಸಮುದಾಯದವರು ತಮ್ಮ ಹಕ್ಕು ಚಲಾಯಿಸುವಾಗ ತಮ ಭವಿಷ್ಯದ…

42 mins ago

ಮಂಗಳೂರು: ಹಿರಿಯ ನಿವಾಸಿಗಳಿಗೆ ಶ್ರವಣ ದೋಷ ನಿವಾರಕ ಯಂತ್ರೋಪಕರಣ ವಿತರಣೆ

ಲಿಟ್ಸ್ ಸಿಸ್ಟರ್ಸ್ ಆಫ್ ದಿ ಪೂವರ್ ಹಾಗೂ ಹೋಮ್ ಫಾರ್ ದಿ ಏಜೆಡ್ ಸಂಸ್ಥೆಯ ಸಭಾಂಗಣದಲ್ಲಿ ಸಂಸ್ಥೆಯ ನಿವಾಸಿಗಳಿಗಾಗಿ “ಶ್ರವಣ…

1 hour ago