Categories: ಮಂಗಳೂರು

ಆಮ್ ಆದ್ಮಿ ಪಕ್ಷದ ವತಿಯಿಂದ ಅಲ್ಲಲ್ಲಿ ಕಾರ್ನರ್ ಮೀಟಿಂಗ್

ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಿಂದ ಕೆ. ಸಂತೋಷ್ ಕಾಮತ್ ಅವರು ಸ್ಪರ್ಧಿಸುತ್ತಿದ್ದು ಕ್ಷೇತ್ರದ ಬಗ್ಗೆ ವಿವಿಧೆಡೆ ಕಾರ್ನರ್ ಮೀಟಿಂಗ್ ನಡೆಸುತ್ತಿದ್ದು ನಾಗರಿಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ರಾಜ್ಯದ ಈಗಿನ ಸರಕಾರದ 40% ಕಮಿಷನ್ ದಂಧೆ , ಧರ್ಮದ ಹೆಸರಿನಲ್ಲಿ ಜನರ ನಡುವೆ ಕಂದಕ ಸೃಷ್ಟಿಸುತ್ತಿರುವ ರೀತಿ, ಸ್ಮಾರ್ಟ್ ಸಿಟಿ ಯೋಜನೆಯ ಹೆಸರಿನಲ್ಲಿ ಅವೈಜ್ಞಾನಿಕ ಕಾಮಗಾರಿಗಳು, ಕಟ್ಟುವುದು – ಕೆಡವುದು – ಮರು ಕಟ್ಟುವುದು ಎಂದು ಸಾರ್ವಜನಿಕರ ತೆರಿಗೆ ಹಣದ ಪೋಲು ಇಂತಹ ಹಲವು ವಿಚಾರಗಳನ್ನು ಜನತೆಯ ಮುಂದೆ ಇಡುವ ಪ್ರಯತ್ನವನ್ನು ಆಮ್ ಆದ್ಮಿ ಪಕ್ಷ ಮಾಡುತ್ತಿದೆ.

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ನಾಯಕ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ದೆಹಲಿ ಹಾಗೂ ಪಂಜಾಬಿನಲ್ಲಿ ಈಗಾಗಲೇ ಶಿಕ್ಷಣ, ಆರೋಗ್ಯ ಹಾಗೂ ಮೂಲಭೂತ ಸೌಕರ್ಯ ನೀಡುವಲ್ಲಿ ಯಶಸ್ವಿ ಆಗಿರುವ ಆಮ್ ಆದ್ಮಿ ಪಕ್ಷ ಕರ್ನಾಟಕದಲ್ಲೂ ಜಯಭೇರಿ ಬಾರಿಸಲಿದೆ ಎಂದು ಸಂತೋಷ್ ಕಾಮತ್ ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಮುಖಂಡರಾದ ಜೆಪಿ ರಾವ್, ಪ್ರಸಾದ್ ಬಜೀಲಕೇರಿ, ಜೇರಾರ್ಡ್ ಟವರ್ಸ್, ಜೇಮ್ಸ್ ಡಿಸಾ, ಜೈದೇವ ಶೆಣೈ, ಗ್ಲಾವಿನ್ ಡಿಸೋಜಾ, ಹಮೀದ್ ಅಹಮದ್, ಸ್ಟೀಫನ್ ಪಿಂಟೋ, ವೆಂಕಟೇಶ್ ಬಾಳಿಗಾ ಮುಂತಾದವರು ಅಭ್ಯರ್ಥಿ ಜತೆ ಪ್ರಚಾರದಲ್ಲಿ ತೊಡಗಿಸಿಕೊಂಡರು.

Sneha Gowda

Recent Posts

ರಾಟ್‌ವೀಲರ್ ನಾಯಿಗಳು ಬಾಲಕಿಯ ಮೇಲೆ ದಾಳಿ: ಮಾಲೀಕ ಪೊಲೀಸರ ವಶಕ್ಕೆ

ಎರಡು ರಾಟ್‌ವೀಲರ್ ನಾಯಿಗಳು ಐದು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಪರಿಣಾಮ ಬಾಲಕಿ ಗಂಭೀರ ಗಾಯಗೊಂಡ ಘಟನೆ ಚೆನ್ನೈನ…

23 mins ago

ದನಗಳಿಗೆ ನೀರಿನ ದಾಹ ತಣಿಸುವ ಕಾರ್ಯಕ್ಕೆ ಮುಂದಾದ ಸ್ನೇಹಿತರು

ಬಿರು ಬಿಸಿಲಿನ ಬೇಗೆಗೆ ಜನರೇ ತತ್ತರಿಸಿ ಹೋಗುತ್ತಿದ್ದು, ಜಾನುವಾರುಗಳ ಮೂಕ ರೋಧನೆ ಹೇಳ ತೀರದ್ದಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ…

47 mins ago

ವಿಶೇಷ ಚೇತನರಿಗೆ ವಿಶೇಷ ಮತಗಟ್ಟೆಗಳ ಪರಿಚಯ

ಬೆಂಗಳೂರಿನ ಅಂಗವಿಕಲರ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ರಾಜ್ಯ ಆಯುಕ್ತರಾದ ದಾಸ ಸೂರ್ಯವಂಶಿ ಅವರು ಇತ್ತೀಚಿಗೆ ಬೀದರ್ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು…

50 mins ago

ಮತ ಚಲಾಯಿಸಲು ಅಹಮದಾಬಾದ್‌ಗೆ ಆಗಮಿಸಲಿರುವ ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ ಅಹಮದಾಬಾದ್‌ಗೆ ಭೇಟಿ ನೀಡಲಿದ್ದು, ಅಲ್ಲಿನ ಶಾಲೆಯೊಂದರಲ್ಲಿ ಮತ ಚಲಾಯಿಸಲಿದ್ದಾರೆ.

55 mins ago

ಬೀದರ್: ಬರಗಾಲದಲ್ಲಿ ಆಸರೆಯಾದ ‘ಉದ್ಯೋಗ ಖಾತ್ರಿ’

ಬರಗಾಲದಲ್ಲಿ ಕೆಲಸವಿಲ್ಲದೆ ಮಹಾನಗರಗಳಿಗೆ ಗುಳೆ ಹೋಗುವಂತಹ ಪರಿಸ್ಥಿತಿ ಎದುರಿಸುತ್ತಿದ್ದ ತಾಲ್ಲೂಕಿನ ನಿರುದ್ಯೋಗಿ ಹಾಗೂ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಕೆಲಸ ಆಸರೆಯಾಗಿದೆ.

1 hour ago

ಸಿಬ್ಬಂದಿಗೆ ಸಂಬಳ ನೀಡಲು ಸರ್ಕಾರದ ಬಳಿ ಹಣದ ಕೊರತೆ ಇಲ್ಲ: ದಿನೇಶ್ ಗುಂಡೂರಾವ್

ಧರಣಿ ನಿರತ 108 ಆ್ಯಂಬುಲೆನ್ಸ್​ ಚಾಲಕರಿಗೆ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದು, ಚುನಾವಣಾ ನೀತಿ ಸಂಹಿತೆ ಇರುವುದರಿಂದ ಮುಷ್ಕರ…

1 hour ago