Categories: ಮಂಗಳೂರು

ಬಾಂಬಿಲದಲ್ಲಿ ಕಾರು -ಬೈಕ್‌ ನಡುವೆ ಅಪಘಾತ ಯುವಕ ದುರ್ಮರಣ, ಸಹಸವಾರ ಗಂಭೀರ

ಬಂಟ್ವಾಳ: ಕಾರು ಡಿಕ್ಕಿ ಹೊಡೆದು ಬೈಕ್ ಸವಾರನೊರ್ವ ಮೃತಪಟ್ಟು,ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ಎ.28 ರಂದು ಬೆಳಿಗ್ಗೆ ನಡೆದಿದೆ.

ಅಮ್ಟಾಡಿ ನಿವಾಸಿ ಸಂದೀಪ್ ಲೋಬೊ ಮೃತಪಟ್ಟ ಯುವಕನಾಗಿದ್ದು, ಈತನ ಜೊತೆ ಕೆಲಸ ಮಾಡುವ ನೆರೆ ಮನೆಯ ಅಕಾಶ್ ಎಂಬಾತ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಎ‌.ಜೆ.ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇವರಿಬ್ಬರು ವೆಲ್ಡಿಂಗ್ ಕೆಲಸ ಮಾಡುವ ಕಾರ್ಮಿಕರಾಗಿದ್ದು, ಬಿಸಿರೋಡಿನಿಂದ ಪುಂಜಾಲಕಟ್ಟೆ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದ ರಿಟ್ಜ್ ಕಾರು ಚಾಲಕ ಡಿಕ್ಕಿ ಹೊಡೆದಿದ್ದಾನೆ . ಅಪಘಾತದಿಂದ ಗಾಯಗೊಂಡಿದ್ದ ಸಂದೀಪ್ ಲೋಬೋ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅಸುನೀಗಿದ್ದು,ಅಕಾಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಂಜಾಲಕಟ್ಟೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Umesha HS

Recent Posts

ಟೂರಿಸ್ಟ್ ಕಾರಿನಲ್ಲಿ ಮೃತದೇಹ ಸಾಗಾಟ: ಚಾಲಕನಿಗೆ ತರಾಟೆ

ಟೂರಿಸ್ಟ್ ಕಾರಿನಲ್ಲಿ ಮೃತದೇಹ ಕೊಂಡೊಯ್ದ ಘಟನೆಯೊಂದು ಉಡುಪಿ ಜಿಲ್ಲೆಯ ಗಡಿಭಾಗ ಶಿರೂರು ಟೋಲ್ ಗೇಟ್ ಬಳಿ ನಡೆದಿದೆ.

11 seconds ago

ಕರ್ನಾಟಕದ ಎಲ್ಲಾ ಭಾಷೆಗಳಲ್ಲಿಯೇ ವೈಶಿಷ್ಟ್ಯ ಪಡೆದ ಲಂಬಾಣಿ ಭಾಷೆ

ರಾಜ್ಯದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಏಳು ಭಾಷೆಗಳ ಪೈಕಿ ಲಂಬಾಣಿ ಭಾಷೆಯೂ ಒಂದಾಗಿದ್ದು, ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಈ…

11 mins ago

ಜಿಲ್ಲಾಧಿಕಾರಿಗಳಿಂದ ವಿಶ್ವಗುರು ಬಸವಣ್ಣನಿಗೆ ಪುಷ್ಪ ನಮನ

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 891 ಜಯಂತ್ಯೋತ್ಸವ ಅಂಗವಾಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ…

28 mins ago

ಮದುವೆ ಮನೆಯ ಊಟ ಸೇವಿಸಿ ನೂರಾರು ಮಂದಿ ಅಸ್ವಸ್ಥ

ಮದುವೆ ಮನೆಯಲ್ಲಿ ಊಟ ಮಾಡಿದ ನೂರಾರು ಮಂದಿ ಏಕಾಏಕಿ ಅಸ್ವಸ್ಥಗೊಂಡ ಘಟನೆ ಚಿತ್ರದುರ್ಗ ತಾಲೂಕಿನ ಕಾಲ್ಗೆರೆ ಗ್ರಾಮದಲ್ಲಿ ನಡೆದಿದೆ.

39 mins ago

ಕಾಂಗ್ರೆಸ್ ಪರ ಮತ ಹಾಕಿಸಿದ್ದಕ್ಕೆ ಯುವಕನ ಕೊಲೆ

ಚುನಾವಣೆ ಮುಗಿದರೂ ಹಗೆತನ ಮುಗಿಯಲಿಲ್ಲ. ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ಯುವಕನೊಬ್ಬ ಕೊಲೆಯಾಗಿದ್ದಾನೆ. ಜಾವೀದ್ ಚಿನ್ನಮಳ್ಳಿ (25)ಹತ್ಯೆಯಾದವನು. ಕಲಬುರಗಿಯ ಅಫಜಲಪುರ…

53 mins ago

ಆನ್‌ಲೈನ್ ಟ್ರೇಡಿಂಗ್: 17.35 ಲಕ್ಷ ರೂ. ವಂಚನೆ

ಆನ್‌ಲೈನ್ ಪಾರ್ಟ್‌ಟೈಮ್ ಕೆಲಸ ಹಾಗೂ ಆನ್‌ಲೈನ್ ಟ್ರೇಡಿಂಗ್ ಮೇಸೆಜ್ ನ‌ ಬಲೆಗೆ ಬಿದ್ದ ವ್ಯಕ್ತಿಯೊಬ್ಬರು ಬರೋಬ್ಬರಿ 17.35 ಲಕ್ಷ ರೂ.…

1 hour ago