News Karnataka Kannada
Wednesday, April 17 2024
Cricket
ಮಂಗಳೂರು

85 ರ ಸಂಭ್ರಮದಲ್ಲಿ ಸಾಲಮೇಳದ ಹರಿಕಾರ ಜನಾರ್ದನ ಪೂಜಾರಿ

Poojary
Photo Credit :

ಮಂಗಳೂರು : ಕರಾವಳಿಯ ಹಿರಿಯ ಮುತ್ಸದಿ ಸಾಲಮೇಳದ ರೂವಾರಿ ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿಗೆ ಇಂದು ಎಂಬತ್ತೈದನೇ ಹುಟ್ಟುಹಬ್ಬದ ಸಂಭ್ರಮ .ಸದ್ಯ ತನ್ನ ಇಳಿವಯಸ್ಸಿನಲ್ಲಿಯೇ ಗತಕಾಲದ ದಿನಗಳನ್ನು ಮೆಲುಕು ಹಾಕುತ್ತ ಬಂಟ್ವಾಳದ ಬಸ್ತಿಪಡ್ಪುವಿನ ಚನ್ನಮ್ಮ ಕುಟೀರದಲ್ಲಿ ಕುಟುಂಬದೊಂದಿಗೆ ಜೀವನ ಕಳೆಯುತ್ತಿದ್ದಾರೆ.

ಅವರು ಕರಾವಳಿಗೆ ನೀಡಿದ ವಿಶೇಷ ಕೊಡುಗೆ ಹೊಸ ಚಿಂತನೆಯ ಕ್ರಾಂತಿಕಾರಿ ಬದಲಾವಣೆಗಳನ್ನು ತಂದು ಹೊಸ ಮುನ್ನುಡಿ ಬರೆದಿದ್ದಾರೆ. ಜೊತೆಗೆ ಸಾಮಾಜಿಕ ಚಿಂತನೆ ಹತ್ತಾರು ಜನಪರ ಯೋಜನೆ ಜಾರಿಗೆ ತಂದಿದ್ದಾರೆ.

ಅವರು ರಾಜಕೀಯ ಕ್ಷೇತ್ರದಲ್ಲಿ ಅಜರಾಮರಾಗಿದ್ದಾರೆ ಬಂಟ್ವಾಳದ ಅತಿ ಹಿಂದುಳಿದ ಬಸ್ತಿಪಡ್ಪು ನಿಂದ ದೆಹಲಿಯ ಜನಪಥ್ ವರೆಗೆ ಅತ್ಯಂತ ಪ್ರಭಾವ ಹೊಂದಿದ್ದ ಕರ್ನಾಟಕದ ಏಕೈಕ ರಾಜಕಾರಣಿಯೆಂದರೆ ಬಿ ಜನಾರ್ದನ ಪೂಜಾರಿ .ಬಿ ಜನಾರ್ದನ ಪೂಜಾರಿ ಅವರಿಗೆ ರಾಜಕೀಯ ಪಕ್ಷದ ಒಳಗೆ ಮತ್ತು ಹೊರಗೆ ರಾಜಕೀಯ ವಿರೋಧಿಗಳ ಇರಬಹುದು ಆದರೆ ಅವರ ಪ್ರಾಮಾಣಿಕತೆ ಬಗ್ಗೆ ಸಾಸಿವೆ ಕಾಳಿನಷ್ಟು ದೂರುವಂತಿಲ್ಲ .

ಅವರ ನೇರ ನುಡಿ ಕೆಲವರಿಗೆ ಕಹಿ ಎನಿಸಿರಬಹುದು ಆದರೆ ಅದರಲ್ಲಿ ಸತ್ಯಗಳು ಇತ್ತು ಎನ್ನುವುದನ್ನು ಅವರು ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ . ಕರಾವಳಿಯ ರಾಜಕಾರಣದಲ್ಲಿ ಎಷ್ಟು ರಾಜಕಾರಣಿಗಳು ಬಂದು ಹೋಗಿರಬಹುದು ಆದರೆ ರಾಜಕೀಯದಲ್ಲಿ ಪೂಜಾರಿ ಅವರ ವ್ಯಕ್ತಿತ್ವವೇ ಬೇರೆ ಅವರ ಅವರು ಉಡುವ ಶ್ವೇತವರ್ಣದ ವಸ್ತ್ರದಂತೆ ನಿಷ್ಕಲ್ಮಶ ಪ್ರಾಮಾಣಿಕ ರಾಜಕಾರಣಿ ಸಿಗುವುದು ಬಲು ಅಪರೂಪ ಆದ್ದರಿಂದ ಅವರು ಕರಾವಳಿ ,ರಾಜ್ಯ , ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಅವರಿಗೆ ಪಕ್ಷಾತೀತವಾಗಿ ಗೌರವ ನೀಡಬೇಕು ಎನ್ನುವುದು ಎಲ್ಲರ ಆಶಯ .

ಆದರೆ ಕಾಲ ಮಿಂಚಿಲ್ಲ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಅವರಿಗೆ ಮಹಾಗೌರವ ನಡೆಯಬೇಕು ಎಂಬುದು ಅವರ ಅಭಿಮಾನಿಗಳ ಆಶಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು