Categories: ಮಂಗಳೂರು

ಇಂದು ಕದ್ರಿಯಲ್ಲಿ ಶುಭಾರಂಭಗೊಂಡ “ಲೈಫ್ ಲೈನ್‌ ಟೆಂಡರ್‌ ಚಿಕನ್‌” ನ 45ನೇ ಮಳಿಗೆ

ಮಂಗಳೂರು: “ಲೈಫ್ ಲೈನ್‌ ಟೆಂಡರ್‌ ಚಿಕನ್‌” ತನ್ನ ನೂತನ ಶಾಖೆಯನ್ನು ಶಿವಬಾಗ್‌ ಕದ್ರಿ ಬಳಿ ಇಂದು ಅದ್ದೂರಿಯಾಗಿ (ಮಾ.21) ಶುಭಾರಂಭಗೊಂಡಿದೆ.

ಇನ್ನು ಈ ನೂತನ ಮಳಿಗೆಯನ್ನು ಕೈಲ್ಕೆರ್ ಡಾ. ಭಾಸ್ಕರ್‌ ಶೆಟ್ಟಿ ಸಿಟಿ ಹಾಸ್ಪಿಟಲ್‌ ರಿಸರ್ಚ್‌ & ಡೈಗ್ನಾಸ್ಟಿಕ್‌ ಸೆಂಟರ್‌ ಸ್ಥಾಪಕರು ಇವರು ಉದ್ಘಾಟಿಸಿ ಶುಭಹಾರೈಸಿದರು.

ಈ ಸುಸಂದರ್ಭದಲ್ಲಿ ವಿಶೇಷ ಅತಿಥಿಯಾಗಿ ದ.ಕ. ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಪದ್ಮರಾಜ್ ರಾಮಯ್ಯ ಅವರು ಕೂಡ ಭಾಗಿಯಾಗಿ “ಲೈಫ್ ಲೈನ್‌ ಟೆಂಡರ್‌ ಚಿಕನ್‌” ನ ಹೊಸ ಮಳಿಗೆಯ ಉದ್ಯಮಕ್ಕೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಕೆ. ಕಿಶೋರ್‌ ಕುಮಾರ್‌ ಹೆಗ್ಡೆ ಚೇರ್ಮನ್‌ & ಕಾರ್ಯನಿರ್ವಾಹಕರು ಲೈಫ್ ಲೈನ್‌ ಫೀಡ್ಸ್‌(ಇಂಡಿಯಾ) ಪ್ರೈ.ಲೀ. ಸೇರಿದಂತೆ ಲೈಪ್‌ ಲೈನ್‌ ಟೆಂಡರ್‌ ಚಿಕನ್‌ʼ ಸಂಸ್ಥೆಯ ಪ್ರಮುಖರು ಹಾಗು ಆನೇಕ ಗಣ್ಯರು ಉಪಸ್ಥಿತರಿದ್ದರು.

ಈಗಾಗಲೇ ಸಮಾರು 44 ಶಾಖೆಗಳನ್ನು ಹೊಂದಿರುವ ಲೈಫ್ ಲೈನ್‌ ಟೆಂಡರ್‌ ಚಿಕನ್‌ ತನ್ನ 45ನೇ ಮಳಿಗೆಯನ್ನು ಮಂಗಳೂರಿನ ಮಲ್ಲಿಕಟ್ಟೆ ರಸ್ತೆಯ ಶಿವಬಾಗ್‌ ಕದ್ರಿ ಬಳಿಯಿರುವ ಜೀಮ್ಮಿಸ್‌ ಸೂಪರ್‌ ಮಾರ್ಕೆಟ್‌ ಮುಂಭಾಗದಲ್ಲಿ ಇಂದು ತೆರೆದಿದೆ. ಇನ್ನು 46ನೇ ಮಳಿಗೆಯನ್ನು ನಾಳೆ(ಮಾ.22) ಮಣ್ಣಗುಡ್ಡದ ಸಂಗನಿಕೇತನಾ ಬಳಿ ತೆರೆಯಲಿದೆ.

1985ರಲ್ಲಿ ಕರ್ನಾಟಕದ ಚಿಕ್ಕಮಗಳೂರಿನಲ್ಲಿ 30,000 ಸಾ. ರೂ.ಗಳ ಹೂಡಿಕೆಯೊಂದಿಗೆ ಜಾನುವಾರು ಮತ್ತು ಕೋಳಿ ಆಹಾರ ವಿತರಣೆಗಾಗಿ ‘ಓಂ ಟ್ರೇಡರ್ಸ್’ಶಾಖೆಯನ್ನು ಮೊದಲು ಪ್ರಾರಂಭಿಸಲಾಯಿತು. 1986ರಲ್ಲಿ ಸ್ಥಳೀಯ ರೈತರಿಗೆ ಸಹಾಯ ಮಾಡಲು ಟೇಬಲ್ ಮೊಟ್ಟೆಗಳ ವ್ಯಾಪಾರಕ್ಕೆ ವ್ಯವಹಾರವನ್ನು ವಿಸ್ತರಿಸಿದರು.

1987 ಆಹಾರ ಮತ್ತು ನಿರ್ವಹಣೆಯಲ್ಲಿ ಸಂಶೋಧನೆಗಾಗಿ 3000 ಕೋಳಿಗ ಬ್ರಾಯ್ಲರ್ ಫಾರ್ಮ್ ಅನ್ನು ಆರಂಭಿಸುತ್ತಾರೆ. 1995 ಚಿಕ್ಕಮಗಳೂರಿನಲ್ಲಿ 20,000 ಪಕ್ಷಿಗಳ ಬ್ರಾಯ್ಲರ್ ಫಾರ್ಮ್ ಸ್ಥಾಪನೆ, ಬ್ರಾಯ್ಲರ್ ಕೋಳಿಗಳ ಬೃಹತ್ ಉತ್ಪಾದನೆಯ ಪ್ರವೃತ್ತಿಯನ್ನು ಪ್ರಾರಂಭಿಸಿತು.ಹೀಗೆ ಇವರ ಲೈಪ್‌ ಲೈನ್‌ ಟೆಂಡರ್‌ ಚಿಕನ್‌ ಉದ್ಯಮ ಯಶಸ್ವಿನತ್ತ ಸಾಗುತ್ತಲೇ ಹೋಗಿದೆ.

ಆತ್ಯಾಧುನಿಕ ಸಾಮರ್ಥ್ಯದೊಂದಿಗೆ 1000 ಸಾವಿರಕ್ಕೂ ಅಧಿಕ ಉದ್ಯೋಗಿಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸಿಕೊಂಡು, ದಿನಕ್ಕೆ 100 ಟನ್ ಸಾಮರ್ಥ್ಯದ ಹೊಸ ಸೋಯಾ ಎಕ್ಸ್ ಟ್ರುಷನ್ ಸ್ಥಾವರವಿದೆ. ಇನ್ನು ಯಶಸ್ವಿ ಉದ್ಯಮದೊಂದಿಗೆ 2023ರ ವೇಳೆಗೆ ಕರ್ನಾಟಕದಾದ್ಯಂತ 40+ ಲೈಫ್ ಲೈನ್ಸ್ ಟೆಂಡರ್ ಚಿಕನ್ ಮಳಿಗೆಗಳನ್ನು ತೆರೆದಿರುವ ಕೀರ್ತಿ ಇವರದ್ದು.

 

Ashitha S

Recent Posts

ಅಂಜಲಿ ಅಂಬಿಗೇರ ಸಹೋದರಿ ಆತ್ಮಹತ್ಯೆಗೆ ಯತ್ನ

ಹುಬ್ಬಳ್ಳಿಯಲ್ಲಿ ಹಂತಕನ ದಾಳಿಗೆ ಬಲಿಯಾಗಿರುವ ಅಂಜಲಿ ಅಂಬಿಗೇರ ಕುಟುಂಬಕ್ಕೆ ಭಾರಿ ಸಿಡಿಲು ಬಡಿದಿದೆ.

4 mins ago

ಪತಂಜಲಿಯ ಸೋನ್​ಪಾಪ್ಡಿ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ : ಮೂವರ ಬಂಧನ

 ಪತಂಜಲಿಯ ನವರತ್ನ ಇಲೈಚಿ ಸೋನ್ ಪಾಪ್ಡಿ ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ನಂತರ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಅಧಿಕಾರಿ ಮತ್ತು ಇತರ…

9 mins ago

ಜೀನ್ಸ್ ಪ್ಯಾಂಟ್ , ಟೀ ಶರ್ಟ್‍ಗಳಲ್ಲಿ ಅಕ್ರಮ ಚಿನ್ನ ಸಾಗಾಟ: ನಾಲ್ವರು ವಶಕ್ಕೆ

ಕಸ್ಟಮ್ಸ್ ಅಧಿಕಾರಿಗಳು 1.96 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ…

19 mins ago

ಆರ್‌ಸಿಬಿ vs ಸಿಎಸ್ಕೆ: ಚಾಲೆಂಜ್ ಹಾಕಿ ಖಾಕಿ ಅತಿಥಿಯಾದ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್

ಶನಿವಾರ ನಡೆದ ಹೈವೋಲ್ಟೇಜ್ ಆರ್‌ಸಿಬಿ ವರ್ಸಸ್ ಸಿಎಸ್‌ಕೆ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅತಿಕ್ರಮ ಪ್ರವೇಶ ಮಾಡುವುದಾಗಿ ವಿಡಿಯೋ ಪೋಸ್ಟ್…

33 mins ago

ಶೂ ವ್ಯಾಪಾರಿ ಮನೆಯಿಂದ 40 ಕೋಟಿ ರೂ. ನಗದು ವಶಕ್ಕೆ

ತೆರಿಗೆ ವಂಚನೆ ಮತ್ತು ಅಕ್ರಮ ಆಸ್ತಿ ಹೊಂದಿದ್ದ ಆರೋಪದ ಮೇಲೆ ಐಟಿ ಅಧಿಕಾರಿಗಳು ಆಗ್ರಾದಲ್ಲಿ ಶೂ ವ್ಯಾಪಾರಿ ರಾಮನಾಥ್‌ ಡಂಗ್‌…

37 mins ago

ಐಪಿಎಲ್‌ ಬೆಟ್ಟಿಂಗ್‌: ಲಕ್ಷ ಲಕ್ಷ ಹಣ ಕಳೆದುಕೊಂಡು ನೇಣಿಗೆ ಶರಣು

ಐಪಿಎಲ್‌ ಬೆಟ್ಟಿಂಗ್‌ನಲ್ಲಿ ಲಕ್ಷ ಲಕ್ಷ ಹಣ ಕಳೆದುಕೊಂಡ ಯುವಕನೊಬ್ಬ ಲಾಡ್ಜ್‌ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನ…

1 hour ago