Categories: ಮಂಗಳೂರು

26 ಜನವರಿಯಂದು ನಡೆಯಲಿರುವ ಸ್ಥಬ್ದ ಚಿತ್ರದ ಮೆರವಣಿ ಕಾರ್ಯಕ್ರಮಕ್ಕೆ ವಿಶ್ವ ಹಿಂದೂ ಪರಿಷತ್ ಬೆಂಬಲ

26 ಜನವರಿಯಂದು ನಡೆಯಲಿರುವ ಸ್ಥಬ್ದ ಚಿತ್ರದ ಮೆರವಣಿ ಕಾರ್ಯಕ್ರಮಕ್ಕೆ ವಿಶ್ವ ಹಿಂದೂ ಪರಿಷತ್ ಬೆಂಬಲ
ಕಮ್ಯುನಿಸ್ಟರ ಕುತಂತ್ರದಿಂದಾಗಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ಥಬ್ದ ಚಿತ್ರಕ್ಕೆ ದೆಹಲಿಯಲ್ಲಿ ಅವಕಾಶ ಸಿಗದಿರುವುದಕ್ಕೆ ಎಲ್ಲಾ ಹಿಂದೂಗಳ ಮನಸಿಗೆ ನೋವುಂಟಾಗಿದೆ, ಈ ಹಿನ್ನೆಲೆಯಲ್ಲಿ ಹಿರಿಯರಾದ ಮಾನ್ಯ ಜನಾರ್ಧನ ಪೂಜಾರಿಯವರು ಬ್ರಹ್ಮಶ್ರೀ ನಾರಾಯಣಗುರುಗಳ ಸ್ಥಬ್ದ ಚಿತ್ರದ ಮೆರವಣಿಯು 26 ಜನವರಿಯಂದು ಎಲ್ಲರು ಜಾತಿ ಬೇಧ ಮರೆತು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರೆ ನೀಡಿದ್ದಾರೆ.

ಅಸಮಾನತೆಯ ವಿರುದ್ಧ ಹೋರಾಟ ಮಾಡಿದ, ದೇಶ ಕಂಡ ಮಹಾನ್ ಸಂತ ಪೂಜನೀಯ ಬ್ರಹ್ಮಶ್ರೀ ನಾರಾಯಣಗುರುಗಳು, ಸಮಾಜದಲ್ಲಿ ಅಸ್ಪರ್ಶತೆಯ ನಿವಾರಣೆಗೋಸ್ಕರ, ಸಮಾಜದಲ್ಲಿನ ಮೆಲ್ಜಾತಿ ಕೀಲ್ಜಾತಿ ಬೇಧಭಾವವನ್ನು ದೂರಮಾಡಲು ಹೋರಾಟ ಮಾಡಿದ ಮಹಾನ್ ಯೋಗಿ, ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಪ್ರಾಥಸ್ಮರಣೆಯಲ್ಲಿ ಶ್ರೀಗುರುಗಳನ್ನು ನಿತ್ಯ ಸ್ಮರಣೆ ಮಾಡುತ್ತೇವೆ.

2017 ರಲ್ಲಿ ನಡೆದ ಸಾವಿರಾರು ಸಾಧು ಸಂತರು ಸೇರಿ ಇತಿಹಾಸ ನಿರ್ಮಿಸಿದ ಉಡುಪಿಯ ಧರ್ಮಸಂಸದ್ ಕಾರ್ಯಕ್ರಮದ ವೇದಿಕೆಗೆ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರನ್ನು ಇಡಲಾಗಿತ್ತು.

26 ಜನವರಿಯಂದು ನಡೆಯಲಿರುವ ಸ್ಥಬ್ದ ಚಿತ್ರದ ಮೆರವಣಿ ಕಾರ್ಯಕ್ರಮಕ್ಕೆ ವಿಶ್ವ ಹಿಂದೂ ಪರಿಷತ್ ಬೆಂಬಲ ಸೂಚಿಸುತ್ತದೆ. ಮತ್ತು ಸಂಘಟನೆಯ ಎಲ್ಲಾ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿಸುತ್ತದೆ ಎಂದು ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ಪ್ರಕಟಣೆಯಲ್ಲಿ ತಿಳಿಸಿದರು.

Sneha Gowda

Recent Posts

ಮೃಣಾಲ್ ಹೆಬ್ಬಾಳ್ಕರ್​ ಪರ ನೇಹಾ ತಂದೆ ಪ್ರಚಾರ; ನೆಟ್ಟಿಗರ ಆಕ್ರೋಶ

ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

17 mins ago

ಇಂದು ಚಕ್ರವರ್ತಿ ಸೂಲಿಬೆಲೆ ನಮೋ ಭಾರತ ಕಾರ್ಯಕ್ರಮದಲ್ಲಿ ಭಾಗಿ

ತಾಲೂಕಿನ ಕರಜಗಿ ಗ್ರಾಮದಲ್ಲಿ ಇಂದು ಸಾಯಂಕಾಲ 6 ಗಂಟೆಗೆ ನಮೋ ಬ್ರಿಗೇಡ್ ವತಿಯಿಂದ ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು ಬಹಿರಂಗ…

23 mins ago

ಗನ್‌ ಪಾಯಿಂಟ್‌ ಇಟ್ಟು ಜೆಡಿಎಸ್‌ ನಾಯಕಿ ಮೇಲೆಯೇ ಪ್ರಜ್ವಲ್ ಅತ್ಯಾಚಾರ !

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾಗಿರುವ ರೇಪ್ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

34 mins ago

ಮನೆಗೆ ಬಂದಿದ್ದ ಪಾರ್ಸೆಲ್ ಸ್ಫೋಟಗೊಂಡು ಇಬ್ಬರು ಸಾವು

ಮನೆಗೆ ಬಂದಿದ್ದ ಪಾರ್ಸೆಲ್ ಸ್ಫೋಟಗೊಂಡು ತಂದೆ ಹಾಗೂ ಮಗಳು ಸಾವನ್ನಪ್ಪಿದ್ದ ಘಟನೆ ಗುಜರಾತ್‍ನ ವಡಾಲಿಯಲ್ಲಿ ಗುರುವಾರ ನಡೆದಿದೆ.

47 mins ago

ಟಾರ್ಚ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ; ತಾಯಿ, ಮಗು ಸಾವು

ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಟಾರ್ಚ್ ಲೈಟ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ ಮಾಡುವಾಗ ಗರ್ಭಿಣಿ ಹಾಗೂ ಆಕೆಯ ಮಗು ಹೊಟ್ಟೆಯಲ್ಲಿಯೇ ಮೃತಪಟ್ಟಿರುವ ಅಘಾತಕಾರಿ…

1 hour ago

ದಕ್ಷಿಣ ಕನ್ನಡದಲ್ಲಿ ಉರಿ ಬಿಸಿಲಿನ ತಾಪಮಾನಕ್ಕೆ ಜನ ಹೈರಾಣು

ದಕ್ಷಿಣ ಕನ್ನಡದಲ್ಲಿ ಉರಿ ಬಿಸಿಲಿನ ತಾಪಮಾನಕ್ಕೆ ಜನ ಹೈರಾಣಾಗಿದ್ದಾರೆ. ಕಳೆದ 20 ವರ್ಷಗಳಲ್ಲಿ ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್…

1 hour ago