Categories: ಮಂಗಳೂರು

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಹತ್ತನಾವಧಿ ಆಚರಣೆ

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಹತ್ತನಾವಧಿ ( ಪತ್ತನಾಜೆ) ನಿಮಿತ್ತ ಗುರುವಾರ ದೇವಸ್ಥಾನದಲ್ಲಿ ರಂಗಪೂಜೆ, ಬಲಿ ಉತ್ಸವ, ವಸಂತ ಪೂಜೆ, ಅಷ್ಟಾವಧಾನ ಸೇವೆಗಳು ನಡೆದವು.

ಧ್ವಜಮರ ಅವರೋಹಣ ನಡೆಯಿತು. ಇನ್ನು ಕ್ಷೇತ್ರದಲ್ಲಿ ದೀಪಾವಳಿ ವರೆಗೆ ದೇವಸ್ಥಾನದಲ್ಲಿ ರಂಗಪೂಜೆ, ಉತ್ಸವ ಮೊದಲಾದ ವಿಶೇಷ ಸೇವೆಗಳು ನಡೆಯುವುದಿಲ್ಲ. ಧರ್ಮಸ್ಥಳ ಯಕ್ಷಗಾನ ಮೇಳದ ಶ್ರೀ ಮಹಾಗಣಪತಿ ದೇವರ ಮೂರ್ತಿಯನ್ನು ಗುರುವಾರ ಸಂಜೆ ಬಿಡಾರದ ಮಣೆಗಾರರ ಮನೆಯಿಂದ ಭವ್ಯ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು.

ಕ್ಷೇತ್ರದ ಆನೆಗಳು, ಬಸವ, ಹೂವಿನ ಕೋಲು, ವಾದ್ಯ ಮೇಳ, ಚೆಂಡೆ ಮೇಳ, ಶಂಖ-ಜಾಗಟೆ ವಾದನ ಮೆರವಣಿಗೆಗೆ ವಿಶೇಷ ಮೆರುಗನ್ನು ನೀಡಿತು.

ದೇವಸ್ಥಾನದ ಎದುರು ದರ್ಶನ ಸೇವೆ ನಡೆಸಿದ ಬಳಿಕ ಛತ್ರದ ಶ್ರೀ ಮಹಾಗಣಪತಿ ಗುಡಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಮತ್ತು ಕುಟುಂಬಸ್ಥರು, ನೌಕರರು ಹಾಗೂ ಭಕ್ತರು ಉಪಸ್ಥಿತರಿದ್ದರು.

Sneha Gowda

Recent Posts

ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಿರುವಂತೆ ನೋಡಿಕೊಳ್ಳಿ: ಜಿಲ್ಲಾ ಚುನಾವಣಾಧಿಕಾರಿ

ಮೇ. 7ರಂದು ನಡೆಯುವ ಮತದಾನ ದಿನದಂದು ಬೀದರ್ ಲೋಕಸಭಾ ಸಾರ್ವತ್ರಿಕ ಚುನಾವಣಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಿರುವಂತೆ ಚುನಾವಣೆಗೆ…

8 mins ago

ಮೋದಿ ಕೇವಲ ಮತಗಳಿಕೆಗಾಗಿ ಭಾವನಾತ್ಮಕ ಸುಳ್ಳು ಹೇಳುತ್ತಾರೆ: ಸಿಎಂ ಆರೋಪ

ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ವೈಫಲ್ಯತೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಜನರು ಗಮನಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚುಸ್ಥಾನ…

25 mins ago

ನಾವು ದಾಖಲೆ ಕಳಿಸುವುದಿಲ್ಲ, ನೇರವಾಗಿ ದಾಳಿ ಮಾಡುತ್ತೇವೆ: ಪ್ರಧಾನಿ ಮೋದಿ

ಕಾಂಗ್ರೆಸ್‌ ಅವಧಿಯಲ್ಲಿದ್ದ ಪದ್ಧತಿಯಂತೆ ಮುಂಬೈ ದಾಳಿಯ ಬಳಿಕ ನಾವು ಪಾಕಿಸ್ತಾನಕ್ಕೆ ದಾಖಲೆಗಳನ್ನು ಕಳಿಸುವುದಿಲ್ಲ, ಬದಲಿಗೆ ಭಯೋತ್ಪಾದಕರ ಮೇಲೆ ನೇರವಾಗಿ ದಾಳಿ…

1 hour ago

ಟಿ20 ವಿಶ್ವಕಪ್‌ : ಟೀಮ್‌ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್‌ಗೆ ಸ್ಥಾನ

ಒಳ್ಳೆ ಕ್ಯಾಪ್ಟನ್ಸಿ ಜತೆಗೆ ಅತ್ಯುತ್ತಮ ಪ್ರದರ್ಶನ ನೀಡಿರೋ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಟೀಮ್​ ಇಂಡಿಯಾದಲ್ಲಿ ಸ್ಥಾನ…

1 hour ago

ಟಿ20 ವಿಶ್ವಕಪ್‌ : ಕೆ.ಎಲ್‌. ರಾಹುಲ್‌ಗೆ ಇಲ್ಲ ಅವಕಾಶ

ಇಂದು ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ 15 ಸದಸ್ಯರ ಬಳಗದ ಭಾರತ ತಂಡವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಪ್ರಕಟಿಸಿದೆ. ತಂಡವನ್ನು…

1 hour ago

ರಾಜು ಆಲಗೂರರಿಗೆ ‘ಶುಭ’ತಂದ ಮಂಗಳ ಮುಖಿಯರು

ಮಂಗಳವಾರ ಇಲ್ಲಿನ ಕಾಂಗ್ರೆಸ್ ಕಾರ್ಯಾಲಯ ಕಳೆಗಟ್ಟಿತ್ತು. ಇದಕ್ಕೆ ಕಾರಣ, ಮಂಗಳ ಮುಖಿಯರ ನಗು ಮೊಗದ ಕಲರವ. ಹೌದು, ಅವರೆಲ್ಲ ಕಾಂಗ್ರೆಸ್…

2 hours ago