ಮಂಗಳೂರು

ಸಾಹಿತ್ಯಗಳು ಸಮಾಜದ ಕೈಗನ್ನಡಿಯಂತಿರಬೇಕು : ನಾರಾಯಣ ಶೇವಿರೆ

ಬೆಳ್ತಂಗಡಿ: ಸಾಹಿತ್ಯಗಳು ಸಮಾಜದ ಕೈಗನ್ನಡಿಯಂತೆ ಪ್ರತಿಬಿಂಬಿಸುವಂತಿರಬೇಕು.  ಇದ್ದದ್ದನ್ನು ಇದ್ದ ಹಾಗೆ ಹೇಳುವ  ಪ್ರಕ್ರಿಯೆಯಲ್ಲಿ ಸಾಹಿತ್ಯದ ಪ್ರಸಾರ, ವಿಸ್ತರಣೆಗೆ ಸಂಘಟನೆ  ಅವಶ್ಯ. ಸಾಮಾಜಿಕ ಬದ್ಧತೆ ಇರುವ ಸಾಹಿತ್ಯಗಳು ಹೆಚ್ಚುಹೆಚ್ಚು ಸೃಷ್ಟಿಯಾಗಬೇಕು. ಈ ಮೂಲಕ ಸಮಾಜಕ್ಕೆ ಧನಾತ್ಮಕ ಸಂದೇಶ ಸಾರುವ ಕಾರ್ಯ ಆಗಬೇಕಿದೆ. ಸಾಹಿತ್ಯಗಳು ನಿರ್ದಿಷ್ಟ ಭಾಷೆಗೆ ಸೀಮಿತವಾಗದೆ ದೇಶವ್ಯಾಪಿ ತಲುಪಬೇಕೆಂಬ ನಿಟ್ಟಿನಲ್ಲಿ ಅಖಿಲ ಭಾರತೀಯ  ಸಾಹಿತ್ಯ ಪರಿಷದ್ ಕಾರ್ಯನಿರ್ವಹಿಸುತ್ತಿದೆ ಎಂದು ಅಖಿಲ ಭಾರತೀಯ  ಸಾಹಿತ್ಯ ಪರಿಷದ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಹೇಳಿದರು.

ಅವರು  ಜೂ 5 ರಂದು ಉಜಿರೆ ಶ್ರೀ  ಶಾರದಾ ಮಂಟಪದಲ್ಲಿ  ಅಖಿಲ ಭಾರತೀಯ  ಸಾಹಿತ್ಯ ಪರಿಷದ್ ಬೆಳ್ತಂಗಡಿ ತಾಲೂಕು ಸಮಿತಿ, ಘಟಕ ಮತ್ತು ಮಹಿಳಾ ಪ್ರಕಾರದ  ಪದಾಧಿಕಾರಿಗಳ  ಬೈಠಕ್ ನಲ್ಲಿ  ಮುಖ್ಯ ಅತಿಥಿಗಳಾಗಿ  ಮಾತನಾಡುತ್ತಿದ್ದರು.           ಅ.ಭಾ.ಸಾ.ಪ  ನೋಂದಾಯಿತ ಸಂಸ್ಥೆಯಾಗಿದ್ದು ಕಾರ್ಯಕ್ರಮಗಳಲ್ಲಿ ಭಿನ್ನತೆ, ವೈವಿಧ್ಯತೆ ಇರುತ್ತದೆ. ಸಾಹಿತ್ಯಾಸಕ್ತರು ಮತ್ತು ಸಾಹಿತ್ಯ ಅಭಿಮಾನಿಗಳನ್ನೊಳಗೊಂಡ ಸಂಸ್ಥೆಯಾಗಿ  ವಿಚಾರಗೋಷ್ಠಿ, ಕವಿತೆ, ಪ್ರಬಂಧ , ಸಾಹಿತ್ಯದ ಚಟುವಟಿಕೆಗಳನ್ನು ನಡೆಸಬಹುದು. ಕನಿಷ್ಠ 3 ಮಂದಿಯೊಂದಿಗೆ ಗರಿಷ್ಠ 25 ಸದಸ್ಯರನ್ನೊಳಗೊಂಡ ಘಟಕಗಳನ್ನು ರಚಿಸಿ ಸಾಹಿತ್ಯದ ತಂಡ ಬೆಳೆಸುವುದೇ ಮುಖ್ಯ ಉದ್ದೇಶವಾಗಿದೆ. ಘಟಕಗಳು ತಿಂಗಳಿಗೊಂದು ಕಾರ್ಯಕ್ರಮಗಳನ್ನು ಆಯೋಜಿಸಿ ವ್ಯಾಸ ಜಯಂತಿ, ವಾಲ್ಮೀಕಿ ಜಯಂತಿ, ಯುಗಾದಿ, ಇತ್ಯಾದಿ ಸಂದರ್ಭಗಳಲ್ಲಿ  ಪುಸ್ತಕ ಪ್ರಕಾಶನ, ಕವಿ ಗೋಷ್ಠಿ, ಪ್ರಬಂಧ ಮಂಡನೆ  ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ  ಕಾರ್ಯಕ್ರಮಗಳನ್ನು ಸಂಘಟಿಸಬೇಕು  ಎಂದು ಅಭಿಪ್ರಾಯ ಮಂಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಅ.ಭಾ.ಸಾ.ಪ.  ತಾಲೂಕು ಸಮಿತಿಯ ಅಧ್ಯಕ್ಷ, ನಿವೃತ್ತ ಪ್ರಾಚಾರ್ಯ ಗಣಪತಿ ಭಟ್ ಕುಳಮರ್ವ ಮಾತನಾಡಿ, ತಾಲೂಕು ಸಮಿತಿ, ಘಟಕಗಳು ಒಂದು ಸಂಸಾರ ಇದ್ದಂತೆ. ಹಿರಿಯರು, ಕಿರಿಯರು, ಮಹಿಳೆಯರು, ಎಲ್ಲ ಸಾಧಕರೊಂದಿಗೆ  ಜತೆಗೂಡಿ  ಅ.ಭಾ.ಸಾ.ಪ.  ಕಾರ್ಯಚಟುವಟಿಕೆಯಲ್ಲಿ  ರಾಷ್ಟ್ರೀಯ ಭಾವೈಕ್ಯತೆ, ಭಾರತೀಯ ಪರಂಪರೆಯನ್ನು ಗೌರವಿಸಿ,   ಭಾರತೀಯತೆಯ ಜತೆ ನಮ್ಮ ಬದುಕು ಸಮೃದ್ಧವಾಗಲಿ, ಈ ಸಾಹಿತ್ಯ ಪರಿಷದ್ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಳಿಲು ಸೇವೆ ಮಾಡೋಣ ಎಂದರು.

ತಾಲೂಕು ಸಮಿತಿ, ಘಟಕಗಳ ಹಾಗೂ ಮಹಿಳಾ ಪ್ರಕಾರದ  ಪದಾಧಿಕಾರಿಗಳಾದ ವಿಶ್ವೇಶ್ವರ ಭಟ್, ಸುರೇಶ ಎಂ.ಡಿ., ಸುಬ್ರಹ್ಮಣ್ಯ ರಾವ್, ಕವಿತಾ ಉಮೇಶ್, ಪ್ರೀತಿ ಧರ್ಮಸ್ಥಳ, ರೇಣುಕಾ, ವಿನುತಾ ರಜತ್ ಗೌಡ, ವಿದ್ಯಾಶ್ರೀ ಅಡೂರು, ಶರತ್ ತುಳು ಪುಳೆ , ಶಿವಪ್ರಸಾದ್ ಸುರ್ಯ , ಗುರುನಾಥ ಪ್ರಭು, ಡಾ| ರಾಜಶೇಖರ ಹಳೆಮನೆ, ಅರುಣಾ ಶ್ರೀನಿವಾಸ್ , ಹರೀಶ್ ಅಡೂರ್, ಪದ್ಮನಾಭ ವೇಣೂರು, ಕೇಶವ ಭಟ್ ಅತ್ತಾಜೆ, ಕೃಷ್ಣ ಆಚಾರ್, ನಾರಾಯಣ ಫಡ್ಕೆ ,ಶಂಕರ ರಾವ್, ವನಜ ಜೋಶಿ, ಆಶಾ ಅಡೂರು, ಸುಂದರ ಇಳಂತಿಲ, ಜಯರಾಮ್, ಡಾ|ಪ್ರದೀಪ್ ನಾವೂರ್, ಸಾತ್ವಿಕ್, ಸಾಂತೂರು ಶ್ರೀನಿವಾಸ ತಂತ್ರಿ   ಮೊದಲಾದವರು ಉಪಸ್ಥಿತರಿದ್ದರು.

ಅ.ಭಾ.ಸಾ.ಪ. ತಾಲೂಕು ಸಮಿತಿಯ ಕಾರ್ಯದರ್ಶಿ ಸುಭಾಷಿಣಿ  ಸ್ವಾಗತಿಸಿ, ವೇಣೂರು ಘಟಕದ ಸಂಚಾಲಕ ಹರೀಶ್ ಕೆ. ಆದೂರು ವಂದಿಸಿದರು.

Sneha Gowda

Recent Posts

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

5 mins ago

ಬೀದರ್: ಸಾಯಿಜ್ಞಾನ ಪಬ್ಲಿಕ್ ಶಾಲೆಗೆ ಶೇ. 100 ಫಲಿತಾಂಶ

ಸಾಯಿಜ್ಞಾನ ಪಬ್ಲಿಕ್ ಶಾಲೆಯು ಪ್ರಸಕ್ತ ಸಾಲಿನ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 100ಕ್ಕೆ 100 ರಷ್ಟು ಫಲಿತಾಂಶ ಪಡೆದಿದೆ.…

42 mins ago

ಎಸಿಯಲ್ಲಿ ಬೆಂಕಿ: ತುರ್ತು ಭೂಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನ

ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

58 mins ago

ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಮೃತ್ಯು

ಹೊಳೆಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಇಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕಡವಿನಕಟ್ಟೆಯಲ್ಲಿ ನಡೆದಿದೆ.

1 hour ago

ರಸ್ತೆ ತಿರುವಿನ ಅಪಾಯಕಾರಿ ವಿದ್ಯುತ್ ತಂತಿಗಳು: ಸುರಕ್ಷಿತ ಎತ್ತರಕ್ಕೆ ಏರಿಕೆ

ಸಾಣೂರಿನ ಲೈನ್ ಮ್ಯಾನ್  ಸುಭಾಷ್ ರವರು ತಮ್ಮ ತಂಡದೊಂದಿಗೆ ಮೇ 17 ರಂದು ಮುರತಂಗಡಿ ಇರುವತ್ತೂರು ರಸ್ತೆ ತಿರುವಿನಲ್ಲಿರುವ ವಿದ್ಯುತ್…

2 hours ago

ಕೇಸ್​ನಲ್ಲಿ ರಿಕವರಿ ಮಾಡಿದ್ದ ಅರ್ಧ ಕೆ.ಜಿ ಚಿನ್ನ ಕದ್ದ ಪೊಲೀಸ್​ ಪೇದೆ

ರಕ್ಷಕರೇ ಭಕ್ಷಕರಾದ ಘಟನೆಯೊಂದು ಕೋಲಾರದಲ್ಲಿ ನಡೆದಿದೆ . ಕಳವು ಕೇಸ್​ನಲ್ಲಿ ರಿಕವರಿ ಮಾಡಿದ್ದ 1 ಕೆಜಿ 408 ಗ್ರಾಂ ಚಿನ್ನದಲ್ಲಿ…

2 hours ago