Categories: ಮಂಗಳೂರು

ಸಂಸ್ಕೃತಿ-ಪರಂಪರೆಯ ಪ್ರತೀಕ ಮಂಗಳೂರು ರಥೋತ್ಸವ

ಶ್ರೀ ಮಂಗಳಾದೇವಿಯ ನೆಲೆಬೀಡಾದ ಮಂಗಳೂರು ಗೌಡ ಸಾರಸತ್ತ ಬ್ರಾಹ್ಮಣ ಸಮಾಜದ್ದ ಪಾಲಿಗೂ ಸಾಧನೆಯ ಕ್ಷೇತ್ರ. ಇಲ್ಲಿನ ರಥಬೀದಿಯ ಶ್ರೀ ವೆಂಕಟರಮಣ ದೇ ವಳ ಸಮಾಜದ ಧರ್ಮ ಪೀಠಗಳಲ್ಲೊಂದಾದ ಶ್ರೀ ಕಾಶೀಮಠ ಸಂಸ್ಥಾನ್ ವಾರಾಣಸಿಯ ಒಂದ್ದು ಕಣ್ಣಿನಂತೆ ಮತ್ತು ದೇಶದ ಪ್ರಮುಖ ದೇವಾಲಯ ಎಂದು ಬಿಂಬಿತವಾಗಿದೆ. ಕಾಲ ಉರುಳಿದ ಪ್ರಭಾವ ಇಲ್ಲಿನ ವಾರ್ಷಿಕ ರಥೋತ್ಸವ ಒಂದು. ಸಮಗ್ರ ಭಜಕ ವೃಂದದವರಿಗೆ ಅವರ್ಣನೀಯ ಪುಳಕೋತ್ಸವ, ಧನ್ಯತೆಯಿಂದ ಬೀಗುವ ಸಂದರ್ಭ.

ಪ್ರತಿ ಮಾಘ ಮಾಸದ ಶುದ್ಧ ತದಿಗೆಯಂದು ಆರಂಭವಾಗಿ ಅಷಮಿಯಂದು ಮುಕಾಯಗೊಳ್ಳುವ ರಥೋತ್ಸವ ಕಾರ್ಯಕ್ರಮದಲ್ಲಿ ರಥಸಪ್ತಮಿಯ ಶುಭದಿನ ದಂದು ಆ ಬ್ರಹ್ಮರಥೋತ್ಸವ ನಡೆಯುವುದು ವಾಡಿಕೆ. ಮಂಗಳೂರು ರಥ ಎಂದು ಅಭಿದಾನಗೈದಿರುವ ಶ್ರೀ ರಥೋತ್ಸವ ಧಾರ್ಮಿಕ ವಿಧಿ ಆಚರಣೆಗೆ ಮಾತ್ರ ಸೀಮಿತಗೊಳ್ಳದ ಲೌಕಿಕ-ಪಾರಲೌಕಿಕ ಸಾಮಾಜಿಕ, ಸೌಹಾರ್ದತೆಗಳನ್ನೊಳಗೊಂಡು ಸಂಸ್ಕೃತಿ – ಪರಂಪರೆಯ ಕೊಂಡಿಯಾಗಿ ಅನುಸೂತ್ರವಾಗಿ ಮುಂದುವರಿದು ಭಾವೀ ಪೀಳಿಗೆಗೆ ವರ್ಗಾಯಿಸುವ ಸಂಪ್ರದಾಯಗಳ ಹಿನ್ನೆಲೆಯ ಮಹಾಪರ್ವ ಮತ್ತು ದಕ್ಷಿಣ ಭಾರತದ ಮಹೋತ್ಸವಗಳ ಪೈಕಿ ಒಂದು ಪ್ರಮುಖ ಮಹೋತ್ಸವವಾಗಿ ರೂಪುಗೊಂಡಿದೆ . ಶ್ರೀ ಕಾಶಿ ಮಠದ ಪೀಠಾಧಿಪತಿ ಶ್ರೀಮದ್ ಸಂಯಮೀಂದ್ರತೀರ್ಥ ಸ್ವಾಮೀಜಿಗಳವರ ಈ ಬಾರಿಯ ಉಪಸ್ಥಿತಿ ರಥೋತವವನ್ನು ಚಂದಗಾಣಿಸಲು ಸಂಭ್ರಮಿಸಲು ಕಾರಣವಾಗುತ್ತದೆ.

ಈ ಬಾರಿ 201 ನೇ ವರ್ಷಾಚರಣೆಯಲ್ಲದೆ ನೂತನ ಬ್ರಹ್ಮ ರಥ ದಲ್ಲಿ ರಥೋತ್ಸವ ದೇಶ ವಿದೇಶಗಳಿಂದ ಸಹಸ್ರಾರು ಭಜಕರು ಪಾಲ್ಗೊಂಡು ಪುನೀತರಾದರು . ಶ್ರೀ ದೇವಳದ ಮೊಕ್ತೇಸರರಾದ ಸಿ ಎಲ್ ಶೆಣೈ , ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ಕೊಡುಗೈ ದಾನಿ ಪಿ . ದಯಾನಂದ ಪೈ , ಮುಂಡ್ಕುರ್ ರಾಮದಾಸ್ ಕಾಮತ್ , ಮಂಗಳೂರು ದಕ್ಷಿಣ ಶಾಸಕ ಡಿ . ವೇದವ್ಯಾಸ್ ಕಾಮತ್ ಉಪಸ್ಥಿತರಿದ್ದರು .

ಚಿತ್ರ : ಮಂಜು ನೀರೇಶ್ವಾಲ್ಯ

Sneha Gowda

Recent Posts

ಜೆಡಿಎಸ್‌ ನಾಯಕರ ಕುಟುಂಬದೊಳಗಿನ ಜಗಳದಿಂದ ಪ್ರಜ್ವಲ್‌ ಪ್ರಕರಣ ಹೊರಬಿದ್ದಿದೆ: ಡಿ.ಕೆ. ಶಿವಕುಮಾರ್‌

ಜೆಡಿಎಸ್‌ ನಾಯಕರ ಕುಟುಂಬದೊಳಗಿನ ಜಗಳದಿಂದ ಪ್ರಜ್ವಲ್‌ ಪ್ರಕರಣ ಹೊರಬಿದ್ದಿದೆ: ಡಿ.ಕೆ. ಶಿವಕುಮಾರ್‌

6 mins ago

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ ಕಾಂಗ್ರೆಸ್‌ ಅಭ್ಯರ್ಥಿ

ಇದೀಗ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೊಂದು ಹೊಡೆತ ಬಿದ್ದಿದೆ.   ಸೂರತ್, ಇಂದೋರ್ ಬಳಿಕ ಇದೀಗ ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್…

9 mins ago

ಫೇಕ್‌ ನ್ಯೂಸ್‌: ಕೋವಿಶೀಲ್ಡ್​ ಪಡೆದವರು ತಂಪುಪಾನಿಯ,ಐಸ್​ ಕ್ರೀಮ್ ಸೇವಿಸಬಾರದು

ಕೊರೊನಾ ಸಂದರ್ಭದಲಲಿ ಕೋವಿಶೀಲ್ಡ್‌ ಪಡೆದವರು ತಂಪುಪಾನಿಯ,ಐಸ್​ ಕ್ರೀಮ್ ಸೇವಿಸಬಾರದು ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ

24 mins ago

ಬಿಸಿಲಿನ ಶಾಖಕ್ಕೆ ರಾಯಚೂರಿನಲ್ಲಿ ಐವರು ಬಲಿ : ಹೊತ್ತಿ ಉರಿದ ಕಾರು

ಜಿಲ್ಲೆಯಲ್ಲಿ ಬಿಸಿಲು ಆವರಿಸಿಕೊಂಡಿದ್ದು, ಬಿಸಿಲಿನ ಸಾಖಕ್ಕೆ ಕಳೆದ 24 ಗಂಟೆಗಳ ಅವಧಿಯಲ್ಲಿ ಐವರು ಮೃತಪಟ್ಟಿದ್ದಾರೆ. ಹಾಗೂ ಶಕ್ತಿನಗರದಲ್ಲಿ ಕಾರಿಗೆ ಬೆಂಕಿ…

40 mins ago

ಇಂದು (ಮೇ 04) ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನ

ಜನ ಸಮುದಾಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ಅಗ್ನಿ ಶಾಮಕದಳದ ವೀರರನ್ನು ಗೌರವಿಸಲು ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನವನ್ನು…

41 mins ago

ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ಬೀದಿ‌ ಕಾಳಗ : ವಿಡಿಯೋ ವೈರಲ್

ಮಂಗಳೂರಿನ ಹೊರ ವಲಯ ವಳಚ್ಚಿಲ್‌ನ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳು ಜಗಳವಾಡಿಕೊಂಡಿರುವ ಘಟನೆ ನಡೆದಿದೆ. ಕಾಲೇಜ್ ಫೆಸ್ಟ್…

1 hour ago