ಮಂಗಳೂರು

ಲಿಟ್ ಫೆಸ್ಟ್ ನಂತಹ ಸಾಹಿತ್ಯ ಹಬ್ಬಇಂದು ಮಹತ್ವದ್ದಾಗಿದೆ: ಶತಾವಧಾನಿ ಡಾ. ಆರ್.ಗಣೇಶ್

ಮಂಗಳೂರು:  ಲಿಟ್ ಫೆಸ್ಟ್ ನಂತಹ ಸಾಹಿತ್ಯ ಹಬ್ಬ ಆಯೋಜನೆ ಇಂದು ಮಹತ್ವದ್ದಾಗಿದೆ. ಕಲೆ, ಸಾಹಿತ್ಯ ಹೀಗೆ ಬೇರೆ ಬೇರೆ ಕ್ಷೇತ್ರದ ಜನ ಒಂದೆಡೆ ಸೇರುವುದರಿಂದ ಸನಾತನತೆಯ ಸಬಲೀಕರಣವಾಗುತ್ತದೆ ಎಂದು ಶತಾವಧಾನಿ ಡಾ. ಆರ್.ಗಣೇಶ್ ಹೇಳಿದರು.

ಅವರು ಶುಕ್ರವಾರ ಮಂಗಳೂರಿನಲ್ಲಿ ನಾಲ್ಕನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ ಗೆ ಚಾಲನೆ ನೀಡಿದ ಬಳಿಕ ನಡೆದ ಮೊದಲ ಗೋಷ್ಠಿಯಲ್ಲಿ ಮಾತನಾಡಿದರು.

ಗೋಷ್ಠಿಯನ್ನು ಡಾ.ಅಜಕ್ಕಳ ಗಿರೀಶ್ ಭಟ್ ನಡೆಸಿಕೊಟ್ಟರು. ಉಡುಪಿ, ದಕ್ಷಿಣ -ಕನ್ನಡ ಜಿಲ್ಲೆ ನನಗೆ ಸಾಕಷ್ಟು ಪ್ರೇರಣೆ ನೀಡಿದೆ. ಇಲ್ಲಿನ ಕವಿಗಳಿಂದ ಸದಾ ಸ್ಫೂರ್ತಿ ಪಡೆದಿದ್ದೇನೆ. ಇಂತಹ ಸಾಹಿತ್ಯ ಹಬ್ಬ ಆಯೋಜನೆ ಇಂದು ಬಹುಮುಖ್ಯವಾಗಿದೆ. ಇಂಟರ್ನೆಟ್ ಯುಗದಲ್ಲಿ ವೈಯಕ್ತಿಕ ಬಾಂಧವ್ಯ ಕಳೆದುಕೊಂಡಿದ್ದೇವೆ. ಈಸಾಹಿತ್ಯ ದೃಶ್ಯ, ಶ್ರಾವ್ಯ ಶಿಲ್ಪ, ಪ್ರತಿಯೊಂದು ಕಲೆ ಎಲ್ಲದರಲ್ಲೂ ಸಾರ್ವಭೌಮವಾಗಿ ರಸ ಇರಬೇಕು ಎಂದರು.

ಕಲೆಯ ಮೂಲ ಉದ್ದೇಶವೇ ರಸ,ರಸ ಅಂದರೆ ಹೆಚ್ಚಿನ ಅರಿವು, ಅರಿವೇ ಆನಂದ. ಅರಿವು ಆನಂದಗಳಿಗೆ ವ್ಯತ್ಯಾಸವಿಲ್ಲ. ರಸವನ್ನು ನಿರಾಕರಿಸಲು ಮುಖ್ಯ ಕಾರಣ ಭಾವಸಮೃದ್ಧಿ ಇಲ್ಲದೇ ಇರುವುದು. ನವೋದಯದವರಿಗೆ ಬಹುಪಾಂಡಿತ್ಯ ಇತ್ತು. ಆದರೆ ನಂತರದವರಿಗೆ ಅದು ಇಲ್ಲ. ಧ್ವನಿ ಇಲ್ಲದೆ ರಸ ಇಲ್ಲ. ಧ್ವನಿಪೂರ್ಣವಾಗಿ ಶೃಂಗಾರವನ್ನು ಅಭಿವ್ಯಕ್ತ ಮಾಡಬಹುದು. ರಸವೊಂದೇ ಕವಿ ನೀತಿ ಎಂದು ಕುವೆಂಪು ಹೇಳಿದ್ದರು. ಇಂದು ಕುವೆಂಪು ಅವರನ್ನು ಬೇರೆ ಬೇರೆ ಉದ್ದೇಶಕ್ಕೆ ಬಳಸಲಾಗುತ್ತದೆ. ಶುದ್ಧ ಸಾಹಿತ್ಯವನ್ನು ಎಲ್ಲರಿಗೂ ತಿಳಿಯುವಂತೆ ಮಾಡುವುದು ಇಂದಿನ ಅಗತ್ಯ ಎಂದವರು ಹೇಳಿದರು.

ಸಂಸ್ಕೃತ ಆಡುಭಾಷೆಯಾದಾಗ ಸ್ವಾರಸ್ಯ ಇರಲಿದೆ. ಭಾಷೆ ಕಲಿಯದೆ ಮೂಲಗ್ರಂಥಗಳ ಕಲಿಕೆ ಸಾಧ್ಯವಿಲ್ಲ. ವಿಜ್ಞಾನ ಅಂದರೆ ಶಾಸ್ತ್ರ ತರ್ಕ ಶುದ್ಧ ಚಿಂತನೆ ಅತ್ಯಗತ್ಯ ಎಂದು ಶತಾವಧಾನಿ ಡಾ.ಆರ್.ಗಣೇಶ್ ಹೇಳಿದರು.

ಇದೆ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಯಿಸುತ್ತಾ, ಸರಕಾರ,ಅಕಾಡೆಮಿಗಳು,ವಿಶ್ವವಿದ್ಯಾನಿಲಯಗಳು, ಅಭಿಜಾತ ಕನ್ನಡದ , ಷಟ್ಪದಿ , ಸಾಂಗತ್ಯ ಬಗ್ಗೆ ಯಾವುದೇ ರೀತಿಯ ಸಂಶೋಧನೆ,ಕಾರ್ಯಕ್ರಮ ಗಳನ್ನು ನಡೆಸುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

Sneha Gowda

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

55 mins ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

2 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

2 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

3 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

3 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

3 hours ago