Categories: ಮಂಗಳೂರು

ಮಾ.25 ರಿಂದ ಸುರತ್ಕಲ್ ನಲ್ಲಿ ಸಿನಿ ಗ್ಯಾಲಕ್ಸಿ ಶುಭಾರಂಭ

ಸುರತ್ಕಲ್: ಮಂಗಳೂರು, ಮಣಿಪಾಲಕ್ಕೆ ಮಾತ್ರ ಸೀಮಿತವಾಗಿದ್ದ ಮಲ್ಟಿಫ್ಲೆಕ್ಸ್ ಸಿನಿಮಾ ಥಿಯೇಟರ್ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮೂರು ಸಿನಿಮಾ ಹಾಲ್ ಗಳೊಂದಿಗೆ ಮಾಚ್೯ 25 ಶುಕ್ರವಾರದಿಂದ ಸುರತ್ಕಲ್ ಹೃದಯಭಾಗದಲ್ಲಿರುವ ಅಭಿಷ್ ಮಾಲ್ ನಲ್ಲಿ ಶುಭಾರಂಭಗೊಳ್ಳಲಿದೆ.

ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಮಾಲಕ ಶಶಿಧರ್ ಕೋಡಿಕಲ್ ಅವರು, “ಸುರತ್ಕಲ್, ಪಡುಬಿದ್ರೆ, ಮೂಲ್ಕಿ, ಬಜಪೆ ಕಾಟಿಪಳ್ಳ ಕೃಷ್ಣಾಪುರ ಸುತ್ತಮುತ್ತಲಿನ ಗ್ರಾಮೀಣ ಭಾಗಗಳ ಜನರಿಗೆ ಮಲ್ಟಿ ಫ್ಲೆಕ್ಸ್ ನಲ್ಲಿ ಕೂತು ಕುಟುಂಬ ಸಮೇತ ಸಿನಿಮಾ ನೋಡುವ ಕನಸನ್ನು ಸುರತ್ಕಲ್ ನಲ್ಲಿ ಸಿನಿ ಗ್ಯಾಲಕ್ಸಿ ಚಿತ್ರಮಂದಿರ ನನಸು ಮಾಡಲಿದೆ. ಸಿನಿಗ್ಯಾಲಕ್ಸಿಯಲ್ಲಿ ಹವಾನಿಯಂತ್ರಿತ ಮೂರು ಪರದೆಗಳಿವೆ. ಉತ್ತಮ ತಂತ್ರಜ್ಞಾನ, ಸೌಂಡ್, ವಿಡಿಯೋ ಗುಣಮಟ್ಟ ಯಾವುದರಲ್ಲೂ ರಾಜಿ ಮಾಡಿಕೊಳ್ಳದೆ ಮೂರು ಪ್ರತ್ಯೇಕ ಸಿನಿಮಾ ಹಾಲ್ ಗಳನ್ನು ನಿರ್ಮಿಸಿದ್ದು ಒಟ್ಟು 417 ಆಸನ ಸಾಮರ್ಥ್ಯ ಹೊಂದಿದೆ” ಎಂದು ಶಶಿಧರ್ ಕೋಡಿಕಲ್ ಹೇಳಿದರು.

ಯು ಎಫ್ ಒ ತಂತ್ರಜ್ಞಾನದೊಂದಿಗೆ ಸಿನಿಮಾ ಹಾಲ್ ತಯಾರಾಗಿದ್ದು ರಾಕರ್, ಗೋಲ್ಡ್ ಸೋಫಾ ಸೀಟ್ಸ್, ಕುಟುಂಬಕ್ಕಾಗಿ ಖಾಸಗಿ ಕ್ಲಬ್ ಕ್ಲಾಸ್ ಸೀಟ್ಸ್ ಮಾತ್ರವಲ್ಲದೆ ಲೈವ್ ಕಿಚನ್ ಕೂಡಾ ಒಳಗೊಂಡಿದೆ. ಗ್ಯಾಲಕ್ಸಿ ಎಂಟರ್ಟೈನ್ಮೆಂಟ್ ಇಂಟರ್ ನ್ಯಾಷನಲ್ ಲಿಮಿಟೆಡ್ ಸಂಸ್ಥೆ ಚಿತ್ರಪ್ರೇಮಿಗಳಿಗೆ ಕಡಿಮೆ ಬಜೆಟ್ ನಲ್ಲಿ ಸಿನಿಮಾ ತೋರಿಸಲು ಮುಂದಾಗಿದ್ದು ಹಲವಾರು ಆಫರ್ ಗಳು ಸಿನಿಮಾ ಟಿಕೆಟ್ ಹಾಗೂ ಫುಡ್ ಕೋರ್ಟ್ ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರೊಜೆಕ್ಟ್ ಹೆಡ್ ಸುದರ್ಶನ ಕೋಟೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕಿ ಪ್ರಜ್ವಲಾ ಶಶಿಧರ್, ರೇಣುಕಾ, ವಿದ್ಯಾ, ಸಂಸ್ಥೆಯ ಮೇಲ್ವಿಚಾರಕರಾದ ದೀಪಕ್ ಗಂಗಾಧರ್ , ಉಪಸ್ಥಿತರಿದ್ದರು.

ಮಾಚ್೯25 ರಿಂದ ಚಿತ್ರಮಂದಿರ ಸಾರ್ವಜನಿಕರಿಗೆ ಲಭ್ಯವಿದ್ದು ದಿನದಲ್ಲಿ ಒಟ್ಟು 15 ಪ್ರದರ್ಶನಗಳಿವೆ. ಗಣ್ಯರ ಉಪಸ್ಥಿತಿಯಲ್ಲಿ ಮತ್ತು ಕೋಸ್ಟಲ್ ವುಡ್ ನ ತಾರೆಯರಿಂದ ಸಿನಿಗ್ಯಾಲಕ್ಸಿ ಚಿತ್ರಮಂದಿರ ಉದ್ಘಾಟನೆ ಗೊಳ್ಳಲಿದೆ.

Sneha Gowda

Recent Posts

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

3 hours ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

3 hours ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

3 hours ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

3 hours ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

3 hours ago

ಭಾರತೀಯರಿಗೆ ಗುಡ್‌ ನ್ಯೂಸ್‌ : ವೀಸಾ ಇಲ್ಲದೆ ರಷ್ಯಾಕ್ಕೆ ಹೋಗುವ ಅವಕಾಶ

ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…

4 hours ago