Categories: ಮಂಗಳೂರು

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ದೇಶಕ್ಕೆ ಮಾಡಿದ ಅವಮಾನ : ನಳಿನ್ ಕುಮಾರ್ ಕಟೀಲು

ಮಂಗಳೂರು: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವಲ್ಲಿ ಸರಕಾರ ಬೇಜವಾಬ್ದಾರಿ ತೋರಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ದೇಶಕ್ಕೆ ಮಾಡಿದ ಅವಮಾನ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರೇ ಬೇಜವಾಬ್ದಾರಿ ವರ್ತನೆ ತೋರಿದ್ದಾರೆ.

ಉಕ್ರೇನ್‌ನಲ್ಲಿರುವ ಭಾರತೀಯರನ್ನು ಕರೆತರಲು ಪ್ರಧಾನಿ ನರೇಂದ್ರ ಮೋದಿ ಅವರೇ ನೇತೃತ್ವ ವಹಿಸಿದ್ದು, ನಾಲ್ವರು ಸಚಿವರನ್ನು ಈ ಕಾರ್ಯಕ್ಕೆ ನಿಯೋಜಿಸಿದ್ದಾರೆ.

ಆದರೆ, ಸಿದ್ದರಾಮಯ್ಯ ಅವರು ಈ ವಿಷಯದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಪ್ರತಿಪಕ್ಷ ನಾಯಕನಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಹಿರಿತನ ಹೊಂದಿದ್ದಾರೆ. ವಿರೋಧ ಮಾಡುವುದೇ ವಿರೋಧ ಪಕ್ಷದ ನಾಯಕನ ಕೆಲಸ ಎಂಬಂತೆ ವರ್ತಿಸುತ್ತಿದ್ದಾರೆ. ಎಲ್ಲದಕ್ಕೂ ವಿರೋಧ ಮಾತನಾಡುತ್ತಿದ್ದಾರೆ. ಅವರ ಈ ವರ್ತನೆ ಸರಿಯಲ್ಲ ಎಂದರು.

Sneha Gowda

Recent Posts

ಶೈಕ್ಷಣಿಕ ಸಾಧನೆಗಿಂತ ನನ್ನ ಮೀಸೆಯಿಂದಾಗಿ ಹೆಚ್ಚು ಟ್ರೋಲ್‌ ಆಗಿದ್ದೇನೆ : ಟಾಪರ್‌ ಹುಡುಗಿ

98.50 ಪ್ರತಿಶತ ಅಂಕದೊಂದಿಗೆ ಯುಪಿ ಬೋರ್ಡ್ 10ನೇ ತರಗತಿಯ ಟಾಪರ್ ಆಗಿ ಹೊರಹೊಮ್ಮಿರುವ ಪ್ರಾಚಿ ನಿಗಮ್ ತಮ್ಮ ಮುಖದ ಕೂದಲಿನ…

13 mins ago

ತಂದೆ ಮುಖಕ್ಕೆ ಮನ ಬಂದಂತೆ ಹೊಡೆದು ಕೊಂದೆ ಬಿಟ್ಟ ಕ್ರೂರಿ ಮಗ

ಆಸ್ತಿ ಆಸೆಯಿಂದಾಗಿ ಹೆತ್ತ ತಂದೆ ಎಂದು ನೋಡದೆ ಮನಬಂದಂತೆ ಹೊಡೆದಿದ್ದಾನೆ. ಆತನ ಹೊಡೆತದ ನೋವು ತಾಳಲಾರದೆ ವೃದ್ಧ ಪ್ರಾಣಬಿಟ್ಟಿದ್ದಾರೆ. ಈ…

42 mins ago

ಮಸೀದಿ ಒಳಗೆ ನುಗ್ಗಿ ಮಕ್ಕಳ ಮುಂದೆ ದೊಣ್ಣೆಗಳಿಂದ ಹೊಡೆದು ಧರ್ಮಗುರುವಿನ ಕೊಲೆ

ಅಕ್ರಮವಾಗಿ ಮಸೀದಿ ಒಳಗೆ ನುಗ್ಗಿದ ಮೂವರು ಮಾಸ್ಕ್​ ಧರಿಸಿದ ದುಷ್ಕರ್ಮಿಗಳು ಅಮಾನುಷವಾಗಿ ದೊಣ್ಣೆಗಳಿಂದ ಹೊಡೆದು ಧರ್ಮಗುರುವನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.…

1 hour ago

ನಾಮಪತ್ರ ಹಿಂಪಡೆದ ಕಾಂಗ್ರೆಸ್​ ಅಭ್ಯರ್ಥಿ ಅಕ್ಷಯ್​ ಕಾಂತಿ ಬಾಮ್​

ಚುನಾವಣೆಗೂ ಮುನ್ನ ಇಂದೋರ್​ನ ಕಾಂಗ್ರೆಸ್​ ಅಭ್ಯರ್ಥಿ ಅಕ್ಷಯ್​ ಕಾಂತಿ ಬಾಮ್​ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ.

1 hour ago

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಜೆಡಿಎಸ್ ಪಕ್ಷದಿಂದ ಉಚ್ಛಾಟನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ. ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಜೆಡಿಎಸ್…

1 hour ago

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ‌ ಅರ್ಥಪೂರ್ಣವಾಗಿ ನಡೆದ ಆಟಿಸಂ ಜಾಗೃತಿ ʼಎಕ್ಷಪ್ಸನಲ್ 2024ʼ

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ ಪಾಥ್ವೆ ಎಂಟರ್‌ ಪ್ರೈಸಸ್‌ ಹಾಗೂ ಸ್ಪೇಷಲ್‌ ಪೇರೆಂಟ್ಸ್‌ ಸಪೋರ್ಟ್‌ ಗ್ರೂಪ್‌ ಅವರ ಸಹಯೋಗದೊಂದಿಗೆ ಐಬ ಅಸೋಸಿಯೇಷನ್…

1 hour ago