Categories: ಮಂಗಳೂರು

ಮಳಲಿ ವಿವಾದ: ಮಸೀದಿ ಪ್ರಮುಖರ ಜೊತೆ ಸಭೆ ನಡೆಸಿದ ಶಾಸಕ ಡಾ.‌ ಭರತ್ ಶೆಟ್ಟಿ

ಮಂಗಳೂರು, ಮೇ 29: ಮಳಲಿಯ ವಿವಾದದ ಜಾಗದಲ್ಲಿ ಸರ್ವೇ ನಡೆದರೆ ನೈಜ ವಿಷಯ ಬಹಿರಂಗವಾಗುತ್ತದೆ ಎಂದು ಹಿಂದೂ ಬಾಂಧವರು ಬಯಸುತ್ತಿದ್ದಾರೆ. ಈ ಸಂಬಂಧ ಮಸೀದಿಯ ಪ್ರಮುಖರ ಜೊತೆ ಸಭೆ ನಡೆಸಲಾಗಿದೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಶಾಸಕ ಡಾ.‌ ಭರತ್ ಶೆಟ್ಟಿ ತಿಳಿಸಿದ್ದಾರೆ.

ಅವರು ಮಳಲಿಯ ಸ್ಥಳೀಯ ಜನಪ್ರತಿನಿಧಿಗಳು, ವಿಹಿಂಪ ಹಾಗೂ ಮಸೀದಿಯ ಪ್ರಮುಖರೊಂದಿಗೆ ನಗರದ ಸಕ್ಯೂಟ್ ಹೌಸ್ ನಲ್ಲಿ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಮಳಲಿ ಪರಿಸರದಲ್ಲಿ 3-4 ದೇವಸ್ಥಾನಗಳು ಈ ಹಿಂದೆ ಕಾಲಾಂತರದಲ್ಲಿ ಕಣ್ಮರೆಯಾಗಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಯಾವುದೇ ದೇವಾಲಯ ಬಹಳ ಕಾಲದಿಂದ ಜೀರ್ಣಾವಸ್ಥೆಯಲ್ಲಿ ಇದ್ದು, ಜೀರ್ಣೋದ್ಧಾರಗೊಳ್ಳದೆ ಇದ್ದರೆ ಊರಿಗೆ ಕೆಡುಕು ಎನ್ನುವುದು ಹಿಂದೂಗಳಲ್ಲಿ ನಂಬಿಕೆ ಇದೆ. ಅದಕ್ಕೆ ಆ ಮಸೀದಿಯ ಪ್ರಮುಖರ ಸಹಕಾರದೊಂದಿಗೆ ಮುಂದಿನ ಕ್ರಮ ತೆಗೆದುಕೊಳ್ಳುವ ಬಗ್ಗೆ ಸಭೆ ನಡೆಸಿದ್ದೇನೆ ಎಂದರು.

ಸದ್ಯ ಮಳಲಿಯ ವಿವಾದದ ಪ್ರದೇಶವನ್ನು ನಿರ್ಬಂಧಿತ ವಲಯ ಎಂದು ನ್ಯಾಯಾಲಯ ಗುರುತಿಸಿದೆ. ಅಲ್ಲಿ ಯಾರಿಗೂ ಪ್ರವೇಶವಿಲ್ಲ. ಅಷ್ಟಮಂಗಲ ಪ್ರಶ್ನೆ ಇಡುವುದು ಸ್ಥಳೀಯರ ನಂಬಿಕೆಯ ವಿಷಯ. ಅವರು ಎಲ್ಲಿ, ಯಾವಾಗ ಇಡುತ್ತಾರೆ ಎನ್ನುವುದು ಅವರ ಖಾಸಗಿ ನಿರ್ಧಾರ. ಒಟ್ಟಿನಲ್ಲಿ ಸೌಹಾರ್ದವಾಗಿ ಈ ವಿಷಯ ಅಂತ್ಯವಾಗಲಿ ಎನ್ನುವ ಕಾರಣಕ್ಕೆ ಸರ್ವ ಪ್ರಯತ್ನ ಮಾಡಲಾಗುತ್ತಿದೆ ಎಂದು ಶಾಸಕರು ಹೇಳಿದರು.

ಶಾಸಕರ ಸಭೆಯ ಕುರಿತು ಮಾತನಾಡಿರುವ ಡಿವೈಎಫ್ ಐ ಮುಖಂಡ‌ ಮುನೀರ್ ಕಾಟಿಪಳ್ಳ, “ಮಳಲಿ ಮಸೀದಿಯನ್ನು ಕೋಮುವಾದಿ ಅಜೆಂಡಾದೊಂದಿಗೆ ಬಿಜೆಪಿ ಸಹೋದರ ಸಂಘಟನೆ ವಿಎಚ್ ಪಿ ವಿವಾದವಾಗಿಸಿದ ನಂತರ ಶಾಸಕ ಭರತ್ ಶೆಟ್ಟಿ ಸಂತ್ರಸ್ತರಾದ ಸ್ಥಳೀಯ ಮುಸ್ಲಿಮರೊಂದಿಗೆ ಮಾತೇ ಆಡಿರಲಿಲ್ಲ. ಬದಲಿಗೆ ಹೊರಗಡೆಯಿಂದ ಮಳಲಿ ಪ್ರವೇಶಿಸಿ ಸ್ಥಳೀಯ ಗ್ರಾಮಸ್ಥರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಲು ಯತ್ನಿಸುತ್ತಿದ್ದರು. ಮಸೀದಿ ಬಿಟ್ಟು ಕೊಡಲು ಒತ್ತಡ ಹೇರುತ್ತಿದ್ದ ಶರಣ್ ಪಂಪ್ ವೆಲ್ ನೇತೃತ್ವದ ವಿಎಚ್ ಪಿ ಮುಖಂಡರು ಸಭೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈಗ ದಿಢೀರ್ ಆಗಿ ಮಳಲಿ ಮಸೀದಿ ಆಡಳಿತ ಮಂಡಳಿಯವರನ್ನು ಮಂಗಳೂರಿಗೆ ಕರೆಸಿ ಮಳಲಿ ಗ್ರಾಮಕ್ಕೆ ಸಂಬಂಧಪಡದ, ಕೋಮುವಾದಿ ಮುಖಂಡ ಶರಣ್ ಪಂಪ್ ವೆಲ್ ಸಮ್ಮುಖ ಮಾತಾಡಿಸಿದ್ದಾರೆ” ಎಂದು ಹೇಳಿದ್ದಾರೆ.

Gayathri SG

Recent Posts

ನಿದ್ದೆ ಇಲ್ಲದೆ ಬಳಲುತ್ತಿದ್ದ ಖ್ಯಾತ ಸೌತ್ ನಟಿ ನಿಧನ!

ಖ್ಯಾತ ಸಿನಿಮಾ ನಟಿ ಕನಕಲತಾ ಇಂದು ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಅವರು ಬಹಳ ದಿನಗಳಿಂದ ನಿದ್ದೆ ಮಾಡಲಾಗದ…

7 mins ago

ಮತದಾನದ ಹಕ್ಕು ಚಲಾಯಿಸಿದ ಹಿಂದೂ ಹುಲಿ ಬಸನಗೌಡ ಪಾಟೀಲ್ ಯತ್ನಾಳ್

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎರಡನೇ ಹಂತದ ಮತದಾನದ ಭಾಗವಾಗಿ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನಿಂದ ವೋಟಿಂಗ್ ನಡೆಯುತ್ತಿದೆ.

18 mins ago

ಭ್ರಷ್ಟಾಚಾರ ಮುಕ್ತ, ಜಾತಿ ಮುಕ್ತ ವ್ಯವಸ್ಥೆಗಾಗಿ ಮತ ನೀಡಿ ಎಂದ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ನ ಗಾಂಧಿನಗರ ಲೋಕಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

25 mins ago

ಆಹಾರದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ಬ್ಯಾನ್‌

ಕಾಟನ್‌ ಕ್ಯಾಂಡಿ ಮತ್ತು ಗೋಬಿ ಬ್ಯಾನ್‌ ಆದ ಬೆನ್ನಲ್ಲೇ ಆಹಾರದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ಬ್ಯಾನ್‌ ಮಾಡಲಾಗಿದೆ.ಬಳಕೆ ಮಾಡಿದರೆ 10…

31 mins ago

ಮಲ್ಪೆ ಬೀಚ್ ನ‌ ಸೊಬಗನ್ನು ಕೆಡಿಸುತ್ತಿವೆ ಬಿಯರ್ ಬಾಟಲ್, ಪ್ಲಾಸ್ಟಿಕ್ ತ್ಯಾಜ್ಯ

ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣ ಮಲ್ಪೆ ಬೀಚ್ ಇದೀಗ ಕಸದ ಕೊಂಪೆಯಾಗಿ ಮಾರ್ಪಡುತ್ತಿದೆ. ಎಲ್ಲೆಂದರಲ್ಲಿ ಬಿಸಾಡಿರುವ ಪ್ಲಾಸ್ಟಿಕ್ ಬಾಟಲ್, ಬಿಯರ್…

46 mins ago

ಗಣೇಶನ ಮೂರ್ತಿ ಜೊತೆ 3ನೇ ಬಾರಿ ನಭಕ್ಕೆ ಹಾರಿದ ಸುನೀತಾ ವಿಲಿಯಮ್ಸ್‌

ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಇದೀಗ ಮತ್ತೆ ಬಾಹ್ಯಾಕಾಶಕ್ಕೆ ಹಾರಲು ಸಿದ್ದರಾಗಿದ್ದು, ಇಂದು ಅಂತಾರಾಷ್ಟ್ಪೀಯ ಬಾಹ್ಯಾಕಾಶ ನಿಲ್ದಾಣಕ್ಕೆ…

55 mins ago