Categories: ಮಂಗಳೂರು

ಮಡಿಕೇರಿ ಜಿಲ್ಲೆಯಲ್ಲಿ ಏ.20ರಂದು ತಾಲೂಕು ಮಟ್ಟದ ಆರೋಗ್ಯ ಮೇಳ!

ಮಡಿಕೇರಿ: ಜಿಲ್ಲೆಯಲ್ಲಿ ಏ.20ರಂದು ತಾಲೂಕು ಮಟ್ಟದ ಆರೋಗ್ಯ ಮೇಳ ನಡೆಯಲಿದೆ. ಆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ ನಿರ್ದೇಶಿಸಿದ್ದಾರೆ.

ಮೇಳಕ್ಕೆ ಸಂಬಂಧಿಸಿದಂತೆ ನಡೆದ ಜಿಲ್ಲಾ ಸಮನ್ವಯ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರೋಗ್ಯ ಮೇಳ ಬಗ್ಗೆ ತಾಲೂಕು ಮಟ್ಟದಲ್ಲಿಯೂ ಮಾಹಿತಿ ನೀಡುವಂತಾಗಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲಾ ಹಂತದ ವೈದ್ಯಾಧಿಕಾರಿಗಳು ತಂಡಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಆಯುಷ್ಮಾನ್ ಆರೋಗ್ಯ ಕಾರ್ಯಕ್ರಮದಡಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಹಾಗೂ ಪೌರ ಕಾರ್ಮಿಕರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಿಸಲು ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಆರೋಗ್ಯಕ್ಕೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಆರೋಗ್ಯ ಮೇಳದಲ್ಲಿ ಮಳಿಗೆ ತೆರೆಯಲು ಅವಕಾಶ ಕಲ್ಪಿಸಬೇಕು ಹಾಗೂ ಪೋಷಣಾ ಅಭಿಯಾನಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ಒದಗಿಸುವ ಮಳಿಗೆ ತೆರೆಯಲು ಸೂಕ್ತ ಕ್ರಮ ವಹಿಸಬೇಕೆಂದು ಡಿಸಿ ಮಾಹಿತಿ ನೀಡಿದರು.

ಆರೋಗ್ಯ ಮೇಳದಲ್ಲಿ ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ರಕ್ತದೊತ್ತಡ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ತಪಾಸಣೆಯನ್ನು ನಡೆಸಲಾಗುವುದು ಹಾಗೂ ವಿವಿಧ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಹಾಗೂ ಔಷಧಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್.ವೆಂಕಟೇಶ್ ಹೇಳಿದರು.

ಈ ಮೇಳದಲ್ಲಿ ಹೆಸರು ನೋಂದಣಿ , ಎನ್‍ಸಿಡಿ ಮತ್ತು ಟಿಬಿ ಸ್ಕ್ರೀನಿಂಗ್, ಆರೋಗ್ಯ ಶಿಕ್ಷಣದ ಬಗ್ಗೆ ಆಪ್ತ ಸಮಾಲೋಚನೆ, ಆಯುಷ್ ಕ್ಲಿನಿಕ್, ವೈದ್ಯಕೀಯ ಆರೈಕೆ, ಪ್ರಯೋಗಾಲಯ ಮತ್ತು ವಿಕಿರಣ ಸೇವೆಗಳು, ಔಷಧ ವಿತರಣೆ, ಆಯುಷ್ ಔಷಧ ವಿತರಣೆ ಹಾಗೂ ಆರೋಗ್ಯ ಸೇವೆಗಳ ಜಾಗೃತಿ ಸೇರಿದಂತೆ ವಿವಿಧ ಮಳಿಗೆಗಳು ಇರಲಿವೆ ಎಂದರು.

Sneha Gowda

Recent Posts

ಇಂದು ತಾಯಂದಿರ ದಿನ : ಈ ದಿನದ ಮಹತ್ವ ,ಹಿನ್ನೆಲೆ ಏನು?

ತಾಯಂದಿರ ದಿನ , ತಾಯಂದಿರ ಗೌರವಾರ್ಥ ರಜಾದಿನವನ್ನು ವಿಶ್ವದಾದ್ಯಂತ ದೇಶಗಳಲ್ಲಿ ಆಚರಿಸಲಾಗುತ್ತದೆ. ಅದರ ಆಧುನಿಕ ರೂಪದಲ್ಲಿ ರಜಾದಿನವು ಹುಟ್ಟಿಕೊಂಡಿತುಯುನೈಟೆಡ್ ಸ್ಟೇಟ್ಸ್…

3 mins ago

ಇಂದಿನ ರಾಶಿ ಫಲ : ಯಾರಿಗೆ ಶುಭ, ಯಾರಿಗೆ ಅಶುಭ

ವಾರದ ಆರಂಭದಲ್ಲೇ ಶುಭ ಸುದ್ದಿ. ಮನೆಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದ್ದು, ವಾರಾಂತ್ಯದಲ್ಲಿ ಎಲ್ಲವೂ ಸರಿದೂಗಲಿದೆ. ಕಾರ್ಮಿಕರಿಗೆ ಲಾಭ.…

17 mins ago

ಇಂದು ಶಂಕರ ಜಯಂತಿ : ಶಂಕರಾಚಾರ್ಯರ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ

ಹೆಸರೇ ಸೂಚಿಸುವಂತೆ, ಆದಿ ಶಂಕರ ಜಯಂತಿಯನ್ನು ಭಾರತೀಯ ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞ ಆದಿ ಶಂಕರರ ಜನ್ಮದಿನದ ಸವಿ ನೆನಪಿಗಾಗಿ ಆಚರಿಸಲಾಗುತ್ತದೆ.…

27 mins ago

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

8 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

9 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

9 hours ago