Categories: ಮಂಗಳೂರು

ಮಂಗಳೂರು : ಹೊಸ ಉದ್ದಿಮೆ ಪ್ರಾರಂಭಿಸಲು ಉದ್ದಿಮೆ ಪರವಾನಗಿ ಪಡೆದು ನಡೆಸಬೇಕು

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ನಡೆಸುತ್ತಿರುವ ಎಲ್ಲಾ ಉದ್ದಿಮೆದಾರರು ಪ್ರತಿ ಆರ್ಥಿಕ ವರ್ಷಾಂತ್ಯದ ಮಾರ್ಚ್ ತಿಂಗಳೊಳಗೆ ತಮ್ಮ ಉದ್ದಿಮೆ ಪರವಾನಗಿಯನ್ನು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನವೀಕರಿಸಿಕೊಂಡು ಉದ್ದಿಮೆಯನ್ನು ಮುಂದುವರಿಸಬೇಕಾಗಿರುತ್ತದೆ ಮತ್ತು ಹೊಸ ಉದ್ದಿಮೆ ಪ್ರಾರಂಭಿಸುವ ಮೊದಲು ಉದ್ದಿಮೆ ಪರವಾನಗಿಯನ್ನು ಪಡೆದುಕೊಂಡೇ ಉದ್ದಿಮೆಯನ್ನು ನಡೆಸಬೇಕಾಗಿರುತ್ತದೆ.

ಆದರೆ ಪ್ರಸ್ತುತ ಹೆಚ್ಚಿನ ಸಂಖ್ಯೆಯ ಉದ್ದಿಮೆದಾರರು ಈವರೆಗೂ 2021-22 ನೇ ಸಾಲಿಗೆ ತಮ್ಮ ಉದ್ದಿಮೆ ಪರವಾನಗಿಯನ್ನು ನವೀಕರಿಸದೇ ಉದ್ದಿಮೆಯನ್ನು ಮುಂದುವರಿಸುತ್ತಿರುವುದು ಹಾಗೂ ಹೊಸ ಉದ್ದಿಮೆ ಪ್ರಾರಂಭಿಸಿದ್ದಲ್ಲಿ ಉದ್ದಿಮೆ ಪರವಾನಗಿಯನ್ನು ಪಡೆಯದೇ ಇರುವುದು ಮಂಗಳೂರು ಮಹಾನಗರಪಾಲಿಕೆಯ ಗಮನಕ್ಕೆ ಬಂದಿರುತ್ತದೆ.

ಹೊಸ ಉದ್ದಿಮೆ ಪರವಾನಿಗೆ ಪಡೆಯಲು, ನವೀಕರಿಸಲು, ಹಾಗು ರದ್ದುಪಡಿಸಲು ಅರ್ಚಿಗಳನ್ನು MCC Trade license ಮೊಬೈಲ್‍ ಅಪ್ಲಿಕೇಷನ್‍ ಸಾಫ್ಟ್ವೇರ್ ಮುಖಾಂತರ ಹಾಗು http:// mcctradelicense.com:4400/Web ವೆಬ್ ಸೈಟ್ ಮುಖಾಂತರ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯ ವಾಣಿ: 6364016555 ಯನ್ನು ಸಂಪರ್ಕಿಸಬಹುದು.

ಆದುದರಿಂದ ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಉದ್ದಿಮೆ ನಡೆಸುತ್ತಿರುವಎಲ್ಲಾಉದ್ದಿಮೆದಾರರೂ ದಿನಾಂಕ: 15-12-2021 ರೊಳಗೆ ತಮ್ಮಉದ್ದಿಮೆ ಪರವಾನಿಗೆಯನ್ನು ಪಡೆದುಕೊಳ್ಳತಕ್ಕದ್ದು. ತಪ್ಪಿದ್ದಲ್ಲಿ ಈ ಪತ್ರಿಕಾ ವರದಿಯನ್ನು ಅಂತಿಮ ನೋಟೀಸು ಎಂದು ಪರಿಗಣಿಸಿ ಇನ್ನು ಮುಂದಕ್ಕೆ ಯಾವುದೇ ಮುನ್ಸೂಚನೆ ನೀಡದೆ ನಿಮ್ಮ ಉದ್ದಿಮೆಯನ್ನು ರದ್ದುಪಡಿಸುವ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.

ಆಯುಕ್ತರು
ಮಂಗಳೂರು ಮಹಾನಗರಪಾಲಿಕೆ

Sneha Gowda

Recent Posts

ನಾಳೆ ಪ್ರಚಾರ ನಿಮಿತ್ಯ ಕಲಬುರಗಿಯ ಸೇಡಂ ತಾಲೂಕಿಗೆ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನಾಳೆ ಸೇಡಂಗೆ ಆಗಮಿಸಲಿದ್ದು, ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಪ್ರಚಾರ…

3 hours ago

ಅಧಿಕಾರಕ್ಕಾಗಿ ಮಾನವಿಯತೆ ಮರೆತಿದ್ದಾರೆ ಖಂಡ್ರೆ : ಭಗವಂತ ಖೂಬಾ

ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಈಶ್ವರ ಖಂಡ್ರೆ, ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಲೆಬೆಕೆನ್ನುವ ಉದ್ದೇಶದಿಂದ, ಮನುಷ್ಯತ್ವ, ಮಾನವಿಯತೆ ಮರೆತು ಬಿಟ್ಟಿದ್ದಾರೆ,…

3 hours ago

ಕಾಂಗ್ರೆಸ್‌ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ಹೊಕ್ಕಿ ಹೊಡೆಯುತ್ತಾರೆ: ಯತ್ನಾಳ್‌

'ದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ಹೊಕ್ಕಿ ಹೊಡೆಯುತ್ತಾರೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ…

3 hours ago

ನಾಳೆಯಿಂದ ಪಿಯುಸಿ 2ನೇ ವಾರ್ಷಿಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಬಸ್‌ ಪ್ರಯಾಣ ಫ್ರೀ

ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಏಪ್ರಿಲ್ 29 ರಿಂದ ಮೇ…

4 hours ago

ಸೆಲ್ಫಿ ತೆಗೆಯುವಾಗ ಕೆರೆಗೆ ಬಿದ್ದ ಮಗಳು : ಕಾಪಾಡಲು ಹೋದ ತಂದೆಯೂ ಸಾವು

ಸೆಲ್ಫಿ ತೆಗೆಯುವಾಗ ಕೆರೆಗೆಬಿದ್ದ ಮಗಳ ರಕ್ಷಣೆಗೆ ಹೋಗಿ ತಂದೆಯೂ ಸಾವನ್ನಪ್ಪಿದ ಧಾರುಣ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕಾಮಸಮುದ್ರ…

4 hours ago

ಯತ್ನಾಳ್ ಬಾಯಿ, ಬೊಂಬಾಯಿ : ಸಚಿವ ಎಂ.ಬಿ‌.ಪಾಟೀಲ್ ತಿರುಗೇಟು

ಬಸನಗೌಡ ಪಾಟೀಲ್ ಯತ್ನಾಳ್ ಬಾಯಿ, ಬೊಂಬಾಯಿ. ಅವ್ರು, ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ, ಮಲಗಿ ಎಚ್ಚರಾದ್ಮೇಲೆ ಒಂದು ಹೇಳ್ತಾರೆ. ಇವ್ರ ಮಾತನ್ನ…

4 hours ago