Categories: ಮಂಗಳೂರು

ಮಂಗಳೂರು ವಿವಿಯಲ್ಲಿ ಹಿಜಾಬ್ ವಿವಾದ ಸೃಷ್ಟಿಸಿದ ವಿದ್ಯಾರ್ಥಿನಿಯರಿಗೆ ನೋಟಿಸ್ ಜಾರಿ!

ಮಂಗಳೂರು: ಕಾಲೇಜಿನಲ್ಲಿ ಹಿಜಾಬ್ ವಿವಾದ ವಿಚಾರಣೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರಿಗೆ ವಿವಿಯಿಂದ ನೋಟಿಸ್ ಜಾರಿಯಾಗಿದೆ. ಕಾಲೇಜಿನ ಶಿಸ್ತು ಉಲ್ಲಂಘಿಸಿ ಘನತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ವಿವಿ ಕಾಲೇಜು ಪ್ರಾಂಶುಪಾಲೆ ಡಾ. ಅನುಸೂಯಾ ನೋಟಿಸು ಜಾರಿ ಮಾಡಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಗಡುವು ನೀಡಿದ ಬೆನ್ನಲ್ಲೇ ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದಾರೆ. ಬಾಹ್ಯಶಕ್ತಿಗಳ ಜೊತೆಗೂಡಿ ಪತ್ರಿಗೋಷ್ಠಿ ನಡೆಸಿದ್ದೀರಿ ಕಾಲೇಜಿನ ವಿರುದ್ಧವಾಗಿ ಪ್ರಾಂಶುಪಾಲರ ವಿರುದ್ಧ ಕೆಲ ಹೇಳಿಕೆ ನೀಡಿ  ಕಾಲೇಜಿನ ಘನತೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ನೋಟೀಸಿನಲ್ಲಿ ಹೇಳಲಾಗಿದೆ.

ಈ ರೀತಿಯ ವರ್ತನೆ ಬಗ್ಗೆ ನಿಮ್ಮ ಮೇಲೆ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದೆಂದು ಪ್ರಶ್ನಿಸಲಾಗಿದ್ದು ಈ ಬಗ್ಗೆ ಸಮಜಾಯಿಸಿ 3ದಿನದೊಳಗೆ ಉತ್ತರಿಸುವಂತೆ ಸೂಚಿಸಿದ್ದಾರೆ. ಹಿಜಾಬ್ ವಿದ್ಯಾರ್ಥಿನಿ ಗೌಸಿಯಾ ಸೇರಿ ಇತರ ವಿದ್ಯಾರ್ಥಿನಿಯರಿಗೆ ನೋಟಿಸ್ ನೀಡಲಾಗಿದ್ದು ಮೊದಲ ಹಂತವಾಗಿ ನೋಟಿಸ್ ನೀಡಲಾಗಿದೆ. ಈ ಬಳಿಕವೂ ನಿಯಮ ಮೀರಿದರೆ ಕಾಲೇಜಿನಿಂದ ಅಮಾನತು ಮಾಡಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ.

Sneha Gowda

Recent Posts

ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕುಮಾರ್ ತ್ರಿಪಾಠಿ ಅಧಿಕಾರ ಸ್ವೀಕಾರ

ಅಡ್ಮಿರಲ್ ಆರ್. ಹರಿಕುಮಾರ್ ಸೇವೆಯಿಂದ ನಿವೃತ್ತರಾದ ಹಿನ್ನೆಲೆ ದಿನೇಶ್ ಕುಮಾರ್ ತ್ರಿಪಾಠಿ ಅವರು ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಇಂದು…

5 mins ago

ಟ್ರಕ್‌,ಬಸ್‌ ನಡುವೆ ಭೀಕರ ಅಪಘಾತ : 10 ಸಾವು, 30 ಮಂದಿಗೆ ಗಾಯ

ನಾಸಿಕ್‌ನ ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ನಡೆದಿದೆ. ಈ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದು, 30ಕ್ಕೂ…

36 mins ago

ಹೆಬ್ರಿ ಅಡಾಲ್ ಬೆಟ್ಟು ಪರಿಸರದ ಚರಂಡಿಯಲ್ಲಿ ಕೊಳಚೆ ನೀರು : ಗ್ರಾಮಸ್ಥರ ಆಕ್ರೋಶ

ಹೆಬ್ರಿ ಅಡಾಲ್ ಬೆಟ್ಟು ಶಿಶುಮಂದಿರದ ಸಮೀಪ ಇರುವ ಪರಿಸರದಲ್ಲಿ ಹಾದುಹೋದ ಚರಂಡಿಯಲ್ಲಿ ಕೊಳಚೆ ನೀರು ನಿಂತು ದುರ್ನಾಥ ಬೀರುತ್ತಿದ್ದು ಸಾಂಕ್ರಾಮಿಕ…

53 mins ago

ವಿಕಸಿತ ಭಾರತಕ್ಕಾಗಿ ಬಿಜೆಪಿ ಬೆಂಬಲಿಸಿ : ಶಿವರುದ್ರ ಬಾಗಲಕೋಟ ಮನವಿ

ವಿಶ್ವನಾಯಕ, ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿರುವ ವಿಕಸಿತ ಭಾರತ ನಿರ್ಮಾಣಕ್ಕಾಗಿ ಜಿಲ್ಲೆಯ ಮತದಾರರು ಈ ಸಲವೂ ಬಿಜೆಪಿಯ ಕೈ…

1 hour ago

ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾದ 15 ಆಟಗಾರರ ಬಲಿಷ್ಠ ತಂಡ ಪ್ರಕಟ

2024ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ರೋಹಿತ್ ಶರ್ಮಾ…

1 hour ago

ದೆಹಲಿ ‘ಕೈ’ ಅಧ್ಯಕ್ಷ ಸ್ಥಾನಕ್ಕೆ ದೇವೆಂದರ್ ಯಾದವ್ ನೇಮಕ

ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯ (ಡಿಪಿಸಿಸಿ) ಅಧ್ಯಕ್ಷರನ್ನಾಗಿ ದೇವೇಂದ್ರ ಯಾದವ್ ಅವರನ್ನು ನೇಮಕ ಮಾಡಿ ಹೈಕಮಾಂಡ್ ಇಂದು ಆದೇಶ ಹೊರಡಿಸಿದೆ.

1 hour ago