Categories: ಮಂಗಳೂರು

ಮಂಗಳೂರು: ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕಡತ ವಿಲೇವಾರಿ ಸಪ್ತಾಹಕ್ಕೆ ಚಾಲನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕಡತ ವಿಲೇವಾರಿ ಸಪ್ತಾಹಕ್ಕೆ ಚಾಲನೆ ನೀಡಲಾಗಿದ್ದು, 10 ದಿನಗಳ ಅವಧಿಯಲ್ಲಿ ಬಾಕಿ ಇರುವ 82 ಸಾವಿರ ಅರ್ಜಿ ವಿಲೇವಾರಿ ಮಾಡಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದ.ಕ.ಜಿಲ್ಲೆಯ ಮೂಲಕ ಕಡತ ವಿಲೇವಾರಿ ಅಭಿಯಾನ ಆರಂಭವಾಗಿದ್ದು, ರಾಜ್ಯದಗಲಕ್ಕೂ ಇದು ವಿಸ್ತರಿಸಲಿದೆ.

ಈಗಾಗಲೇ 45 ಇಲಾಖೆಗಳಿಗೆ ಸಂಬಂಧಿಸಿದ 28,728 ಕಡತಗಳು, 2099 ದೂರು ಅರ್ಜಿಗಳು, 51,573 ಸಾವಿರ ಪಿಂಚಣಿ ಅರ್ಜಿಗಳು ಸೇರಿದಂತೆ ಸುಮಾರು 52,400 ಅರ್ಜಿಗಳು ಬಾಕಿ ಇದ್ದು, ಇದನ್ನು 10 ದಿನಗಳೊಳಗೆ ವಿಲೇವಾರಿ ಮಾಡಲು ಆದೇಶ ನೀಡಲಾಗಿದೆ ಎಂದರು.

ಅಧಿಕಾರಿಗಳು ಬಂದ ಅರ್ಜಿಯನ್ನು ಕಾಲಮಿತಿಯೊಳಗೆ ಮುಗಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದ ಸಚಿವರು ಜನತೆಯ ಕೆಲಸ ನಿಧಾನಗತಿಯಲ್ಲಿ ಆಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ವೇಗ ನೀಡುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಇನ್ನು 10 ದಿನಗಳ ಕಾಲ ಅಧಿಕಾರಿಗಳು ಯಾವುದೇ ರಜೆ ಇಲ್ಲದೆ ಮತ್ತು ಎರಡು ಗಂಟೆಗಳ ಕಾಲ ಹೆಚ್ಚುವರಿಯಾಗಿ ಕರ್ತವ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದರು.

ಕಂದಾಯ ವಿಭಾಗಕ್ಕೆ ಸಂಬಂಧಿಸಿ ಜನತೆಯ ದೂರುಗಳಿಗೆ ಸ್ಪಂದಿಸಲು ಫೆ.28 ರಿಂದ ಪ್ರತಿ ವಿಧಾನಸಬಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಂದಾಯ ಮೇಳ ಆಯೋಜಿಸಲಾಗುವುದು ಎಂದು ಸುನೀಲ್ ಕುಮಾರ್ ಇದೇ ಸಂದರ್ಭ ತಿಳಿಸಿದರು.

Sneha Gowda

Recent Posts

ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಬಿಜೆಪಿ ಮುಖಂಡನ ಬಂಧನ : ಠಾಣೆಗೆ ಹರೀಶ್ ಪೂಂಜ ಮುತ್ತಿಗೆ

ಮೇಲಂತಬೆಟ್ಟು ಅಕ್ರಮ ಕೋರೆಗೆ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಶಾಸಕ ಹರೀಶ್ ಪೂಂಜ ಆಪ್ತ ಬಿಜೆಪಿ ಯುವ ಮೋರ್ಚಾ ಮುಖಂಡ…

9 mins ago

ರಾತ್ರಿ 1:30 ಆದರೂ ನಿಲ್ಲದ ರೆಡ್​ ಆರ್ಮಿ ಹರ್ಷ; ವಿಡಿಯೋ ಮಾಡಿ ಶೇರ್​ ಮಾಡಿದ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2024ರಲ್ಲಿ ಅದ್ಭುತವನ್ನೇ ಮಾಡಿದೆ. ಸತತ ಪಂದ್ಯಗಳಲ್ಲಿ ಸೋತು ಒಂದು ಹಂತದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ…

14 mins ago

ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರೆಂಟ್

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಶನಿವಾರ ಅರೆಸ್ಟ್ ವಾರಂಟ್…

26 mins ago

ಸರಣಿ ಅಪಘಾತ: ಎರ್ಟಿಗಾ ಕಾರು ಸಂಪೂರ್ಣ ‌ನಜ್ಜುಗುಜ್ಜು

ಭೀಕರ ಸರಣಿ ಅಪಘಾತವು ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಬಳಿ ನಡೆದಿದೆ.

30 mins ago

ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ : ಅದೃಷ್ಟ ತಂದ ಅಶ್ವಿನಿ ಪುನೀತ್ ರಾಜ್​ಕುಮಾರ್ ಎಂಬ ಪೋಸ್ಟ್ ವೈರಲ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲು ಕಂಡಾಗ ಸ್ಯಾಂಡಲ್​ವುಡ್​ ನಟ ದಿವಂಗತ ಪುನೀತ್ ರಾಜ್​ಕುಮಾರ್​ ಅವರ ಪತ್ನಿ ಅಶ್ವಿನಿಯವರನ್ನು…

60 mins ago

ಮೋದಿ ಪಾತ್ರದಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಸತ್ಯರಾಜ್

ಸಿನಿ, ರಾಜಕೀಯ, ಕ್ರೀಡಾ ಕ್ಷೇತ್ರದ ದಿಗ್ಗಜರ ಬದುಕಿನ ಮೇಲೆ ಸಿನಿಮಾ ಮಾಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಇತ್ತೀಚೆಗೆ…

1 hour ago