Categories: ಮಂಗಳೂರು

ಮಂಗಳೂರು: ಬೂಸ್ಟರ್ ಡೋಸ್ ಪಡೆದ ಪೊಲೀಸ್ ಕಮಿಷನರ್, ಡಿಸಿಪಿ

ಮಂಗಳೂರು: ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಹಾಗೂ ಡಿಸಿಪಿ ಹರಿರಾಂ ಶಂಕರ್ ಸೇರಿದಂತೆ ಪೊಲೀಸ್ ಸಿಬ್ಬಂದಿ  ಬೂಸ್ಟರ್ ಡೋಸ್ ಪಡೆದರು.

ಕೊರೊನಾ ಸಂಕಷ್ಟದ ಈ ಕಾಲಘಟ್ಟದಲ್ಲಿ ಫ್ರಂಟ್ ಲೈನ್ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸರಿಗೆ ರೋಶನಿ ನಿಲಯದಲ್ಲಿ ಬೂಸ್ಟರ್ ಡೋಸ್ ನೀಡಲಾಯಿತು.

ಸರಕಾರ ಹಾಗೂ ಪೊಲೀಸ್ ಇಲಾಖೆ ಆದೇಶದಂತೆ ಬೂಸ್ಟರ್ ಡೋಸ್ ಗೆ ಅರ್ಹರಾಗಿರುವ 750 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯಲ್ಲಿ ಇಂದು 170 ಮಂದಿಗೆ ಬೂಸ್ಟರ್ ಡೋಸ್ ನೀಡಲಾಯಿತು.

ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾತನಾಡಿ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮೊದಲನೇ ಡೋಸ್ ಎಲ್ಲರೂ ಪಡೆದಿದ್ದಾರೆ. 95 % ಅಧಿಕ ಪೊಲೀಸರು 2ನೇ ಡೋಸ್ ಲಸಿಕೆ ಪಡೆದಿದ್ದಾರೆ.

ಉಳಿದಂತೆ ಕೆಲವು ಗರ್ಭಿಣಿಯರು, ಸಣ್ಣ ಮಕ್ಕಳು ಹೊಂದಿರುವವರು ಸೇರಿದಂತೆ ಇತರ ಕಾರಣದಿಂದ ಲಸಿಕೆ ಪಡೆದಿಲ್ಲ‌. ಇದೀಗ ಇಂದು ಅರ್ಹ 170 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಬೂಸ್ಟರ್ ಡೋಸ್ ನೀಡಲಾಗಿದೆ ಎಂದರು.

Sneha Gowda

Recent Posts

ಹೆಬ್ರಿ ಅಡಾಲ್ ಬೆಟ್ಟು ಪರಿಸರದ ಚರಂಡಿಯಲ್ಲಿ ಕೊಳಚೆ ನೀರು : ಗ್ರಾಮಸ್ಥರ ಆಕ್ರೋಶ

ಹೆಬ್ರಿ ಅಡಾಲ್ ಬೆಟ್ಟು ಶಿಶುಮಂದಿರದ ಸಮೀಪ ಇರುವ ಪರಿಸರದಲ್ಲಿ ಹಾದುಹೋದ ಚರಂಡಿಯಲ್ಲಿ ಕೊಳಚೆ ನೀರು ನಿಂತು ದುರ್ನಾಥ ಬೀರುತ್ತಿದ್ದು ಸಾಂಕ್ರಾಮಿಕ…

3 mins ago

ವಿಕಸಿತ ಭಾರತಕ್ಕಾಗಿ ಬಿಜೆಪಿ ಬೆಂಬಲಿಸಿ : ಶಿವರುದ್ರ ಬಾಗಲಕೋಟ ಮನವಿ

ವಿಶ್ವನಾಯಕ, ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿರುವ ವಿಕಸಿತ ಭಾರತ ನಿರ್ಮಾಣಕ್ಕಾಗಿ ಜಿಲ್ಲೆಯ ಮತದಾರರು ಈ ಸಲವೂ ಬಿಜೆಪಿಯ ಕೈ…

19 mins ago

ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾದ 15 ಆಟಗಾರರ ಬಲಿಷ್ಠ ತಂಡ ಪ್ರಕಟ

2024ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ರೋಹಿತ್ ಶರ್ಮಾ…

21 mins ago

ದೆಹಲಿ ‘ಕೈ’ ಅಧ್ಯಕ್ಷ ಸ್ಥಾನಕ್ಕೆ ದೇವೆಂದರ್ ಯಾದವ್ ನೇಮಕ

ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯ (ಡಿಪಿಸಿಸಿ) ಅಧ್ಯಕ್ಷರನ್ನಾಗಿ ದೇವೇಂದ್ರ ಯಾದವ್ ಅವರನ್ನು ನೇಮಕ ಮಾಡಿ ಹೈಕಮಾಂಡ್ ಇಂದು ಆದೇಶ ಹೊರಡಿಸಿದೆ.

26 mins ago

ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ವಿಜಯಪುರ : ರಾಜು ಆಲಗೂರ್ ಭರವಸೆ

: ನಗರದಲ್ಲಿರುವ ಗೋಳ ಗುಮ್ಮಟವನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲು ಶತ ಪ್ರಯ tgತ್ನ ಮಾಡುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು…

30 mins ago

ಡೀಪ್‌ ಫೇಕ್‌ ವಿಡಿಯೋ ಪ್ರಕರಣ : ಪೊಲೀಸ್‌ ವಿಚಾರಣೆಗೆ ಹಾಜರಾದ ರಶ್ಮಿಕಾ

ಇತ್ತೀಚೆಗೆ ರಶ್ಮಿಕಾ ಮಂದಣ್ಣಗೆ ಸಂಬಂಧಿಸಿದ ಡೀಪ್ ಫೇಕ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಈ ಸಂಬಂಧ…

48 mins ago