Categories: ಮಂಗಳೂರು

ಮಂಗಳೂರಿನ ಟ್ರಾಫಿಕ್ ವಾರ್ಡನ್ ಇನ್ನಿಲ್ಲ

ಮಂಗಳೂರು : ನಗರದ ಹಿರಿಯ ಟ್ರಾಫಿಕ್ ವಾರ್ಡನ್ ಆಗಿದ್ದ 99 ವರ್ಷದ ಜೋಸೆಫ್ ಗೊನ್ಸಾಲ್ವಿಸ್ ಎಂಬುವವರು ಇಂದು ನಿಧನರಾಗಿದ್ದಾರೆ.
ಜನವರಿ 1, 1921 ರಂದು ಜನಿಸಿದ ಜೋಸೆಫ್, 2015 ರಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಟ್ರಾಫಿಕ್ ವಾರ್ಡನ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಆಗ ಅವರಿಗೆ 94 ವರ್ಷ ವಯಸ್ಸಾಗಿತ್ತು. ನಿವೃತ್ತಿಯ ನಂತರ ಸಮಾಜಕ್ಕೆ ಸೇವೆ ಮಾಡುವ ಉದ್ದೇಶದಿಂದ ಜೋ ಟ್ರಾಫಿಕ್ ವಾರ್ಡನ್ ಆಗಲು ನಿರ್ಧರಿಸಿದ್ದರು.
ನಗು ಮುಖದೊಂದಿಗೆ ಜೋ ಅವರು ಮಂಗಳೂರಿನ ಹಾಟ್‌ ಸ್ಪಾಟ್‌ಗಳಲ್ಲಿ ಟ್ರಾಫಿಕ್ ನಿರ್ವಹಿಸುತ್ತಿದ್ದರು. ಸುರಕ್ಷಿತ ಚಾಲನೆ ಮತ್ತು ಇತರ ಪ್ರಮುಖ ವಿಷಯಗಳ ಕುರಿತು ಅವರು ಆಗಾಗ್ಗೆ ಯುವಜನರೊಂದಿಗೆ ಸಂವಾದ ನಡೆಸುತ್ತಿದ್ದರು. 2019 ರಲ್ಲಿ ಟ್ರಾಫಿಕ್ ನಿರ್ವಹಣೆಯಲ್ಲಿ ಶ್ಲಾಘನೀಯ ಕೆಲಸ ಮಾಡಿದ್ದಕ್ಕಾಗಿ ನಗರ ಪೊಲೀಸರು ಅವರನ್ನು ಗೌರವಿಸಿದ್ದರು. ಬ್ರಿಟಿಷ್ ಕಂಪೆನಿಯ ಉದ್ಯೋಗಿಯಾಗಿದ್ದರು. ಬಳಿಕ ಆ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಗಮನ ಸೆಳೆದಿದ್ದರು.
Raksha Deshpande

Recent Posts

ಐದು ತಿಂಗಳ ಮಗುವನ್ನು ಕಚ್ಚಿ ಕೊಂದು ಹಾಕಿದ ನಾಯಿ

ಐದು ತಿಂಗಳ ಮಗುವನ್ನು ನಾಯಿಯೊಂದು ಕಚ್ಚಿ ಕೊಂದಿರುವ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ತಾಂಡೂರಿನಲ್ಲಿ ನಡೆದಿದೆ.

29 seconds ago

ಬಿಜೆಪಿ ಮುಖಂಡ ಜಿ. ದೇವರಾಜೇಗೌಡ 2 ದಿನ ಪೊಲೀಸ್ ಕಸ್ಟಡಿಗೆ

ಅತ್ಯಾಚಾರ ಪ್ರಕರಣದಡಿ ಬಂಧಿಸಲಾಗಿದ್ದ ವಕೀಲ, ಬಿಜೆಪಿ ಮುಖಂಡ ಜಿ. ದೇವರಾಜೇಗೌಡರನ್ನು ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಬೆಳಿಗ್ಗೆ ಹಾಸನ ಜಿಲ್ಲಾ ಬಂದಿಖಾನೆಯಿಂದ…

20 mins ago

ಭಾರತದಲ್ಲಿ ಮಾರುತಿ ಸುಜುಕಿ ಮೊದಲ ಇವಿ ಕಾರು ಬಿಡುಗಡೆ ಸುಳಿವು

ಮಾರುತಿ ಸುಜುಕಿ ಕಂಪನಿಯು ತನ್ನ ಮಾರಾಟ ಪ್ರಮಾಣವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಜ್ಜಾಗುತ್ತಿದ್ದು, ಶೀಘ್ರದಲ್ಲಿಯೇ ತನ್ನ ಬಹುನೀರಿಕ್ಷಿತ ಎಲೆಕ್ಟ್ರಿಕ್ ಕಾರು…

26 mins ago

ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣಗೆ ಜಾಮೀನು ಮಂಜೂರು, ಕೆಆರ್ ನಗರಕ್ಕೆ ತೆರಳದಂತೆ ನಿರ್ಬಂಧ

ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಗೆ ಬೆದರಿಕೆ ಹಾಕಿ ಅಪಹರಣ ಮಾಡಲು ಪ್ರಚೋದಿಸಿದ ಆರೋಪದ ಮೇಲೆ…

31 mins ago

ಶ್ರವಣಬೆಳಗೊಳಕ್ಕೆ ತಮಿಳುನಾಡು ರಾಜ್ಯಪಾಲರ ಭೇಟಿ

ತಮಿಳುನಾಡು ರಾಜ್ಯದ ರಾಜ್ಯ ಪಾಲರಾದ ರವೀಂದ್ರ ನಾರಾಯಣ ರವಿ ಹಾಗೂ ಅವರ ಪತ್ನಿ ಲಕ್ಷ್ಮಿರವರು ಶ್ರೀಕ್ಷೇತ್ರ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟಕ್ಕೆ…

42 mins ago

ಮೇ 18ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ

ಮೇ 18ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ ಐದು ದಿನಗಳ…

53 mins ago