Categories: ಮಂಗಳೂರು

ಬೇಜವಾಬ್ದಾರಿ ಪೊಲೀಸ್ ಠಾಣೆಯ ಅವಶ್ಯಕತೆಯಾದರೂ ಏನು-ಮಾಜಿ ಸಚಿವ ಬಿ.ರಮಾನಾಥ ರೈ

ಬಂಟ್ವಾಳ :  ಒಂದೂವರೆ ತಿಂಗಳು ಕಳೆದರೂ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡ ಯುವತಿ ಪ್ರಕರಣ ಆರೋಪಿಗಳ ತನಿಖೆಯನ್ನೇ ವಿಟ್ಲ ಪೊಲೀಸರು ಮಾಡಿಲ್ಲ. ಇದು ಖಂಡನೀಯ, ಇಂತಹ ಬೇಜವಾಬ್ದಾರಿ ಪೊಲೀಸ್ ಠಾಣೆಯ ಅವಶ್ಯಕತೆಯಾದರೂ ಏನು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಪ್ರಶ್ನಿಸಿದ್ದಾರೆ.

ವಿಟ್ಲಠಾಣಾ ವ್ಯಾಪ್ತಿಯ ವಿಟ್ಲಕಟ್ಟೆ ಎಂಬಲ್ಲಿ ಅ.೧೧ ರಂದು ವಿಟ್ಲಕಸಬಾ ಗ್ರಾಮದ ನೆತ್ರಕೆರೆ ನಿವಾಸಿ ಬಾಬು ನಾಯ್ಕ ಅವರ ಪುತ್ರಿ ನಿಶ್ಮಿತಾ(೨೨) ಅವರು ಡೆತ್‌ನೋಟಲ್ಲಿ ಮೂವರ ಹೆಸರು ಬರೆದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ತನಕವೂ ನೈಜ ಆರೋಪಿಗಳ ತನಿಖೆ ನಡೆಸದೇ ಇದ್ದು, ತೀರಾ ನಿರ್ಲಕ್ಷ್ಯ ವಹಿಸಿದ್ದಾರೆ. ಇಂತಹ ಬೇಜವಾಬ್ದಾರಿಯುತ ಪೊಲೀಸ್‌ಠಾಣೆ ಜನರಿಗೆ ಅವಶ್ಯಕತೆ ಇದೆಯೇ, ಇದನ್ನು ಕಾಂಗ್ರೆಸ್ ಖಂಡಿಸುತ್ತದೆ. ನೈಜ ಆರೋಪಿಗಳ ಮೇಲೆ ಯಾವುದೇ ಕಾನೂನು ಕ್ರಮ ಜರುಗುತ್ತಿಲ್ಲ, ಪೊಲೀಸರು ತೀರಾ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ ಎಂದು ಕರ್ನಾಟಕದ ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.

ಅವರು ವಿಟ್ಲ ನಿರೀಕ್ಷಣಾ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಸುಮಾರು ಒಂದೂವರೆ ತಿಂಗಳ ಹಿಂದೆ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಪ್ರಕರಣದಲ್ಲಿ ಆರೋಪಿಗಳೆಂದು ಗುರುತಿಸಲ್ಪಟ್ಟವರ ಮೇಲೆ ಪ್ರಕರಣ ದಾಖಲಾಗಿದೆಯೇ ಹೊರತು ಯಾವುದೇ ರೀತಿಯ ಸಮರ್ಪಕ ತನಿಖೆ, ವಿಚಾರಣೆ ನಡೆದಿಲ್ಲ. ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಪ್ರೇರಣೆಯಾದ ಆರೋಪಿಗಳನ್ನು ಪೊಲೀಸರು ರಾಜಕೀಯ ಒತ್ತಡದಿಂದ ಸರಿಯಾದ ವಿಚಾರಣೆಗೆ ಒಳಪಡಿಸಿಲ್ಲ ಎಂದು ಆರೋಪಿಸಿದರು.

ಮಂಗಳಪದವು ಎಂಬಲ್ಲಿ ಬ್ಯಾನರ್ ಹಾಕುವ ವಿಚಾರದಲ್ಲಿ ರಘ ಪೂಜಾರಿ ಎಂಬವರ ತೇಜೋವಧೆಗೆ ಪ್ರಯತ್ನಿಸಿದ್ದು, ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ, ಸೂರಿಕುಮೇರಿನಲ್ಲಿ ಇತ್ತೀಚೆಗೆ ನಡೆದ ಅಪಘಾತದ ವೇಳೆ ಪೊಲೀಸರ ಎದುರೇ ಕೋಮ ಸಂಘರ್ಷ ನಡೆದಿದ್ದರೂ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳದೇ ಪ್ರಕರಣಕ್ಕೆ ಸಂಬಂಧ ಪಡದ ಇಬ್ಬರನ್ನು ವಶಕ್ಕೆ ಪಡೆದಿರುವುದು ಪೊಲೀಸರ ಕಾರ್ಯದಕ್ಷತೆಯ ಬಗ್ಗೆ ಶಂಕೆ ಮಾಡುವಂತೆ ಮಾಡಿದೆ. ಅಪರಾಧಿಗಳಿಗೆ ಕಾನೂನುರೀತ್ಯಾ ಕ್ರಮ ನಡೆಯದೇ ಅಮಾಯಕರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ಜನರ ಅವಶ್ಯಕತೆ, ನ್ಯಾಯಕ್ಕಾಗಿ ಇರದ ಪೊಲೀಸ್‌ಠಾಣೆ ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ ಎಂದು ಆರೋಪಿಸಿದರು. ಸೂರಿಕುಮೇರಿನಲ್ಲಿ ನಡೆದ ಅಪಘಾತ ಪ್ರಕರಣದ ವೇಳೆ ಜಲೀಲ್ ಹತ್ಯೆ ಪ್ರಕರಣದ ಆರೋಪಿಗಳಿದ್ದರೂ ಅವರನ್ನು ವಿಚಾರಣೆಯನ್ನೇ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ  ಜಿ.ಪಂ. ನಿಕಟಪೂರ್ವ ಸದಸ್ಯ ಎಂ.ಎಸ್.ಮಹಮ್ಮದ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವಿಟ್ಲ ಸುದೀಪ್ ಕುಮಾರ್ ಶೆಟ್ಟಿ,ಕಾಂಗ್ರೆಸ್‌ ವಕ್ತಾರ ರಮಾನಾಥ ವಿಟ್ಲ, ನಗರ ಕಾಂಗ್ರೆಸ್ ಅಧ್ಯಕ್ಷ ವಿಕೆಎಂಅಶ್ರಫ್, ರಘು ಪೂಜಾರಿ, ನಿಶ್ಮಿತಾ ಅವರ ತಾಯಿ ಉಮಾವತಿ ಉಪಸ್ಥಿತರಿದ್ದರು.

Swathi MG

Recent Posts

ಜೆಡಿಎಸ್‌ ತೆನೆಹೊತ್ತ ಮಹಿಳೆ ಚಿಹ್ನೆ ಬದಲಿಸಲಿ : ಬಾಬುರಾವ್‌ ಪಾಸ್ವಾನ್‌

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮಗ ಎಚ್‌.ಡಿ.ರೇವಣ್ಣ, ಅವರ ಮೊಮ್ಮಗ ಪ್ರಜ್ವಲ್‌ ರೇವಣ್ಣನ ಕರ್ಮಕಾಂಡಗಳಿಂದ ರಾಜ್ಯದ ಮಾನ ಹರಾಜಾಗಿದೆ. ಸಾವಿರಾರು ಮಹಿಳೆಯರ…

12 mins ago

ಮರಾಠ ಸಮಾಜಕ್ಕೆ ಬಿಜೆಪಿ ಕೊಡುಗೆ ದೊಡ್ಡದಿದೆ : ಎಂ.ಜಿ. ಮುಳೆ

ಮರಾಠ ಸಮಾಜಕ್ಕೆ ಬಿಜೆಪಿ ಕೊಡುಗೆ ಬಹಳ ದೊಡ್ಡದಿದೆ' ಎಂದು ಮರಾಠ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ…

23 mins ago

ಬಿಪಿ-ಶುಗರ್ ರೋಗಿಗಳ ಅಡುಗೆಗೆ ಈ ಎಣ್ಣೆ ಉತ್ತಮ

ಭಾರತೀಯ ಅಡುಗೆಮನೆಗಳಲ್ಲಿ ಎಣ್ಣೆ ಅತ್ಯಗತ್ಯ. ಹೆಚ್ಚಿನ ಭಾರತೀಯ ಆಹಾರ ಉತ್ಪನ್ನಗಳಲ್ಲಿ ತೈಲವು ಪ್ರಮುಖ ಅಂಶವಾಗಿದೆ. ಹೀಗಾಗಿ ಎಷ್ಟೋ ಜನ ಬಳಸುವ…

29 mins ago

ಅಯೋದ್ಯೆಗೆ ಮೋದಿ ಬೇಟಿ : ರಾಮಲಲ್ಲಾನಿಗೆ ಸಾಷ್ಟಾಂಗ ನಮಸ್ಕಾರ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರ, ದೇಶಾದ್ಯಂತ ಸಾಲು ರ‍್ಯಾಲಿಗಳ ಭರಾಟೆಯ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ…

53 mins ago

ಇಂದು ಈ ರಾಶಿಯವರಿಗೆ ನಿರೀಕ್ಷೆ ತಕ್ಕ ಫಲ ದೊರಕಲಿದೆ

ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ. ಆಪ್ತ ವ್ಯಕ್ತಿಗಳಿಗೆ ಸಹಾಯ ಮಾಡುವಿರಿ. ಮನೆಯಲ್ಲಿ ಕಲಹಗಳಿಗೆ ಆಸ್ಪದ ಕೊಡಬೇಡಿ. ಆರೋಗ್ಯ ಪರಿಪೂರ್ಣವಾಗಿರಲಿದೆ.…

1 hour ago

ಮೈಸೂರು ಜಿಲ್ಲೆಯಲ್ಲಿ ಶೇ.75ರಷ್ಟು ಮಳೆ ಕೊರತೆ

ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿದ್ದು, ಬಿತ್ತನೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ವಾಡಿಕೆಯಷ್ಟು…

9 hours ago